ETV Bharat / state

ಮಲೆನಾಡಿಗೆ ಆನ್​ಲೈನ್ ಕ್ಲಾಸ್ ಬೇಡವೇ ಬೇಡ: ಶಾಸಕ ಕುಮಾರಸ್ವಾಮಿ ಆಗ್ರಹ - ಅನ್​ಲಾಕ್​ ಘೋಷಣೆ

ರಾಜ್ಯದಲ್ಲಿ ಕೋವಿಡ್​ ಸೋಂಕು ಕಡಿಮೆಯಾದ ಬೆನ್ನಲ್ಲೆ ಅನ್​ಲಾಕ್​ ಘೋಷಣೆಯಾಗಿ ಶಾಲೆ ತೆರೆಯುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಈ ನಡುವೆ ಮಲೆನಾಡು ಭಾಗದಲ್ಲಿ ಆನ್​​ಲೈನ್ ತರಗತಿ ಎಂಬುದು ವಿಫಲ ಪ್ರಯತ್ನ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದ್ದು, ಶಾಲೆ ತೆರೆಯುವಂತೆ ಆಗ್ರಹಿಸಿದ್ದಾರೆ.

Mla_Kumarswammy
ಎಂ.ಪಿ.ಕುಮಾರಸ್ವಾಮಿ
author img

By

Published : Jun 24, 2021, 5:22 PM IST

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಆನ್​​​​ಲೈನ್​​ ಕ್ಲಾಸ್​​ನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ, ಶಾಲೆಗಳನ್ನು ಆರಂಭಿಸಿ ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಆನ್​​ಲೈನ್ ಕ್ಲಾಸ್ ನಡೆಸುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಆನ್​​​​ಲೈನ್ ಕ್ಲಾಸ್ ರದ್ದುಮಾಡಿ ಶಾಲೆಗಳನ್ನು ತೆರೆಯಿರಿ ಎಂದಿದ್ದಾರೆ.

ಮಲೆನಾಡಿಗೆ ಆನ್​ಲೈನ್ ಕ್ಲಾಸ್ ಬೇಡವೇ ಬೇಡ: ಶಾಸಕ ಕುಮಾರಸ್ವಾಮಿ ಆಗ್ರಹ

ಮೊಬೈಲ್ ಇಲ್ಲದೆ ಕೂಲಿ ಕಾರ್ಮಿಕರ, ಬಡವರ್ಗದ ಶೇ 50ರಷ್ಟು ಮಕ್ಕಳು ಬೌದ್ಧಿಕವಾಗಿ ದಿವಾಳಿಯಾಗುತ್ತಿದ್ದಾರೆ. ಅವರಿಗೆ ಆಟ-ಪಾಠ ಇಲ್ಲವಾಗಿದೆ. ಬೇರೆ ದಾರಿ ಏನು ಎಂಬುದೇ ಪೋಷಕರಿಗೆ ತಿಳಿಯದೆ ಕಂಗಾಲಾಗಿದ್ದಾರೆ ಎಂದಿದ್ದಾರೆ. ಸ್ಥಿತಿವಂತರು ಮಾತ್ರವೇ ಮಕ್ಕಳಿಗೆ ಮೊಬೈಲ್ ತೆಗೆದುಕೊಡಬಹುದು. ಆನ್​​​​ಲೈನ್​​ ಕ್ಲಾಸಿಗಾಗಿ ನೆಟ್​​ವರ್ಕ್​ ಸಿಗದೆ ಮರದ ಮೇಲೆ ಹತ್ತಿ ಕುಳಿತುಕೊಳ್ಳುವುದು, ಗುಡ್ಡಕ್ಕೆ ಹೋಗೋದು, ಮಳೆಯಲ್ಲಿ ಅಪ್ಪ ಛತ್ರಿ ಹಿಡಿಯೋದು, ಮಗ ಓದೋದು ಹೀಗೆ ನರಕಯಾತನೆ ಅನುಭವಿಸುತ್ತಿದ್ದಾರೆ. ಬಡವರ್ಗದವರಿಗೆ ಶಿಕ್ಷಣ ಎಲ್ಲಿ ದೂರವಾಗುತ್ತೋ ಎಂಬ ಆತಂಕ ಎದುರಾಗಿದೆ ಎಂದಿದ್ದಾರೆ.

ಕೊರೊನದಿಂದ ಮಲೆನಾಡಿಗೆ ಭಾರೀ ಆಪತ್ತೇನೂ ಬಂದಿಲ್ಲ. ಪೋಷಕರು ಆತಂಕದಿಂದ ಹೊರಬರಬೇಕು. ಸರ್ಕಾರ ಕೂಡಲೇ ಶಾಲೆಯನ್ನು ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿಗಳು ಮತ್ತು ಪ್ರೌಢಶಿಕ್ಷಣ ಸಚಿವರನ್ನು ಒತ್ತಾಯಿಸುವುದಾಗಿ ಈ ವೇಳೆ ತಿಳಿಸಿದರು.

ಓದಿ: ರಾಜ್ಯದಲ್ಲಿ 1 ರಿಂದ 10ನೇ ತರಗತಿವರೆಗೆ ಶಾಲೆ ತೆರೆಯುವ ಬಗ್ಗೆ ಚರ್ಚೆ ಮಾಡಿಲ್ಲ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.