ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಕಾಡು ಹಂದಿ ದಾಳಿಗೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನ ಹಳ್ಳಿಯಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ಕೆಂಚಪ್ಪ (60) ಮೃತಪಟ್ಟ ವ್ಯಕ್ತಿ. ತೋಟದಲ್ಲಿ ಹಸು ಹುಡುಕಲು ಹೋದಾಗ ತೋಟದಲ್ಲಿಯೇ ಇದ್ದ ಕಾಡು ಹಂದಿ ದಾಳಿ ಮಾಡಿದ್ದು, ಕೆಂಚಪ್ಪ ಸ್ಥಳದಲ್ಲಿಯೇ ಕೊನೆಯುಸಿರು ಎಳೆದಿದ್ದಾನೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.