ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದ ಶಿವ ಪ್ರಸಾದ್ ಎಂಬುವರ ಗೊಬ್ಬರ ತಯಾರಿಕ ಘಟಕಕ್ಕೆ ಚಿರತೆಯೊಂದು ನಿತ್ಯ ಭೇಟಿ ಕೊಡುತ್ತಿದೆ.
ಮೊದಲ ದಿನ ಫ್ಯಾಕ್ಟರಿಯಲ್ಲಿದ್ದ ನಾಯಿ ಮರಿಯನ್ನ ಹೊತ್ತೊಯ್ದಿತ್ತು. 2ನೇ ದಿನ ಬೇಟೆ ಸಿಗದೇ ಬರಿಗೈಯಲ್ಲಿ ವಾಪಸ್ ಆಗಿತ್ತು. ಒಂದೊಂದು ಜಾಗಕ್ಕೂ ಎಂಟ್ರಿ ಕೊಡೋಕೆ ತನ್ನದೇ ಆದ ಟೈಮಿಂಗ್ಸ್ ಇಟ್ಕೊಂಡಿರೋ ಚಾಲಕಿ ಚಿರತೆ, ಈ ಪ್ಯಾಕ್ಟರಿಗೆ ಮಧ್ಯರಾತ್ರಿ 12.30 ರಿಂದ 2 ಗಂಟೆಯೊಳಗೆ ಎಂಟ್ರಿ ಕೊಡೋ ಅಭ್ಯಾಸವಿಟ್ಟುಕೊಂಡಿದೆ. ಹೇಗಿದ್ರು ಚಿರತೆ ದಿನಾ ಬರ್ತಿದೆ, ಲಾಕ್ ಮಾಡೋಣ ಅಂತ ಬೋನ್ ಇಟ್ರೆ, ಅದರ ಹತ್ತಿರ ಬಂದು ಹುಷಾರಾಗಿ ಹೆಜ್ಜೆ ಹಾಕಿ ಎಸ್ಕೇಪ್ ಆಗ್ತಿದೆ.
ಚಿರತೆ ದಾಳಿ ಕುರಿತು ಆತಂಕದಲ್ಲಿ ಸಾರ್ವಜನಿಕರು
ಕೇವಲ ಕಾಟಿಗನೆರೆ ಗ್ರಾಮದ ಸುತ್ತ ಮುತ್ತ ಮಾತ್ರ ಈ ಚಿರತೆ ಹವಾ ಸೃಷ್ಟಿಸಿಲ್ಲ. ಬದಲಾಗಿ ಕಾಟಿಗನೆರೆ ಅಕ್ಕ ಪಕ್ಕದ ಅಬ್ಬಿನಹೊಳಲು, ಮುಗುಳಿ, ತಮಟದಹಳ್ಳಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮದಲ್ಲೂ ಹವಾ ಸೃಷ್ಟಿಸಿದ್ದು. ಜನ ಆತಂಕದಲ್ಲಿ ಬದುಕುವಂತಾಗಿದೆ. ಕಾಟಿಗನೆರೆ ಸುತ್ತಮುತ್ತ ಈ ಚಿರತೆ ಸಿಕ್ಕಾಪಟ್ಟೆ ಹವಾ ಇಟ್ಟಿದೆ. ಸಂಜೆ 6 ಆದರೆ ಸಾಕು ಸುತ್ತಮುತ್ತಲಿನ ಗ್ರಾಮದಲ್ಲಿ ಜನರು ಯಾರೂ ಮನೆಯಿಂದ ಹೊರ ಬರಲ್ಲ. ಯಾಕಂದ್ರೆ ಊರೂರು ಸುತ್ತುತ್ತಿರೋ ಈ ಚಿರತೆ ಎಲ್ಲಿ ನಮ್ಮ ಮೇಲೆ ಅಟ್ಯಾಕ್ ಮಾಡುತ್ತೋ ಅನ್ನೋ ಭಯ ಜನರನ್ನ ಪ್ರತಿಕ್ಷಣ ಕಾಡುತ್ತಿದೆ.
ಓದಿ: ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಟನೆ: ಡಿ. 20ರಿಂದ ಆನ್ಲೈನ್ ಕ್ಲಾಸ್ ಬಂದ್!
ರಾತ್ರಿಯಿಡೀ ಅಡಿಕೆ - ತೆಂಗಿನ ತೋಟ ಸೇರಿದಂತೆ ಹೊಲಗದ್ದೆಗಳಿಗೆ ನೀರು ಹಾಯಿಸಲು ಓಡಾಡುವ ಜನ ಚಿರತೆ ಹಾವಳಿಯಿಂದ ಕಂಗಾಲಾಗಿದ್ದಾರೆ. ಈಗಾಗಲೇ ಹಸು - ಕುರಿ -ನಾಯಿಯನ್ನ ಬಲಿ ತೆಗೆದುಕೊಂಡಿರೋ ಚಿರತೆ ಜನರ ಮೇಲೆ ದಾಳಿ ಮಾಡೋ ಮುನ್ನ ಸೆರೆ ಹಿಡೀರಿ ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.