ETV Bharat / state

ಕೋವಿಡ್ ಕಾರಣಕ್ಕೆ ಬೆಲೆ ಏರಿಕೆ ಆಗಿದೆ, ಪ್ರತಿಭಟಿಸುವಷ್ಟು ಏರಿಕೆ ಕಂಡಿಲ್ಲ.. ಶಾಸಕ ಸಿ ಟಿ ರವಿ

ಪ್ರತಿಭಟನೆ, ಚಳವಳಿ ಮಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ಪ್ರತಿಭಟನೆ ಮಾಡುವಷ್ಟರ ಮಟ್ಟಿಗೆ ಈಗ ಬೆಲೆ‌ ಏರಿಕೆ ಆಗಿಲ್ಲ. ಬೆಲೆ ಏರಿಕೆ ಕಾಂಗ್ರೆಸ್ ಅವಧಿಯಲ್ಲಿ ಇದ್ದಷ್ಟು ಸದ್ಯ ಇಲ್ಲ. ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರದ ಕಾರಣಕ್ಕಾಗಿ ಬೆಲೆ ಏರಿಕೆ ಆಗಿತ್ತು. ಜಗತ್ತೇ ಇಂದು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇದರ ಫಲ ಬೆಲೆ‌ ಏರಿಕೆಯಾಗಿದೆ. ಜಾಗತಿಕವಾಗಿ ಬೆಲೆ‌ ಏರಿಕೆ ಕೋವಿಡ್ ಕಾರಣಕ್ಕಾಗಿ ಆಗಿದೆ. ಬೆಲೆ ಏರಿಕೆ ತಾತ್ಕಾಲಿಕ ಸಮಸ್ಯೆ..

ಚಿಕ್ಕಮಗಳೂರಿನಲ್ಲಿ ಶಾಕ ಸಿಟಿ ರವಿ ಹೇಳಿಕೆ
ಚಿಕ್ಕಮಗಳೂರಿನಲ್ಲಿ ಶಾಕ ಸಿಟಿ ರವಿ ಹೇಳಿಕೆ
author img

By

Published : Sep 5, 2021, 4:38 PM IST

ಚಿಕ್ಕಮಗಳೂರು : ಭಾವನೆಗಳಲ್ಲಿ ಎಲ್ಲಾ ಕಡೆ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯಬೇಕು. ಕೋವಿಡ್ ಹೆಚ್ಚು ಕೇಸ್ ಇರೋ ಕಡೆ ನಿರ್ಬಂಧ ಹಾಕಲೇಬೇಕು. ಕೊರೊನಾ ಕಡಿಮೆ ಕೇಸ್ ಇರುವ ಕಡೆ ಅವಕಾಶ ಕೊಡಬೇಕು ಎಂದು ಶಾಸಕ ಸಿ ಟಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಶಾಕ ಸಿಟಿ ರವಿ ಹೇಳಿಕೆ

ನಗರದಲ್ಲಿ ಮಾತನಾಡಿದ ಅವರು, ಕೇಸ್‍ಗಳೇ ಇಲ್ಲದ ಜಿಲ್ಲೆಯಲ್ಲಿ ಮುಕ್ತವಾದ ಅವಕಾಶ ನೀಡಬೇಕು. ಮುಖ್ಯಮಂತ್ರಿ ಜೊತೆ ಮಾತನಾಡುವಾಗ ಹೇಳಿದ್ದೇನೆ. ಎಸ್ಒಪಿ ಪಾಲನೆ ಆಗಬೇಕು, ಕೇಸ್ ಇಲ್ಲದ ಜಿಲ್ಲೆಯಲ್ಲ ಕಠಿಣ ನಿರ್ಬಂಧದ ಅಗತ್ಯವಿಲ್ಲ. ಹೆಚ್ಚು ಕೇಸ್ ಇರುವ ಜಿಲ್ಲೆಗಳಲ್ಲಿ ನಿರ್ಬಂಧ ಹಾಕಿ. ಗಣೇಶೋತ್ಸವ ಭಾವನೆಗೆ ತಕ್ಕಂತೆ ನಡೆಯಲಿ ಎಂದು ಮನವಿ ಮಾಡಿದ್ದೇನೆ ಎಂದರು.

ನಾನಂತೂ ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ. ನನ್ನ ಕಾಲದಲ್ಲಿ ಕೊತ್ವಾಲ್ ರಾಮಚಂದ್ರ ಬದುಕೇ ಇರಲಿಲ್ಲ. ಕೊತ್ವಾಲ್ ರಾಮಚಂದ್ರ ತೀರಿಕೊಂಡಾಗ ನಾನು ಪ್ರೈಮರಿ ಸ್ಕೂಲ್ ನಲ್ಲಿ ಓದುತ್ತಿದ್ದೆ ಅನ್ಸುತ್ತೆ. ಯಾವುದೋ ಒಂದು ಪುಸ್ತಕದಲ್ಲಿ ಯಾರ್ಯಾರು ಯಾರ್ಯಾರ ಶಿಷ್ಯರು ಅಂತಾ ಉಲ್ಲೇಖ ಮಾಡಿದ್ದಾರೆ. ನಾನು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಲ್ಲ. ಹೋರಾಟ ಮಾಡಿ ನಾನು ಜೈಲಿಗೆ ಹೋದವನು, ನನ್ನ ಮೇಲೆ ಸಾಕಷ್ಟು ಕೇಸ್ ಇವೆ ಎಂದು ಡಿಕೆಶಿ ಮಾತಿಗೆ ಸಿ ಟಿ ರವಿ ತಿರುಗೇಟು ನೀಡಿದರು.

ತೈಲ ಬೆಲೆ ಏರಿಕೆ ವಿಚಾರ ಮಾತನಾಡಿ, ಪ್ರತಿಭಟನೆ, ಚಳವಳಿ ಮಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ಪ್ರತಿಭಟನೆ ಮಾಡುವಷ್ಟರ ಮಟ್ಟಿಗೆ ಈಗ ಬೆಲೆ‌ ಏರಿಕೆ ಆಗಿಲ್ಲ. ಬೆಲೆ ಏರಿಕೆ ಕಾಂಗ್ರೆಸ್ ಅವಧಿಯಲ್ಲಿ ಇದ್ದಷ್ಟು ಸದ್ಯ ಇಲ್ಲ. ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರದ ಕಾರಣಕ್ಕಾಗಿ ಬೆಲೆ ಏರಿಕೆ ಆಗಿತ್ತು. ಜಗತ್ತೇ ಇಂದು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇದರ ಫಲ ಬೆಲೆ‌ ಏರಿಕೆಯಾಗಿದೆ. ಜಾಗತಿಕವಾಗಿ ಬೆಲೆ‌ ಏರಿಕೆ ಕೋವಿಡ್ ಕಾರಣಕ್ಕಾಗಿ ಆಗಿದೆ. ಬೆಲೆ ಏರಿಕೆ ತಾತ್ಕಾಲಿಕ ಸಮಸ್ಯೆ, ಇದು ಬಗೆಹರಿಯುವ ವಿಶ್ವಾಸವಿದೆ. ಭ್ರಷ್ಟಾಚಾರ ಮಾಡುವ ಸರ್ಕಾರ ಈಗಿಲ್ಲ ಎಂದರು.

ಇದನ್ನೂ ಓದಿ : ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.