ETV Bharat / state

ನಮ್ಮನ್ನು ಪರೀಕ್ಷಿಸಿಕೊಳ್ಳಲು ರಾಜ್ಯಸಭೆಗೆ 3ನೇ ಅಭ್ಯರ್ಥಿ: ಸಿ.ಟಿ. ರವಿ - ಶಾಸಕ ಸಿ ಟಿ ರವಿ ಹೇಳಿಕೆ

ರಾಜ್ಯಸಭೆ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನಿಸಲಾಗುವುದು. ವಿಪಕ್ಷದವರು ಮಾತು ಕೊಟ್ಟಂತೆ ನಡೆದುಕೊಂಡರೆ ಬಿಜೆಪಿ ಮೂರನೇ ಅಭ್ಯರ್ಥಿಯು ವಿಜಯ ಸಾಧಿಸಲಿದ್ದಾರೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.

mla-c-t-ravi
ಸಿ.ಟಿ. ರವಿ
author img

By

Published : May 31, 2022, 10:56 PM IST

ಚಿಕ್ಕಮಗಳೂರು: ಜೂನ್​ 10 ರಂದು ರಾಜ್ಯದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಇಬ್ಬರು ಅಭ್ಯರ್ಥಿಗಳ ಗೆಲುವಿಗೆ ಬೇಕಾದ ಮತಗಳ ನಂತರವೂ 32 ಮತಗಳು ಉಳಿಯಲಿವೆ. ಇವುಗಳಿಂದ ನಾವು ಮೂರನೇ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಳ್ಳಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೆಚ್ಚುವರಿ 32 ಮತಗಳಿವೆ. ಚುನಾವಣೆಯಲ್ಲಿ ನಂಬರ್ ಗೇಮ್ ಬರಬಹುದು, ಬರದೇ ಇರಬಹುದು. ನಾವು ನಮ್ಮನ್ನ ಪರೀಕ್ಷೆ ಮಾಡಿಕೊಳ್ಳೋಕೆ ಮತ್ತು ವಿಪಕ್ಷಗಳು ಮಾತು ಕೊಟ್ಟಂತೆ ನಡೆದುಕೊಳ್ತಾರಾ, ಇಲ್ವ ಅಂತ ಪರೀಕ್ಷಿಸೋಕೆ ಮೂರನೇ ಅಭ್ಯರ್ಥಿ ಹಾಕಲಾಗಿದೆ ಎಂದರು.

ಸಿದ್ದು ವಿರುದ್ಧ ಟೀಕೆ: ಟಿಪ್ಪು, ಬಾಬರ್, ಘಜನಿ, ಘೋರಿ, ಮೊಘಲ್‍ರನ್ನು ಟೀಕೆ ಮಾಡಿದರೆ ಸಿದ್ದರಾಮಯ್ಯ ಅವರು ಏಕೆ ಎದೆ ಬಡಿದುಕೊಳ್ತಾರೆ. ಇವರು ಯಾಕೆ ಉರಿ ಹತ್ತಿದಂತೆ ಆಡುತ್ತಾರೆ. ಆರ್​ಎಸ್​ಎಸ್​ಗೂ, ನಮಗೂ ವೈಚಾರಿಕ ಸಂಬಂಧವಿದೆ. ಸಂಘಟನೆಯಿಂದ ಪ್ರೇರಣೆಯಾಗಿದ್ದೇವೆ. ಇವರಿಗೆ ಟಿಪ್ಪು, ಬಾಬರ್, ಔರಂಗಜೇಬ್, ಘಜನಿ ಜೊತೆ ಯಾವ ಸಂಬಂಧವಿದೆ ಎಂದು ಮೊದಲು ಹೇಳಲಿ ಎಂದು ಸವಾಲು ಹಾಕಿದರು.

ಟಿಪ್ಪು ಕಳ್ಳ, ಕನ್ನಡ ವಿರೋಧಿ, ಅತ್ಯಾಚಾರಿ ಅಂದ್ರೆ ಇವರೇಕೆ ಮುಖ ಒರೆಸಿಕೊಳ್ತಾರೆ. ಇವರಿಗೂ ಟಿಪ್ಪು, ಔರಂಗಜೇಬನಿಗೂ ಏನು ಸಂಬಂಧ. ಇವರ ವೈಚಾರಿಕ ಸಂಬಂಧ ಬಾಬರ್, ಘಜನಿ, ಘೋರಿ, ಟಿಪ್ಪು ಜೊತೆ ಇದೆಯಾ?. ನಮಗೆ ಬಸವಣ್ಣ, ನಾರಾಯಣಗುರು, ವಿವೇಕಾನಂದ, ರಾಮ, ಕೃಷ್ಣ, ಕನಕದಾಸರ ಜೊತೆ ಸಾಂಸ್ಕೃತಿ ಸಂಬಂಧವಿದೆ ಎಂದು ತಿವಿದರು.

ಓದಿ: 'ಸುಳ್ಳು ಹೇಳಬಾರದು' ಪಠ್ಯದಿಂದ ಕಿತ್ತುಹಾಕಿ: ಸಾಹಿತಿ ಬೊಳುವಾರು ಮಹಮದ್ ಕುಂಞಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.