ETV Bharat / state

ಸಾಲು-ಸಾಲು ರಜೆಯ ಹಬ್ಬ : ಕಾಫಿನಾಡಿಗೆ ಪ್ರವಾಸಿಗರ ದಾಂಗುಡಿ

ಕೆಲ ದಿನಗಳ ಹಿಂದೆ ಕೊರೊನಾ ಹಿನ್ನೆಲೆಯಲ್ಲಿ ಗಿರಿ ಭಾಗಕ್ಕೆ ಬೆಳಗ್ಗೆ 150 ವಾಹನ, ಮಧ್ಯಾಹ್ನ 150 ವಾಹನಗಳಿಗೆ ಮಾತ್ರ ಎಂಟ್ರಿ ನೀಡಲಾಗ್ತಿತ್ತು. ಆದ್ರೆ, ಇದೀಗ ಕೊರೊನಾ ಕೇಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರೋದ್ರಿಂದ ನಿರ್ಬಂಧಗಳನ್ನ ಸಡಿಲಿಸಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ, ಮೂರು ಸಾವಿರಕ್ಕೂ ಅಧಿಕ ವಾಹನಗಳು ಇಂದು ಒಂದೇ ದಿನ ರಾಜ್ಯದ ಅತಿ ಎತ್ತರದ ಪ್ರದೇಶವಾಗಿರೋ ಮುಳ್ಳಯ್ಯನಗಿರಿಗೆ ಲಗ್ಗೆಯಿಟ್ಟಿದ್ದವು..

lots of tourists visits chikmagalur
ಮುಳ್ಳಯ್ಯನಗಿರಿ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ದಂಡು
author img

By

Published : Oct 17, 2021, 9:07 PM IST

ಚಿಕ್ಕಮಗಳೂರು : ಸಾಲು ಸಾಲು ಸರ್ಕಾರಿ ರಜೆ ಬಂದ ಹಿನ್ನೆಲೆ ಕಾಫಿನಾಡು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿಗೆ ಬಂದ ಪ್ರವಾಸಿಗರ ಸಂಖ್ಯೆ ಲೆಕ್ಕಕ್ಕಿಲ್ಲದಂತಾಗಿದೆ. 390 ಬೈಕ್, 2911 ಕಾರುಗಳು, 198 ಟಿಟಿ ಹಾಗೂ 45ಕ್ಕೂ ಹೆಚ್ಚು ಮಿನಿ ಬಸ್‍ಗಳು ಕಾಫಿನಾಡಲ್ಲಿ ಜಮಾಯಿಸಿದ್ದವು. ಅಂದಾಜು 18 ಸಾವಿರ ಜನ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

ಮುಳ್ಳಯ್ಯನಗಿರಿ ಪ್ರವಾಸಿ ತಾಣದಲ್ಲಿ ಪ್ರವಾಸಿಗರ ದಂಡು..

ಇಂದು ಚಿಕ್ಕಮಗಳೂರಿನ ಮುಳ್ಳಯ್ಯಗಿರಿಗೆ ಸಾವಿರಾರು ಜನ ಪ್ರವಾಸಿಗರು ತಮ್ಮ ಪ್ರೀತಿ ಪಾತ್ರರ ಜೊತೆ ಪಯಣ ಬೆಳೆಸಿದ್ರು. ಬೆಳ್ಳಂಬೆಳ್ಳಗೆಯೇ ಮುಳ್ಳಯ್ಯನಗಿರಿಯ ಸೌಂದರ್ಯ ಅನುಭವಿಸಲು ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಾವಿರಾರು ಪ್ರವಾಸಿಗರು ಗಿರಿಯತ್ತ ಮುಖ ಮಾಡಿದ್ರು.

ಹಾಗಾಗಿ, ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್​​ಪೋಸ್ಟ್ ಬಳಿ ಕೀಲೋಮೀಟರ್ ಗಟ್ಟಲೇ ವಾಹನಗಳು ಜಾಮ್ ಆಗಿದ್ವು. ಕೊನೆಗೂ ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಂಡು ಮುಂದೆ ನಡೆದಾಗ ಪ್ರವಾಸಿಗರನ್ನ ಬರಮಾಡಿಕೊಂಡಿದ್ದು ದಟ್ಟನೆಯ ಮಂಜು, ಮೈಕೊರೆಯುವ ತಂಗಾಳಿ, ಕಣ್ಣು ಹಾಯಿಸಿದಷ್ಟು ಎತ್ತರ ಕಾಣೋ ಬೆಟ್ಟಗುಡ್ಡಗಳು.

ಒಮ್ಮೆಲೇ ಮಂಜಿನ ಹೊದಿಕೆ, ಮತ್ತೊಮ್ಮೆ ಮಂಜು ಮಾಯವಾಗಿ ಸ್ವಚ್ಛಂದವಾಗಿ ಗೋಚರಿಸುವ ವಾತಾವರಣ. ಈ ಆಹ್ಲಾದಕರ ವಾತಾವರಣದಲ್ಲಿ ಸ್ನೇಹಿತರ ಜೊತೆ ಸಂಬಂಧಿಕರ ಜೊತೆ ಸಂಚರಿಸಿ ಸುಮಧುರ ಕ್ಷಣಗಳನ್ನ ಹಸಿರಾಗಿಸಿಕೊಂಡ್ರು.

ಆಯುಧಪೂಜೆ, ವಿಜಯದಶಮಿ ಅಂತಾ ಸಾಲು ಸಾಲು ರಜೆಗಳು ಬಂದ ಹಿನ್ನೆಲೆ ವೀಕೆಂಡ್‌ನ ಖುಷಿ-ಖುಷಿಯಾಗಿ ಕಳೀಬೇಕು ಅಂತಾ ಈ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮುಳ್ಳಯ್ಯನಗಿರಿಯತ್ತ ಹೆಜ್ಜೆ ಹಾಕಿದ್ರು.

ಕೆಲ ದಿನಗಳ ಹಿಂದೆ ಕೊರೊನಾ ಹಿನ್ನೆಲೆಯಲ್ಲಿ ಗಿರಿ ಭಾಗಕ್ಕೆ ಬೆಳಗ್ಗೆ 150 ವಾಹನ, ಮಧ್ಯಾಹ್ನ 150 ವಾಹನಗಳಿಗೆ ಮಾತ್ರ ಎಂಟ್ರಿ ನೀಡಲಾಗ್ತಿತ್ತು. ಆದ್ರೆ, ಇದೀಗ ಕೊರೊನಾ ಕೇಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರೋದ್ರಿಂದ ನಿರ್ಬಂಧಗಳನ್ನ ಸಡಿಲಿಸಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ, ಮೂರು ಸಾವಿರಕ್ಕೂ ಅಧಿಕ ವಾಹನಗಳು ಇಂದು ಒಂದೇ ದಿನ ರಾಜ್ಯದ ಅತಿ ಎತ್ತರದ ಪ್ರದೇಶವಾಗಿರೋ ಮುಳ್ಳಯ್ಯನಗಿರಿಗೆ ಲಗ್ಗೆಯಿಟ್ಟಿದ್ದವು.

ಒಂದೆಡೆ ಹಬ್ಬದ ಖುಷಿ. ಮತ್ತೊಂದೆಡೆ ಒಂದೂವರೆ ವರ್ಷದ ಬಳಿಕ ಕೊರೊನಾದಿಂದ ಬಿಗ್ ರಿಲೀಫ್. ಈ ನಡುವೆ ಸಾವಿರಾರು ಜನರು ತಮ್ಮ ನೆಚ್ಚಿನ ಹಾಟ್ ಸ್ಪಾಟ್ ಮುಳ್ಳಯ್ಯನಗಿರಿಗೆ ಬಂದು ಸಖತ್ ಮಸ್ತಿ ಮಾಡಿದ್ರು. ಸೆಲ್ಫಿ, ಫೋಟೋ ಅಂತಾ ಸುಂದರ ಕ್ಷಣಗಳನ್ನ ಸೆರೆಹಿಡಿದ್ರು.

ಸಾವಿರಾರು ಜನರು ಒಮ್ಮೆಲೇ ಎಂಟ್ರಿ ಕೊಟ್ಟಿದ್ದರಿಂದ ಪ್ರವಾಸಿಗರಿಗೆ ಮಾರ್ಗಮಧ್ಯೆ ಟ್ರಾಫಿಕ್ ಕಿರಿ-ಕಿರಿ ಉಂಟಾದ್ರೂ ಆ ಬಳಿಕ ಸುಂದರ, ರಮಣೀಯ ಮುಳ್ಳಯ್ಯನಗಿರಿ ಎಲ್ಲವನ್ನೂ ಮರೆಸಿ ಹಾಯಾಗಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.