ETV Bharat / state

ಶೃಂಗೇರಿ ಮಲಹಾನಿಕರೇಶ್ವರ ದೇವಾಲಯದ ರಾಜಗೋಪುರ ಉದ್ಘಾಟನೆ

ಶೃಂಗೇರಿಯ ಪುರಾತನ ದೇವಾಲಯವಾದ ಮಲಹಾನಿಕರೇಶ್ವರ ದೇವಾಲಯದ ರಾಜಗೋಪುರದ ಉದ್ಘಾಟನೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆಯಿತು.

ದೇವಾಲಯದ ಕಳಶದ ಕುಂಭಾಭಿಷೇಕ
ದೇವಾಲಯದ ಕಳಶದ ಕುಂಭಾಭಿಷೇಕ
author img

By

Published : Feb 12, 2023, 5:49 PM IST

Updated : Feb 13, 2023, 8:15 PM IST

ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ವಿಧುಶೇಖರಭಾರತೀತೀರ್ಥ ಮಹಾಸ್ವಾಮಿಗಳು ಮಾತನಾಡುತ್ತಿರುವುದು

ಚಿಕ್ಕಮಗಳೂರು : ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಶೃಂಗೇರಿಯ ಪುರಾತನ ದೇವಾಲಯವಾದ ಮಲಹಾನಿಕರೇಶ್ವರ ದೇವಾಲಯದ ರಾಜಗೋಪುರದ ಉದ್ಘಾಟನೆ ಹಾಗೂ ದೇವಾಲಯದ ಕಳಶದ ಕುಂಭಾಭಿಷೇಕ ಕಾರ್ಯಕ್ರಮವು ಅತ್ಯಂತ ವೈಭವಯುತವಾಗಿ, ಸಂಪ್ರದಾಯ ಬದ್ಧವಾಗಿ ಜರುಗಿತು.

ಶೃಂಗೇರಿ ಶಾರದಾ ದೇವಾಲಯದಿಂದ ಸುಮಾರು 1 ಕಿ.ಮೀ. ದೂರದ ಬೆಟ್ಟದ‌ ಮೇಲೆ‌ ನೆಲೆಸಿರುವ ಮಲಹಾನಿಕರೇಶ್ವರ ಶೃಂಗೇರಿಯ ಮೂಲ ದೇವ. ಈ ಮಲಹಾನಿಕರೇಶ್ವರ ದೇವನನ್ನು ದಕ್ಷಿಣಾಮ್ನಾಯ ಶಂಕರ ಶಾರದಾ ಪೀಠದ ಎಲ್ಲಾ ಯತಿವರ್ಯರು ಪೂಜಿಸಿ‌, ಆರಾಧಿಸಿಕೊಂಡು ಬರುತ್ತಿದ್ದಾರೆ. ಇಂತಹ ಮಲಹಾನಿಕರೇಶ್ವರ ದೇವಾಲಯದ ಮುಂದೆ ಸುಮಾರು 60 ಅಡಿ ಎತ್ತರದ ರಾಜಗೋಪುರವನ್ನು‌ ನಿರ್ಮಾಣ ಮಾಡಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಜರುಗಿತು.

ಅರ್ಚಕರಾದ ಶಿವಕುಮಾರ ಶರ್ಮ ಅವರು ಮಾತನಾಡಿದರು

ಶಿವರಾತ್ರಿ ಪ್ರಯುಕ್ತ ಶಾರದಾ ಪೀಠದ ವತಿಯಿಂದ 11 ದಿನಗಳ ವಿಶೇಷ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಅದರ ಅಂಗವಾಗಿ ಇಂದು ಮಲಹಾನಿಕರೇಶ್ವರ ದೇವಾಲಯದ ರಾಜಗೋಪುರ ಲೋಕಾರ್ಪಣಾ ಕಾರ್ಯಕ್ರಮ ನಡೆಸಲಾಯಿತು. ಶಾರದಾ ಪೀಠದ ಜಗದ್ಗುರುಗಳಾದ ಶ್ರೀ‌ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರಭಾರತೀತೀರ್ಥ ಮಹಾಸ್ವಾಮಿಗಳ ಮುಂದಾಳತ್ವದಲ್ಲಿ ದೇವಾಲಯದ ರಾಜಗೋಪುರ ಉದ್ಘಾಟನೆ ನಡೆಯಿತು. ದೇವಾಲಯದಲ್ಲಿ ಮೊದಲು ಸ್ತಂಭದ ಗಣಪತಿಗೆ ಪೂಜೆ ಸಲ್ಲಿಸಿ ನಂತರ ರುದ್ರಾಭಿಷೇಕ ನಡೆಸಲಾಯಿತು. ನಂತರ ಪಕ್ಕದಲ್ಲಿಯೇ ಇರುವ ಭವಾನಿ ದೇವಿಗೆ ವಿಶೇಷ ಪೂಜೆ ನೆರವೇರಿತು. ನಂತರ ದೇವಾಲಯದ ಗೋಪುರಗಳಿಗೆ ಕುಂಭಾಭಿಷೇಕವನ್ನು ನಡೆಸಿ, ನಂತರ ರಾಜಗೋಪುರದ ಮೇಲೇರಿ ಕಳಸ ಪ್ರತಿಷ್ಠಾಪಿಸಲಾಯಿತು. ಅಲ್ಲಿಯೇ ಶ್ರೀಗಳು ವಿಶೇಷ ಪೂಜೆ ನಡೆಸಿದರು.

Sringeri Sharada Temple
ಶೃಂಗೇರಿ ಶಾರದ ದೇವಾಲಯ

ದೇವಾಲಯದ ಹಿನ್ನೆಲೆ : 'ಶೃಂಗೇರಿಯಲ್ಲಿ ಶಂಕರಾಚಾರ್ಯರು ತಾಯಿ ಶಾರದೆಯನ್ನು ಪ್ರತಿಷ್ಠಾಪಿಸುವ ಮುನ್ನ ಬೆಟ್ಟದ ಮೇಲೆ ಬೃಹತ್ ಗಾತ್ರದ ಲಿಂಗದ ರೂಪದಲ್ಲಿ ಶಿವ ನೆಲೆಸಿದ್ದ. ಈ ಶಿವನನ್ನು ಶೃಷ್ಯಶೃಂಗರ ಪಿತರಾದ ವಿಭಂಡಕ ಋಷಿಗಳು ಮೂರು ಕಾಲ ಪೂಜಿಸಿ ಪ್ರಾರ್ಥಿಸುತ್ತಿದ್ದರು. ಬಳಿಕ ವಿಭಂಡಕ ಋಷಿ ವರ್ಯರು ಮಲಹಾನಿಕರೇಶ್ವರನಲ್ಲಿಯೇ ಐಕ್ಯರಾದರು. ನಂತರ ಋಷ್ಯಶೃಂಗರು ಸೇರಿದಂತೆ ಅನೇಕ ಋಷಿಗಳು, ಯತಿಗಳು ದೇವನಿಗೆ ಪೂಜೆ ಸಲ್ಲಿಸಿಕೊಂಡು ಬಂದಿದ್ದಾರೆ. ಮಲ ಅಂದ್ರೆ ಪಾಪ, ಈ ಪಾಪವನ್ನು ಹೊರ ಹಾಕಿದಾಗ ಮನುಷ್ಯನಿಗೆ ಮುಕ್ತಿ ಪ್ರಾಪ್ತಿಯಾಗುತ್ತದೆ. ಇದರಿಂದ ಮಲಹಾನಿಕರೇಶ್ವರನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ, ಎಲ್ಲಾ ಪಾಪಗಳು ನಿವಾರಣೆಯಾಗಿ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಇದೇ ನಂಬಿಕೆ ಈಗಲೂ ಮುಂದುವರೆದುಕೊಂಡು ಬಂದಿದೆ. ಇದರಿಂದ ದೇವಾಲಯಕ್ಕೆ ರಾಜಗೋಪುರವನ್ನು ನಿರ್ಮಾಣ‌ ಮಾಡಲಾಗಿದೆ. ಅಲ್ಲದೆ ದೇವಾಲಯದಲ್ಲಿ ಕುಂಭಾಭಿಷೇಕವನ್ನು ನಡೆಸಲಾಯಿತು. ಶಿವರಾತ್ರಿಯ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯುತ್ತದೆ. ಅಲ್ಲದೆ ಶಿವರಾತ್ರಿಯ ಮರುದಿನ ಮಲಹಾನಿಕರೇಶ್ವರನ ರಥೋತ್ಸವ ಜರುಗುತ್ತದೆ' ಎಂದು ಶೃಂಗೇರಿ ಮಲಹಾನಿಕರೇಶ್ವರ ದೇವಾಲಯದ ರಾಜಗೋಪುರ ಉದ್ಘಾಟನೆ ಕಾರ್ಯಕ್ರಮದ ಬಗ್ಗೆ ಶಾರದಾ ಪೀಠದ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರಭಾರತೀತೀರ್ಥ ಮಹಾಸ್ವಾಮೀಜಿ ಅವರು ತಿಳಿಸಿದರು.

ಅತಿವೃಷ್ಟಿ ಹಾಗೂ ಅನಾವೃಷ್ಟಿಯಾದಾಗ ವಿಶೇಷ ಪೂಜೆ : ಕುಂಭಾಭಿಷೇಕದ ಅಂಗವಾಗಿ ದೇವಾಲಯದಲ್ಲಿ ಎಲ್ಲಾ ರೀತಿಯ ಪಾರಾಯಣ ನಡೆಸಲಾಗುತ್ತದೆ. ಪೀಠದ ಇಬ್ಬರು ಸ್ವಾಮೀಜಿಗಳು ಬಂದು ದೇವಾಲಯದಲ್ಲಿ ಪೂಜೆ ನಡೆಸಿದ್ದು, ನಮಗೆಲ್ಲ ಸಂತಸ ತಂದಿದೆ ಎನ್ನುತ್ತಾರೆ ಅರ್ಚಕರಾದ ಶಿವಕುಮಾರ ಶರ್ಮರು. ಮಲಹಾನಿಕರೇಶ್ವರನಿಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಇಲ್ಲಿ‌ ಅತಿವೃಷ್ಟಿ ಹಾಗೂ ಅನಾವೃಷ್ಟಿಯಾದಾಗ ಇಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಅಲ್ಲದೆ, ಈ ಬಾರಿ ಅಡಕೆಗೆ ಔಷಧವೇ ಇಲ್ಲದ ಎಲೆಚುಕ್ಕಿ ರೋಗ ಬಂದಿದ್ದು, ಆ ರೋಗ ಬೇಗ ಹೋಗಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಲಿ‌ ಎಂದು ತ್ರಿವೇಣಿ ಅವರು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ : ಚಾಮುಂಡಿ ಬೆಟ್ಟಕ್ಕೆ ರೋಪ್ ವೇ: ಪರಿಸರವಾದಿಗಳ ವಿರೋಧ, ಹೋರಾಟದ ಎಚ್ಚರಿಕೆ

Last Updated : Feb 13, 2023, 8:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.