ಚಿಕ್ಕಮಗಳೂರು: ಸಭೆಯಲ್ಲಿ ಉಡಾಫೆ ಉತ್ತರ ನೀಡಿದ ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ರನ್ನು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೊರ ಕಳುಹಿಸಿರುವ ಘಟನೆ ಇಂದು ನಡೆದಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೈಗಾರಿಕಾ ಹಾಗೂ ಮೆಸ್ಕಾಂ ಸಂಬಂಧ ಸಭೆ ನಡೆಯುತ್ತಿತ್ತು. ಈ ವೇಳೆ ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಶಿವಕುಮಾರ್ ಮೇಲೆ ಡಿಸಿ ಬಗಾದಿ ಗೌತಮ್ ಕೆಂಡಾಮಂಡಲರಾಗಿದ್ದಾರೆ. ಮೆಸ್ಕಾಂನಲ್ಲಿ ಕೆಲಸಕ್ಕೆ ಕುರಿತಂತೆ ಫಾಲೋಅಪ್ ಬಗ್ಗೆ ವಿಚಾರಿಸುತ್ತಿದ್ದ ವೇಳೆ ನಾನು ಆ ಕೆಲಸ ಏಕೆ ಮಾಡಬೇಕು ಎಂದು ಉಡಾಫೆ ಉತ್ತರ ಕೊಟ್ಟರಂತೆ.
ಇದರಿಂದ ಕೋಪಗೊಂಡ ಡಿಸಿ, ಶಿವಕುಮಾರ್ ಅವರನ್ನು ಸಭೆಯಿಂದ ಹೊರ ಕಳುಹಿಸಿದ್ದಾರೆ. ಉಡಾಫೆ ಉತ್ತರ ನೀಡಿದ ಇಇ ವಿರುದ್ಧ ಮೆಸ್ಕಾಂ ಎಂಡಿ ಹಾಗೂ ಸರ್ಕಾರಕ್ಕೆ ವರದಿ ಕೊಡುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.