ETV Bharat / state

ಪಕ್ಕದ ಮನೆಯವನಿಂದ ನಿಂದನೆ, ಜೀವ ಬೆದರಿಕೆ: ಮಹಿಳೆಯಿಂದ ದೂರು

ಕಳಸ ತಾಲೂಕಿನ ಸಂಸೆ ಗ್ರಾಮದ ಸುನಿತಾ ಪಕ್ಕದ ಮನೆಯ ನವೀನ್ ಹಾಗೂ ಶ್ರೇಯಾಂಶ ಎನ್ನುವರು ಮನೆಯ ಕಿಟಕಿ ಬಳಿ ಬಂದು ತೀರ ಅಸಭ್ಯವಾಗಿ ವರ್ತಿಸುತ್ತಾರೆ. ಪ್ರಶ್ನೆ ಮಾಡಿದರೆ ನಿನ್ನ ಗಂಡನನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

chikkamagaluru
ಕುದುರೆಮುಖ ಪೊಲೀಸ್​ ಠಾಣೆ
author img

By

Published : Jun 3, 2023, 7:27 AM IST

Updated : Jun 3, 2023, 8:05 AM IST

ದೂರುದಾರ ಮಹಿಳೆ ಸುನಿತಾ ಪ್ರತಿಕ್ರಿಯೆ

ಚಿಕ್ಕಮಗಳೂರು: ಪಕ್ಕದ ಮನೆಯ ವ್ಯಕ್ತಿ ಹಾಗೂ ಮತ್ತೋರ್ವ ತಮ್ಮ ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಲ್ಲದೇ, ತನ್ನ ಹಾಗೂ ಪತಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂಬ ಮಹಿಳೆಯ ದೂರಿನಂತೆ ಜಿಲ್ಲೆಯ ಕುದುರೆಮುಖ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಸುನಿತಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ತಾನು ಹಾಗೂ ಪತಿ ರಾಜೇಂದ್ರ ಪ್ರತಿನಿತ್ಯ ಪಕ್ಕದ ಮನೆಯ ವ್ಯಕ್ತಿ ಹಾಗೂ ಮತ್ತೋರ್ವನಿಂದ ಕಿರುಕುಳ ಅನುಭವಿಸುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಳಸ ತಾಲೂಕಿನ ಸಂಸೆ ಗ್ರಾಮದ ಸುನಿತಾ ಪಕ್ಕದ ಮನೆಯ ನವೀನ್ ಹಾಗೂ ಶ್ರೇಯಾಂಶ ಎನ್ನುವರು ಮನೆಯ ಕಿಟಕಿ ಬಳಿ ಬಂದು ತೀರ ಅಸಭ್ಯವಾಗಿ ವರ್ತಿಸುತ್ತಾರೆ. ಪ್ರಶ್ನೆ ಮಾಡಿದರೆ ನಿನ್ನ ಗಂಡನನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪತಿ ರಾಜೇಂದ್ರ ಸಂಸೆ ಗ್ರಾಮದಲ್ಲಿ ನಡೆಯುತ್ತಿದ್ದ ಗಲಾಟೆಯೊಂದರ ವಿಡಿಯೋ ಸೆರೆಹಿಡಿದಿದ್ದಕ್ಕೆ ನವೀನ್ ಹಾಗೂ ಶ್ರೇಯಾಂಶ ಎಂಬುವರು ಬೆದರಿಸುತ್ತಿದ್ದಾರೆ ಎಂದು ಸುನೀತಾ ಆರೋಪಿಸಿದ್ದಾರೆ. ಇಬ್ಬರೂ ಕೂಡ ಪತಿ ರಾಜೇಂದ್ರನಿಗೆ ಕಿರುಕುಳ ನೀಡುತ್ತಿದ್ದು, ನಿನ್ನ ಮೇಲೆ ಪೋಕ್ಸೋ ಕೇಸ್ ದಾಖಲಿಸುತ್ತೇನೆ. ನಿನಗೆ ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಅಲ್ಲದೆ, ನನಗೆ ಅವಮಾನ ಮಾಡಿದ್ದಾರೆ. ಪ್ರಶ್ನಿಸಿದ್ದಕ್ಕೆ ನವೀನ್ ಹಾಗೂ ಶ್ರೇಯಾಂಶ ತನ್ನ ಪತಿ ಮೇಲೆ ರಾಡ್​ನಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ರಕ್ಷಣೆಗೆ ನಾನು ಮುಂದಾದಾಗ ಹಿಡಿದೆಳೆದು ತಳ್ಳಿದ್ದಾರೆ. ಅವರಿಂದ ತಪ್ಪಿಸಿಕೊಂಡು ಮನೆಯ ಬಾಗಿಲು ಹಾಕಿಕೊಂಡು ಪಾರಾಗಿದ್ದೇವೆ. ಜೊತೆಗೆ ಅಶ್ಲೀಲವಾಗಿ ನಿಂದಿಸುತ್ತ, ಸುಮ್ಮನೆ ಬಿಡುವುದಿಲ್ಲ. ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಪ್ರತಿ ನಿತ್ಯ ಅವರ ಅಶ್ಲೀಲ ಮಾತುಗಳು ಅಸಭ್ಯ ವರ್ತನೆಯಿಂದ ನಾವು ನೊಂದಿದ್ದೇವೆ. ನಾವು ಜೀವ ಭಯದಲ್ಲೇ ಬದುಕುವಂತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಾಹಿತಿ ಬಂಜಗೆರೆ ಜಯಪ್ರಕಾಶ್​​ಗೆ ಜೀವ ಬೆದರಿಕೆ ಪತ್ರ: ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ. ಅನಾಮಿಕನೊಬ್ಬನಿಂದ ಬಂದಿರುವ ಪತ್ರ ಇದಾಗಿದೆ. ಬಂಡಾಯ ಸಾಹಿತಿಯಾಗಿ ಗುರುತಿಸಿಕೊಂಡಿರುವ ಸಾಹಿತಿ ಬಂಜಗೆರೆ ಜಯಪ್ರಕಾಶ್ ನಿನ್ನೆ ಹಾರೋಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಜೀವ ಬೆದರಿಕೆ ಪತ್ರ ಸಿಕ್ಕಿದ ಹಿನ್ನೆಲೆಯಲ್ಲಿ ಹಾರೋಹಳ್ಳಿಯಲ್ಲಿರುವ ಬಂಜಗೆರೆ ಮನೆಗೆ ಪೊಲೀಸರು ಭೇಟಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಾಹಿತಿ ಬಂಜಗೆರೆ ಜಯಪ್ರಕಾಶ್​​ಗೆ ಜೀವ ಬೆದರಿಕೆ ಪತ್ರ: ದೂರು ದಾಖಲು

16ನೇ ಬಾರಿ ಬಂದ ಬೆದರಿಕೆ ಪತ್ರ: ಸಾಹಿತಿ ಕುಂ.ವೀರಭದ್ರಪ್ಪಗೆ ಮತ್ತೆ ಬೆದರಿಕೆ ಪತ್ರ ಬಂದಿದ್ದು, ನನಗೆ ಬಂದ 16ನೇ ಬೆದರಿಕೆ ಪತ್ರ ಇದಾಗಿದೆ ಎಂದು ಅವರು ಈ ಪತ್ರವನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ಪದೇ ಪದೆ ಕೊಟ್ಟೂರಿನ ಮನೆಗೆ ಈ ಪತ್ರಗಳು ಬರುತ್ತಿದ್ದು, ಹೀಗೆ ಬಂದ ಪತ್ರಗಳನ್ನು ಅವರು ಪೊಲೀಸರಿಗೆ ಒಪ್ಪಿಸುತ್ತಿದ್ದಾರೆ.

ಇದನ್ನೂ ಓದಿ: ವಿಜಯನಗರ: ಸಾಹಿತಿ ಕುಂ.ವೀರಭದ್ರಪ್ಪಗೆ 16ನೇ ಬಾರಿ ಬಂದ ಬೆದರಿಕೆ ಪತ್ರ

Last Updated : Jun 3, 2023, 8:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.