ಚಿಕ್ಕಮಗಳೂರು : ಮಧು ಬಂಗಾರಪ್ಪನವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದಕ್ಕೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪನವರು ಪಕ್ಷ ಬಿಟ್ಟು ಹೋದರೆ ಏನು ತೊಂದರೆ ಇಲ್ಲ. ನಮ್ಮ ಪಕ್ಷದಲ್ಲಿ ಇರುವವರೆಗೂ ಅವರು ನಮ್ಮ ನಾಯಕರು ಅಷ್ಟೇ.. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ನಮ್ಮ ಪಕ್ಷದಿಂದಲೇ ಹೋದವರು. ನಮ್ಮ ಪಕ್ಷಕ್ಕೆ ಇದೇನು ಹೊಸದಲ್ಲ, ಪಕ್ಷದಲ್ಲಿ ಹಲವು ನಾಯಕರು ಬಂದಿದ್ದಾರೆ. ಬಹಳಷ್ಟು ನಾಯಕರು ಹೊರ ಹೋಗಿದ್ದಾರೆ ಎಂದರು.
ಪ್ರವಾಹದ ಪರಿಸ್ಥಿತಿಯಲ್ಲಿ ಕಳೆದ ಬಾರಿಯೂ ಯಡಿಯೂರಪ್ಪ ಏಕಾಂಗಿ, ಈ ಸಲ ಸಿಎಂ ಬಸವರಾಜ್ ಬೊಮ್ಮಾಯಿ ಏಕಾಂಗಿ. ಶೀಘ್ರವೇ ಸಚಿವ ಸಂಪುಟ ರಚನೆಯಾಗಬೇಕು. ಜನರ ಹಿತದೃಷ್ಟಿಯಿಂದ ಬಿಜೆಪಿ ಕೇಂದ್ರ ನಾಯಕರು ಇತ್ತ ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದರು.