ಚಿಕ್ಕಮಗಳೂರು: ನಗರದಲ್ಲಿ ಕೊರೊನಾ ಶಂಕಿತರನ್ನಿರಿಸಿರುವ ಕ್ವಾರಂಟೈನ್ ಕೇಂದ್ರದ ಸುತ್ತ ಚಿರತೆಗಳು ಓಡಾಡುತ್ತಿವೆ. ಹೀಗಾಗಿ ಈ ಕೇಂದ್ರದಲ್ಲಿರುವವರಿಗೆ ಕೊರೊನಾಕ್ಕಿಂತ ಚಿರತೆ ಭಯವೇ ಹೆಚ್ಚಾಗಿ ಕಾಡುತ್ತಿದೆ.
ಕೊರೊನಾ ವೈರಸ್ ಶಂಕಿತರಿಗೆ ಕೊರೊನಾ ವೈರಸ್ ಭಯಕ್ಕಿಂತ ಚಿರತೆ ಭಯವೇ ಹೆಚ್ಚಾಗಿ ಕಾಡುತ್ತಿದೆ. ಚಿರತೆ ಹೆಜ್ಜೆ ಗುರುತು ಶಂಕಿತರ ನಿದ್ದೆಗೆಡಿಸಿದೆ. ಇದರಿಂದಾಗಿ ಜಿಲ್ಲಾ ಆರೋಗ್ಯ ಇಲಾಖೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ನಗರದ ಮಧುವನ ಬಡಾವಣೆಯಲ್ಲಿರುವ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಚಿರತೆ ಹೆಜ್ಜೆ ಗುರುತುಗಳು ಕಂಡುಬಂದಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.