ETV Bharat / state

ಕನಸು ಕಾಣುವ ಹಕ್ಕು ಎಲ್ರಿಗೂ ಇದೆ.. ಆದ್ರೆ, ಕಾಂಗ್ರೆಸ್ ನಾಯಕರ​ ಕನಸು ನನಸಾಗಲ್ಲ : ಸಚಿವ ಕೋಟ - ಕಾಂಗ್ರೆಸ್ ನಾಯಕರ​ ಕನಸು ನನಸಾಗಲ್ಲ

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ವಿಚಾರ ಚರ್ಚೆಯಲ್ಲಿದೆ. ದತ್ತಪೀಠ ಸಂಬಂಧ ವಾದ-ವಿವಾದ ಮುಗಿದು ಅಂತಿಮ ತೀರ್ಪು ಬಾಕಿ ಎಂಬ ಸುದ್ದಿ ಇದೆ. ಕೋರ್ಟ್ ತೀರ್ಪಿನ ಬಳಿಕ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ..

minister kota shrinivasa poojary
ಸಚಿವ ಕೋಟ ಶ್ರೀನಿವಾಸ ಪೂಜಾರಿ
author img

By

Published : Aug 18, 2021, 3:36 PM IST

ಚಿಕ್ಕಮಗಳೂರು : ಕನಸು ಕಾಣುವ ಹಕ್ಕು ಎಲ್ಲರಿಗೂ ಇದೆ. ಯಾವುದೇ ಕನಸು ಕಾಣುವುದು ಅಥವಾ ಕನಸು ಕಂಡರೆ ಅದು ತಪ್ಪಲ್ಲ. ಆದ್ರೆ, ಕಾಂಗ್ರೆಸ್​ನವರ ಕನಸು ನನಸಾಗಲ್ಲ. ಬಿಜೆಪಿ ಸರ್ಕಾರ ಸುಭದ್ರ ಹಾಗೂ ಸ್ಥಿರವಾಗಿರುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್​ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ವಿರುದ್ಧ ಸಚಿವ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯ

6 ತಿಂಗಲ್ಲಿ ಸರ್ಕಾರ ಬೀಳುತ್ತದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಚಿವ ಶ್ರೀನಿವಾಸ ಪೂಜಾರಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವ್ಯಕ್ತಿ, ಶಕ್ತಿ, ಪಾರ್ಟಿ, ಸಂಸ್ಥೆ ಯಾವುದೂ ಮುಖ್ಯವಲ್ಲ. ದೇಶದ ಸಂವಿಧಾನ, ರಾಷ್ಟ್ರ ದ್ವಜಕ್ಕೆ ಅಗೌರವ ಸಹಿಸಲ್ಲ. ರಾಷ್ಟ್ರಧ್ವಜ ಹೊತ್ತ ರಥ ತಡೆಯೋದನ್ನು ಸಹಿಸಲ್ಲ. ನಮ್ಮ ಸರ್ಕಾರ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಇದನ್ನೂ ಓದಿ: CAA ವಿರೋಧಿಸುವವರು ಅಫ್ಘಾನಿಸ್ತಾನದ​ ಸ್ಥಿತಿ ನೋಡಿ ತಿಳಿದುಕೊಳ್ಳಲಿ: ಸಂಸದ ಪ್ರತಾಪ್ ಸಿಂಹ

ನಂತರ ದತ್ತಪೀಠ ವಿಚಾರವಾಗಿ ಮಾತನಾಡಿ, ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ವಿಚಾರ ಚರ್ಚೆಯಲ್ಲಿದೆ. ದತ್ತಪೀಠ ಸಂಬಂಧ ವಾದ-ವಿವಾದ ಮುಗಿದು ಅಂತಿಮ ತೀರ್ಪು ಬಾಕಿ ಎಂಬ ಸುದ್ದಿ ಇದೆ. ಕೋರ್ಟ್ ತೀರ್ಪಿನ ಬಳಿಕ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆಯೆಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.