ETV Bharat / state

ತೆಂಗಿನ ಮರ ಕಡಿದ ಪ್ರಕರಣ: ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ ಪಿಐಎಲ್ ಸಲ್ಲಿಸಲು ನಿರ್ಧಾರ - ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರಿನಲ್ಲಿ ತೆಂಗು ಮತ್ತು ಅಡಿಕೆ ಮರಗಳ ಕಡಿದ ಪ್ರಕರಣದ ವಿರುದ್ಧ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ ಪಿಐಎಲ್ ಸಲ್ಲಿಸಲು ರಾಜ್ಯ ಕಿಸಾನ್ ಕಾಂಗ್ರೆಸ್ ತೀರ್ಮಾನಿಸಿದೆ.

Karnataka Kisan Congress
ತೆಂಗಿನ ಮರ ಕಡಿದ ಪ್ರಕರಣ
author img

By

Published : Mar 11, 2020, 5:37 PM IST

ಚಿಕ್ಕಮಗಳೂರು: ತುಮಕೂರು ಜಿಲ್ಲೆಯಲ್ಲಿ ತೆಂಗು ಹಾಗೂ ಅಡಿಕೆ ಮರಗಳ ಕಡಿದ ಪ್ರಕರಣದ ವಿರುದ್ಧ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ ಪಿಐಎಲ್ ಸಲ್ಲಿಸಲು ರಾಜ್ಯ ಕಿಸಾನ್ ಕಾಂಗ್ರೆಸ್ ತೀರ್ಮಾನಿಸಿದೆ. ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಮಾರ್ಚ್​ 18 ರಂದು ವಕೀಲ ಗೋಪಾಲ್ ಸಿಂಗ್ ಮುಖಾಂತರ ಕೋರ್ಟ್​​ಗೆ ಅರ್ಜಿ ಸಲ್ಲಿಸಲು ತಿರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ

ಯಾವುದೇ ನ್ಯಾಯಾಲಯ ಕೂಡ ಮರಗಳನ್ನು ಕಡಿದು ಹಾಕುವಂತೆ ನಿರ್ದೇಶನ ಮಾಡಿಲ್ಲ. ಈ ಮಧ್ಯೆಯೂ ಮಕ್ಕಳಂತೆ ಸಾಕಿದ ಮರಗಳನ್ನು ಕಡಿದ ಹಾಗೂ ಕಡಿಯಲು ಪರೋಕ್ಷವಾಗಿ ಕಾರಣರಾದ ವ್ಯಕ್ತಿಗಳ ಮೇಲೆ ದೂರು ದಾಖಲಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Karnataka Kisan Congress
ಕರ್ನಾಟಕ ಕಿಸಾನ್ ಕಾಂಗ್ರೆಸ್ ಪ್ರತಿ

ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ತುಮಕೂರು ಜಿಲ್ಲಾಧಿಕಾರಿ, ಗುಬ್ಬಿ ತಹಶೀಲ್ದಾರ್, ಗ್ರಾಮ ಲೆಕ್ಕಿಗನ ವಿರುದ್ಧ ದೂರು ದಾಖಲು ಮಾಡಲು ಕಾಂಗ್ರೆಸ್ ಕಿಸಾನ್ ಘಟಕ ನಿರ್ಧರಿಸಿದೆ. ನೊಂದ ರೈತ ಮಹಿಳೆಗೆ ನ್ಯಾಯ ಸಿಗುವಂತೆ ಹೋರಾಟ ಮಾಡಲು ರಾಜ್ಯ ಕಿಸಾನ್ ಕಾಂಗ್ರೆಸ್ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.