ಚಿಕ್ಕಮಗಳೂರು: ಕೆರೆ ನೀರಿಗೆ ವಿಷ ಹಾಕಿ ರಾಶಿ ರಾಶಿ ಮೀನುಗಳ ಮಾರಣಹೋಮ ನಡೆಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ವೈ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ತಮ್ಮಯ್ಯ ಎಂಬುವರು ಸಾಕಿದ್ದ ಮೀನುಗಳ ಮಾರಣಹೋಮ ನಡೆಸಲಾಗಿದೆ. ಕಿಡಿಗೇಡಿಗಳ ಕ್ರೌರ್ಯಕ್ಕೆ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದು, ಕೆರೆಯಲ್ಲಿ ಮೀನುಗಳು ತೇಲುತ್ತಿರುವುದನ್ನು ಕಂಡು ತಮ್ಮಯ್ಯ ಕಣ್ಣೀರು ಹಾಕಿದ್ದಾರೆ.
75 ಸಾವಿರ ರೂಪಾಯಿಗಳಿಗೆ ಕೆರೆಯಲ್ಲಿ ಮೀನುಗಳನ್ನು ಸಾಕಲು ನಾನು ಟೆಂಡರ್ ಪಡೆದಿದ್ದು, ಕೆರೆಯಲ್ಲಿ ಮೀನುಗಳ ಸಾಕಣೆ ಮಾಡುತ್ತಿದ್ದೆ. ಆದರೆ ಯಾರೋ ಕಿಡಿಗೇಡಿಗಳು ಕೆರೆ ನೀರಿನಲ್ಲಿ ವಿಷ ಬೆರೆಸಿ ಮೀನುಗಳನ್ನು ಸಾಯುವಂತೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಿ ಎಂದು ಕೆರೆ ಬಳಿ ನಿಂತು ತಮ್ಮಯ್ಯ ಕಣ್ಣೀರು ಹಾಕಿದ್ದಾರೆ.
ಈ ಕುರಿತು ಕಡೂರು ತಾಲೂಕಿನ ಸಿಂಗಟಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮೀನುಗಳಿಗೂ ಉಂಟು ವಿಶೇಷ ಸ್ಥಾನ!