ETV Bharat / state

20 ವರ್ಷ ಗತಿಸಿದರೂ ಸಾಕಾರಗೊಳ್ಳದ ಏತ ನೀರಾವರಿ ಯೋಜನೆ! - kannada news

ನೀರಿಗಾಗಿ ಹೋರಾಟ ನಡೆಸಿ ಏತ ನೀರಾವರಿ ಯೋಜನೆಯನ್ನ ಜಾರಿಗೆ ತಂದರು. ಯೋಜನೆ ಶುರುವಾಗಿ 3 ದಶಕಗಳು ಕಳೆದರೂ ನೀರು ನೀಡೋಕೆ ಸರ್ಕಾರ ಮುಂದಾಗುತ್ತಿಲ್ಲ. ನೀರು ಬರೋ ಖುಷಿಯಲ್ಲಿ ಜಮೀನು ನೀಡಿದವರಿಗೆ ಪರಿಹಾರವೂ ಸಿಕ್ಕಿಲ್ಲ. ನೀರೂ ಇಲ್ಲ, ಭೂಮಿಯು ಇಲ್ಲ ಎನ್ನು ಸ್ಥಿತಿ ರೈತರದ್ದಾಗಿದೆ.

ನೆನೆಗುದಿಗೆ ಬಿದ್ದ ಏತ ನೀರಾವರಿ ಯೋಜನೆ
author img

By

Published : Jun 4, 2019, 9:20 AM IST

ಚಿಕ್ಕಮಗಳೂರು: ನೀರಿಗಾಗಿ ಹೋರಾಟ ನಡೆಸಿ ಏತ ನೀರಾವರಿ ಯೋಜನೆಯನ್ನ ಜಾರಿಗೆ ತಂದರು. ಯೋಜನೆ ಶುರುವಾಗಿ 3 ದಶಕಗಳು ಕಳೆದರೂ ನೀರು ನೀಡೋಕೆ ಸರ್ಕಾರ ಮುಂದಾಗುತ್ತಿಲ್ಲ. ನೀರು ಬರೋ ಖುಷಿಯಲ್ಲಿ ಜಮೀನು ನೀಡಿದವರಿಗೆ ಪರಿಹಾರವೂ ಸಿಕ್ಕಿಲ್ಲ. ನೀರೂ ಇಲ್ಲ, ಭೂಮಿಯು ಇಲ್ಲ ಎನ್ನು ಸ್ಥಿತಿ ರೈತರದ್ದಾಗಿದೆ.

ಜಿಲ್ಲೆಯ ಮಳಲೂರು ಗ್ರಾಮದ ಸುತ್ತಮುತ್ತಲ ಗ್ರಾಮಗಳ ಜನರ ಜಮೀನುಗಳಿಗೆ ನೀರು ಒದಗಿಸುವ ಸದುದ್ದೇಶದಿಂದ 1998ರಲ್ಲಿ ಸರ್ಕಾರ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದಿತು. ಈಗ 18 ವರ್ಷಗಳೇ ಗತಿಸಿದ್ದು ಯೋಜನೆ ನನೆಗುದಿಗೆ ಬಿದ್ದಿದೆ. ನೀರು ಹರಿಸಿ ಸುತ್ತಲ ರೈತರ ಬದುಕನ್ನು ಹಸನ ಮಾಡುವ ಕನಸು ನನಸಾಗಿಯೇ ಉಳಿದಿದೆ.

ನನೆಗುದಿಗೆ ಬಿದ್ದ ಏತ ನೀರಾವರಿ ಯೋಜನೆ

1998ರಲ್ಲಿ ಆರಂಭವಾದ ಈ ಯೋಜನೆಯನ್ನು ಸುಮಾರು 1200 ಎಕರೆ ಪ್ರದೇಶಕ್ಕೆ ನೀರೊದಗಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಜಾಕ್​ವೆಲ್​, ಇಂಟೆಕ್​ವೆಲ್​, ಪೈಪ್​ಗಳ ಅಳವಡಿಕೆ ಮುಕ್ತಾಯವಾಗಿದ್ದು, 2ನೇ ಹಂತದ ಪಂಪ್​​ ಅಳವಡಿಕೆ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಅಲ್ಲದೆ ಯೋಜನೆಗಾಗಿ ರೈತರ ಕೃಷಿ ಜಮೀನುಗಳನ್ನು ವಶಪಡಿಸಿಕೊಂಡು ಕೆಲ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ ಎನ್ನಲಾಗಿದೆ. ಇದರ ಜೊತೆಗೆ ಇನ್ನು ಉಳಿದಿರುವ 19 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಡಳಿತ ಸರ್ಕಾರಕ್ಕೆ ಅನುಮತಿ ಪತ್ರ ಬರೆದಿದ್ದು, ಸರ್ಕಾರ ಮಾತ್ರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.

ಈ ಏತ ನೀರಾವರಿಗೆ ಕಳೆದ ಹಲವು ವರ್ಷದಿಂದ ಜನ ಒತ್ತಡ ಹೇರಿದರೂ, ಧರಣಿ ಮಾಡಿದರೂ ರೈತರ ಹೋರಾಟಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಯೋಜನೆಯ ಸುತ್ತಲು ಕೋಟಿ ರೂಪಾಯಿ ಬೆಳೆ ಬಾಳುವ ಸಲಕರಣೆಗಳನ್ನು ಹಾಕಲಾಗಿದೆ. ಹಾಕಿರುವ ಪೈಪ್​ಗಳು ಹಾಳಾಗಿ ಹೋಗುತ್ತಿವೆ. ಸಾವಿರಾರು ಎಕರೆ ಪ್ರದೇಶ ಭೂಮಿಯನ್ನು ಹಸಿರಾಗಿಸುವ ಏತ ನೀರಾವರಿ ಯೋಜನೆ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ನನೆಗುದಿಗೆ ಬಿದ್ದಿದೆ.

Intro:R_Kn_Ckm_01_03_Malaluru water project_Rajkumar_Ckm_pkg_7202347Body:

ಚಿಕ್ಕಮಗಳೂರು :-

ನೀರಿಗಾಗಿ ಹೋರಾಟ ನಡೆಸಿ ಏತ ನೀರಾವರಿ ಯೋಜನೆಯನ್ನ ಜಾರಿಗೆ ತಂದರು. ಯೋಜನೆ ಶುರುವಾಗಿ 3 ದಶಕಗಳು ಕಳೆಯುತ್ತಿದ್ದರೂ ಮಾತ್ರ ನೀರು ನೀಡೋಕೆ ಸರ್ಕಾರ ಮುಂದಾಗುತ್ತಿಲ್ಲ. ನೀರು ಬರೋ ಖುಷಿಯಲ್ಲಿ ಜಮೀನು ನೀಡಿದವರಿಗೆ ಪರಿಹಾರವೂ ಇತ್ತ ಇಲ್ಲದಂತಾಗಿದೆ. ನೀರು ಇಲ್ಲ ಎನ್ನುವ ದುಸ್ಥಿತಿ ರೈತರಿಗಾಗಿದ್ದು, ಕಳೆದ 18 ವರ್ಷದಿಂದ ಈ ಯೋಜನೆ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ. ನೀರು ಹರಿಸಿ ಸುತ್ತಲ ರೈತರ ಬದುಕನ್ನು ಹಸನ ಮಾಡುವ ಕನಸು ನನಸಾಗಿಯೇ ಉಳಿದಿದೆ.ಈ ಕುರಿತ ಒಂದು ವರದಿ ಇಲ್ಲಿದೇ ನೋಡಿ.......

ಹೌದು ಪಾಳು ಬಿದ್ದಂತಾಗಿರುವ ಮನೆ, ತುಕ್ಕು ಹಿಡಿದಿರುವ ಎಲೆಕ್ಟ್ರಿಕ್ ವಸ್ತುಗಳು, ಫೈಪ್ ನಿಂದ ಹೊರ ಹೋಗುತ್ತಾ ಇರುವ ನೀರು.ಇದು ಚಿಕ್ಕಮಗಳೂರು ತಾಲೂಕಿನ ಪ್ರಮುಖ ಯೋಜನೆಯಲ್ಲಿ ಒಂದಾದ ಮಳಲೂರು ಏತ ನೀರಾವರಿ ಯೋಜನೆ. ಚಿಕ್ಕಮಗಳೂರು ತಾಲೂಕಿನ ಮಳಲೂರು ಗ್ರಾಮದ ಸಮೀಪ ಸುತ್ತ ಮುತ್ತಲ್ಲ ಗ್ರಾಮದ ಜನರು ಜಮೀನುಗಳಿಗೆ ನೀರು ಒದಗಿಸುವ ಯೋಜನೆಯಿದು. 1998 ರಲ್ಲಿ ಆರಂಭವಾದ ಈ ಯೋಜನೆ ಮಳಲೂರು ಸುತ್ತ ಮುತ್ತಲಿನ ಸುಮಾರು 1200 ಎಕರೆ ಪ್ರದೇಶಕ್ಕೆ ನೀರೋದಗಿಸುವ ಏತ ನೀರಾವರಿ ಪೂರ್ಣಗೊಳ್ಳುವ ಯಾವುದೇ ಅದೃಷ್ಟ ಮಾತ್ರ ಕೂಡಿ ಬಂದಿಲ್ಲ. ಮೊದಲ ಹಂತದಲ್ಲಿ ಜಾಕ್ವೆಲ್, ಇಂಟೆಕ್ವೆಲ್, ಪೈಪ್ಗಳ ಅಳವಡಿಕೆ ಮುಕ್ತಾಯವಾಗಿದೆ. 2ನೇ ಹಂತದ ಪಂಪ ಅಳವಡಿಕೆ , ವಿದ್ಯುತ್ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಈ ಯೋಜನೆಗಾಗಿ ಇಲ್ಲಿನ ರೈತರು ಕೃಷಿ ಜಮೀನುಗಳನ್ನು ನೀಡಿದ್ದಾರೆ. ಆದರೇ ಕೆಲ ರೈತರಿಗೆ ಪರಿಹಾರ ನೀಡಿ ಇನ್ನೂ ಹಲವರಿಗೆ ಪರಿಹಾರ ನೀಡಿಲ್ಲ. ಇದರ ಜೊತೆಗೆ ಇನ್ನು ಉಳಿದಿರುವ 19 ಎಕರೇ ಭೂಮಿಯನ್ನು ಸ್ವಾಧೀನಾ ಪಡಿಸಿಕೊಳ್ಳಲು ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ ಬರೆದಿದೆ. ಆದರೇ ಸರ್ಕಾರ ಮಾತ್ರ 4 ತಿಂಗಳು ಕಳೆದರೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಈ ಏತ ನೀರಾವರಿಗೆ ಕಳೆದ ಹಲವು ವರ್ಷದಿಂದ ಜನ ಒತ್ತಡ ಹೇರಿದರೂ, ಧರಣಿ ಮಾಡಿದರೂ. ರೈತರ ಹೋರಾಟಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಯೋಜನೆಯ ಸುತ್ತಲು ಕೋಟಿ ರೂಪಾಯಿ ಬೆಳೆ ಬಾಳುವ ಸಲಕರಣೆಗಳನ್ನು ಹಾಕಲಾಗಿದೆ. ಹಾಕಿರು ಪೈಪ್ ಗಳು,ಹಾಳಾಗಿ ಹೋಗುತ್ತಿವೆ. ಸಾವಿರಾರೂ ಎಕರೆ ಪ್ರದೇಶ ಭೂಮಿಯನ್ನು ಹಸಿರಾಗಿಸುವ ಏತ ನೀರಾವರಿ ಯೋಜನೆ ಜಿಲ್ಲೆಯ ಜನಪ್ರತಿನಿಧಿಗಳ ನಿಲ೯ಕ್ಷ ಧೋರಣೆಯಿಂದ ನೆನೆಗುದಿಗೆ ಬಿದ್ದಿದೆ. ಈ ಭಾಗದ ರೈತರಗೆ ಅನ್ನ ನೀಡಿ ಆದಾಯ ಹೆಚ್ಚಿಸುವ ಈ ಯೋಜನೆಗೆ ಇನ್ನು ಎಷ್ಟು ದಿನ ಕಾಯಬೇಕು ಎನ್ನುವುದು ಇಲ್ಲಿನ ರೈತರು ಕೇಳುವ ಪ್ರಶ್ನೆಯಾಗಿದೆ.

ಒಟ್ಟಾರೆಯಾಗಿ ನೀರು ಬರುತ್ತೇ ಅಂತಾ ರೈತರು ಜಮೀನು ನೀಡಿದ್ದಾರೆ. 3 ದಶಕ ಕಳೆದರು ನೀರು ಬರಲಿಲ್ಲ ಕಾಮಗಾರಿಯು ಪೂರ್ಣವಾಗಲಿಲ್ಲ. ಜಮೀನು ಕೊಟ್ಟ ಕೆಲವರಿಗೆ ಪರಿಹಾರವು ಇಲ್ಲ. ಕೆಲವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದರ ನಡುವೆಯೇ ಉಳಿದಿರುವ ಭೂಮಿಯನ್ನು ಸ್ವಾಧೀನಾ ಪ್ರಕ್ರಿಯೆ ನಡೆಯಬೇಕು. ಸರ್ಕಾರ ಕೂಡಲೇ ಏತ ನೀರಾವರಿ ಕಾಮಗಾರಿಯನ್ನು ಮುಗಿಸಬೇಕು ಎನ್ನುವುದು ಮಳಲೂರು ಗ್ರಾಮದ ಸುತ್ತ ಮುತ್ತಲಿನ ಜನರ ಒತ್ತಾಯವಾಗಿದೆ.......

byte:-1 ಬಗಾದಿ ಗೌತಮ್,,,,,,,,,, ಜಿಲ್ಲಾಧಿಕಾರಿ
byte:-2 ಸೋಮೇಗೌಡ,,,,,,,,, ಸ್ಥಳೀಯ ರೈತರು

Conclusion:ರಾಜಕುಮಾರ್,,,,,,
ಈ ಟಿವಿ ಭಾರತ್,,,,,,,
ಚಿಕ್ಕಮಗಳೂರು..........
ETV Bharat Logo

Copyright © 2025 Ushodaya Enterprises Pvt. Ltd., All Rights Reserved.