ETV Bharat / state

ಆ ರೀತಿ ಏಕ ವಚನದಲ್ಲಿ ಮಾತನಾಡುವುದಿಲ್ಲ: ಹೆಚ್​ಡಿಕೆಗೆ ಸಚಿವ ನಾರಾಯಣಗೌಡ ಟಾಂಗ್

ಕೆ.ಆರ್.ಎಸ್ ನಲ್ಲಿ ಯಾವುದೇ ಬಿರುಕು ಕೂಡ ಬಿಟ್ಟಿಲ್ಲ. ಅಲ್ಲಿ ಹಳೆಯ ಕೆಲಸಗಳು ನಡೆಯುತ್ತಿವೆ ಎಂದು ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.

ಹೆಚ್​ಡಿಕೆಗೆ ಸಚಿವ ನಾರಾಯಣಗೌಡ ಟಾಂಗ್
ಹೆಚ್​ಡಿಕೆಗೆ ಸಚಿವ ನಾರಾಯಣಗೌಡ ಟಾಂಗ್
author img

By

Published : Jul 5, 2021, 11:40 PM IST

Updated : Jul 6, 2021, 7:03 AM IST

ಚಿಕ್ಕಮಗಳೂರು: ನಾವು ಆ ರೀತಿ ಏಕ ವಚನದಲ್ಲಿ ಮಾತನಾಡುವುದಿಲ್ಲ, ನಮಗೆ ಅದು ಶೋಭೆ ತರಲ್ಲ ಎಂದು ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿಗೆ ಸಚಿವ ನಾರಾಯಣ ಗೌಡ ಟಾಂಗ್ ನೀಡಿದ್ದಾರೆ.

ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ, ವಸತಿ ನಿಲಯ ಪರಿಶೀಲನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲು ಜಿಲ್ಲೆಗೆ ಆಗಮಿಸಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಸಚಿವ ನಾರಾಯಣಗೌಡ ಪ್ರತಿಕ್ರಿಯಿಸಿದರು. (KRS ರಕ್ಷಣೆಗೆ ಅವ್ರನ್ನೇ ಮಲಗಿಸಬೇಕೆಂದ ಹೆಚ್​ಡಿಕೆ..ಭಾಷೆ ಮೇಲೆ ಹಿಡಿತ ಇಲ್ವಾ ಎಂದು ಕುಟುಕಿದ ಸಂಸದೆ ಸುಮಲತಾ)

ಕೆ.ಆರ್.ಎಸ್ ನಲ್ಲಿ ಯಾವುದೇ ಬಿರುಕು ಕೂಡ ಬಿಟ್ಟಿಲ್ಲ. ಅಲ್ಲಿ ಹಳೆಯ ಕೆಲಸಗಳು ನಡೆಯುತ್ತಿವೆ. ಈಗ ಅಲ್ಲಿ ನಡೆಯುತ್ತಿರುವ ಕೆಲಸಗಳು ಅಂದ್ರೆ, ಟೂಬು ಮತ್ತೆ ನೀರೆತ್ತುವ ಕಾಮಗಾರಿಗಳು ನಡೆಯುತ್ತಿವೆ. ನಾವು ಚೀಫ್ ಇಂಜಿನಿಯರ್ ಹಾಗೂ ತಜ್ಞರ ಕರೆಸಿ ಮಾತನಾಡಿದ್ದೇವೆ. ಆ ರೀತಿ ಯಾವುದೇ ಬಿರುಕು ಬಿಟ್ಟಿಲ್ಲ ಎಂದು ಹೇಳಿದರು.

ಕೆ.ಆರ್.ಎಸ್. ಅಣೆಕಟ್ಟು ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಂಡ್ಯ ಸಂಸದೆ ಸುಮಲತಾರನ್ನ ಅಡ್ಡ ಮಲಗಿಸಿ ಎಂಬ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಓದಿ: ಗೋಮಾಂಸ ಮಾರಾಟಕ್ಕೆ ಯತ್ನ: ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

Last Updated : Jul 6, 2021, 7:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.