ETV Bharat / state

ಮಳೆ ಕೊರತೆಯಿಂದ ಇತಿಹಾಸ ಪ್ರಸಿದ್ಧ ಮದಗದ ಕೆರೆ ಖಾಲಿ ಖಾಲಿ! ಕುಡಿಯುವ ನೀರಿಗೂ ಸಂಕಷ್ಟ

ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಇತಿಹಾಸ ಪ್ರಸಿದ್ಧ ಮದಗದ ಕೆರೆ ಖಾಲಿಯಾಗಿದೆ. ಇದು ರೈತರನ್ನು ಆತಂಕಕ್ಕೆ ತಳ್ಳಿದೆ.

madagada lake is completely empty after 6 years

author img

By

Published : Jul 7, 2023, 5:13 PM IST

Updated : Jul 7, 2023, 5:53 PM IST

ಇತಿಹಾಸ ಪ್ರಸಿದ್ಧ ಮದಗಾದ ಕೆರೆ

ಚಿಕ್ಕಮಗಳೂರು : 'ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ' ಎನ್ನುವ ಜಾನಪದ ಹಾಡನ್ನು ಎಲ್ಲರೂ ಕೇಳಿರುತ್ತಾರೆ. ಇಂತಹ ಹಾಡಿಗೆ ಕಾರಣವಾದ ಐತಿಹಾಸಿಕ ಹಿನ್ನೆಲೆಯ ಕೆರೆ ಇದೀಗ ನೀರಿಲ್ಲದೇ ನೀರಿಲ್ಲದೇ ಖಾಲಿಯಾಗಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ ಮಳೆ ಪ್ರಮಾಣ ಬಹುತೇಕ ಕಡಿಮೆಯಾಗಿದ್ದರಿಂದ ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದ ಜೀವನಾಡಿ ಮದಗದ ಕೆರೆ ನೀರಿಲ್ಲದೇ ಸೊರಗಿದೆ. ಹಾಗಾಗಿ ಗ್ರಾಮ ಸೇರಿದಂತೆ ತಾಲೂಕಿನ ನೂರಾರು ರೈತರನ್ನು ಆತಂಕಕ್ಕೆ ತಳ್ಳಿದೆ.

madagada lake is completely empty after 6 years
ಇತಿಹಾಸ ಪ್ರಸಿದ್ಧ ಮದಗಾದ ಕೆರೆ

ಮುಂಗಾರು ಭಾಗಶಃ ಕೈಕೊಟ್ಟ ಪರಿಣಾಮ ಸುಮಾರು 336 ಹೆಕ್ಟೇರ್‌ (2036 ಎಕರೆ) ಹೊಂದಿರುವ ಪ್ರಸಿದ್ಧ ಮದಗದ ಕೆರೆ ಸಂಪೂರ್ಣವಾಗಿ ಒಣಗಿದೆ. ಪರಿಣಾಮ ಈ ನೀರನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಜಾನುವಾರ ಪಾಡು ಏನು ಅಂತ ತಾಲೂಕಿನ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೆರೆಗೆ ಬರೋದೆ ಮಾಯದಂತ ಮಳೆ. ಅಂದ್ರೆ, ಇಲ್ಲಿ ಮಳೆ ಪ್ರಮಾಣ ಕಡಿಮೆ. ಬಾರದಿದ್ರು ಮುಳ್ಳಯ್ಯನಗಿರಿ, ದತ್ತಪೀಠದ ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆಯಿಂದ ಈ ಕೆರೆ ತುಂಬುತ್ತದೆ. ಆದರೆ, ಆ ಭಾಗದಲ್ಲಿಯೂ ಮಳೆ ಕುಂಟಿತವಾಗಿದೆ. ಜೊತೆಗೆ ಪ್ರತಿ ವರ್ಷ ಇಲ್ಲಿ ಸುರಿಯುತ್ತಿದ್ದ ಮಳೆ ಈ ಬಾರಿಯೂ ಕೈಕೊಟ್ಟಿದ್ದರಿಂದ ಕೆರೆ ತನ್ನ ಸೌಂದರ್ಯವನ್ನು ಕಳೆದುಕೊಂಡಿದೆ.

ಕೆರೆಯಲ್ಲಿ ನೀರು ಇದ್ರೆ ಸಮುದ್ರದಂತೆ ಭಾಸವಾಗುತ್ತದೆ, ಅದರಲ್ಲೂ ಸುತ್ತಲೂ ಮುಗಿಲೆತ್ತರದ ಬೆಟ್ಟಗುಡ್ಡಗಳು ಕೆರೆಗೆ ಮತ್ತಷ್ಟು ಸೊಬಗು ನೀಡುತ್ತವೆ. ಇಲ್ಲಿನ ಸೌಂದರ್ಯವನ್ನು ಕಂಡು ಹಲವು ಚಲನಚಿತ್ರಗಳ ಹಾಡಿನ ಚಿತ್ರೀಕರಣವೂ ನಡೆದಿದೆ. ಆದ್ರೆ, ಈ ಬಾರಿ ಮಾಯದಂತ ಮಳೆಯೂ ಇಲ್ಲ, ಮಾಮೂಲಿ ಮಳೆಯೂ ಇಲ್ಲ. ಹಾಗಾಗಿ ಈ ಕೆರೆ ಸಂಪೂರ್ಣ ಖಾಲಿಯಾಗಿ ಒಣಗಿ ನಿಂತಿದೆ. ಈ ಕೆರೆಯ ನೀರನ್ನೇ ನಂಬಿರುವ 36 ಹಳ್ಳಿಗಳು ಸಂಕಷ್ಟ ಎದಿರಿಸಬೇಕಾಗಿದೆ ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕೆರೆ ತುಂಬಿದರೆ ಇಡೀ ಕಡೂರು ತಾಲೂಕಿಗೆ ಕುಡಿಯುವ ನೀರಿನ ಬವಣೆ ತಪ್ಪಿಸುತ್ತಿತ್ತು. ಆದರೆ, ಈ ಬಾರಿ ಕೆರೆ ಖಾಲಿಯಾಗಿರೋದು ಕುಡಿಯೋ ನೀರಿಗೂ ಸಮಸ್ಯೆಯಾಗುವ ಮುನ್ಸೂಚನೆ ಸಿಕ್ಕಿದೆ. ಈ ಕೆರೆ ತುಂಬಿದರೆ ಕೇವಲ ಚಿಕ್ಕಮಗಳೂರು, ಕಡೂರಿಗೆ ಮಾತ್ರ ಅನುಕೂಲವಲ್ಲ, ಇಲ್ಲಿ ಕೋಡಿ ಬಿದ್ದು ಹರಿಯೋ ನೀರು ಚಿತ್ರದುರ್ಗದ ಮಾರಿಕಣಿವೆ ಡ್ಯಾಂ ಸೇರಿ ಚಿತ್ರದುರ್ಗದ ಜೀವನಾಡಿಯೂ ಆಗಿದೆ. ಆದ್ರೆ, ಈಗ ಈ ಕೆರೆಗೆ ನೀರು ಇಲ್ಲದಿರೋದು ಸ್ಥಳೀಯರನ್ನು ಚಿಂತೆಗೀಡು ಮಾಡಿದೆ.

ಈ ಕೆರೆ 87 ಅಡಿ ಆಳವಿದೆ. ಇಷ್ಟು ದೊಡ್ಡ ಕೆರೆ ಒಂದೇ ವರ್ಷಕ್ಕೆ ಸಂಪೂರ್ಣ ಖಾಲಿಯಾಗಿದೆ. ಸದ್ಯ ಮಳೆ ಸುರಿತ್ತಿದೆ. ಆದರೆ, ವಾಡಿಕೆಗಿಂತ ಕಡಿಮೆ ಇದೆ. 15-20 ದಿನದಲ್ಲಿ ದೊಡ್ಡ ಮಳೆ ಬರದಿದ್ರೆ ಸುತ್ತ ಮುತ್ತಲಿನ ಜನ-ಜಾನುವಾರುಗಳು, ಹೊಲಗದ್ದೆ-ತೋಟಗಳು ನೀರಿಲ್ಲದೆ ಹಾಹಾಕಾರ ಅನುಭವಿಸೋದು ಖಚಿತ. ಕಳೆದ 6 ವರ್ಷಗಳ ಹಿಂದೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಇಂತಹ ಪರಿಸ್ಥಿತಿ ಮತ್ತೆ ನಿರ್ಮಾಣವಾಗಿದೆ. ಈ ಕೆರೆ ಇತಿಹಾಸದಲ್ಲಿ ಈ ರೀತಿ ಬತ್ತಿಲ್ಲ.

2016-17 ರಲ್ಲಿ ಬರ ಬಂದಿದ್ದರೂ ಕೂಡ ಈ ಮಟ್ಟಕ್ಕೆ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ. ಆದ್ರೆ, ಈ ಬಾರಿ ಮುಗಿಲೆತ್ತರದ ಘಟ್ಟ ಪ್ರದೇಶ ಮುಳ್ಳಯ್ಯನಗಿರಿ, ದತ್ತಪೀಠ ಭಾಗದಲ್ಲಿ ಮಳೆಯಾದ ಹಿನ್ನೆಲೆ ಕೆರೆಗೆ ಒಂದು ಹನಿಯೂ ನೀರು ಬಂದಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಆದರೆ, ಸದ್ಯ ಮಳೆ ಸಣ್ಣ ಪ್ರಮಾಣದಲ್ಲಿ ಸುರಿಯುತ್ತಿದೆ. ಆದರೆ, ಮಳೆ ಹೀಗೆ ಮುಂದುವರೆದರೆ ತುಂಬಾ ಅನುಕೂಲ. ಇದರಿಂದ ಲಕ್ಷಾಂತರ ರೈತರ ಬದುಕು ಹಸನಾಗುತ್ತದೆ ಎನ್ನುತ್ತಾರೆ ಸ್ಥಳೀಯ ರೈತ ಅನ್ನಯ್ಯ.

ಇದನ್ನೂ ಓದಿ: ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ: ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿ 5 ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

Last Updated : Jul 7, 2023, 5:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.