ಚಿಕ್ಕಮಗಳೂರು: ಬಹಳ ದಿನಗಳಿಂದ ಡ್ರಗ್ಸ್ ದಂಧೆಯ ಸೈಡ್ ಆ್ಯಕ್ಟರ್ಗಳು ಸಿಗುತ್ತಿದ್ದರು. ಈಗ ಮೇನ್ ಆ್ಯಕ್ಟರ್ ಸಿಗುತ್ತಾರಾ ಕಾದು ನೋಡಬೇಕು ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದ ಡ್ರಗ್ಸ್ ಜಾಲದ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಬಹಳ ದಿನಗಳಿಂದ ಈ ದಂಧೆಯ ಸೈಡ್ ಆ್ಯಕ್ಟರ್ಗಳು ಸಿಗುತ್ತಿದ್ದರು. ಈಗ ಮೇನ್ ಆ್ಯಕ್ಟರ್ ಸಿಗುತ್ತಾರಾ ಕಾದು ನೋಡಬೇಕು. ಇದು ವ್ಯವಸ್ಥಿತವಾದ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಜಾಲವಾಗಿದೆ ಎಂದಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಜಾಲದಲ್ಲಿ ಯಾರಿದ್ದಾರೆ, ವ್ಯಾಪಾರ ಯಾರದು ಎಂಬುದು ತನಿಖೆಯ ನಂತರ ಹೊರಬರಲಿದೆ. ಇಂದ್ರಜಿತ್ ಲಂಕೇಶ್ ಅವರಿಗೆ ರಕ್ಷಣೆ ಇದ್ದೇ ಇರುತ್ತದೆ. ಅವರು ತನಿಖೆಗೆ ಸಹಕಾರ ನೀಡಬೇಕು. ಅವರಿಗೆ ಯಾರ ಬಗ್ಗೆಯೂ ಭಯ ಬೇಡ. ಪೊಲೀಸ್ ಇಲಾಖೆ ಅವರಿಗೆ ಸೂಕ್ತ ರಕ್ಷಣೆಯನ್ನು ನೀಡುತ್ತದೆ. ಈ ಜಾಲವನ್ನು ಬಗ್ಗು ಬಡಿಯಲು ಹಾಗೂ ಮತ್ತಷ್ಟು ಜನ ಈ ಜಾಲದಲ್ಲಿ ಬಲಿಯಾಗದಿರಲು ಅವರ ಸಹಕಾರ ಅಗತ್ಯವಿದೆ ಎಂದಿದ್ದಾರೆ.