ಚಿಕ್ಕಮಗಳೂರು: ನಾನು ಇಂದಿನಿಂದ ಸ್ವಯಂ ಪ್ರೇರಿತನಾಗಿ ಹೋಮ್ ಕ್ವಾರಂಟೈನ್ನಲ್ಲಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ ಹೇಳಿದ್ದಾರೆ.
ಒಳ್ಳೆ ಕೆಲಸವನ್ನು ನಾವು ಮನೆಯಿಂದಲೇ ಮಾಡಬಹುದು. ಕಳೆದ ವಾರ ನಾನು ಮಾತು ನೀಡಿದ್ದೆ, ಬಡ ಕಲಾವಿದರ ನೆರವಿಗೆ ಸರ್ಕಾರ ಬರುತ್ತದೆ. ಈಗಾಗಲೇ ಮುಖ್ಯಮಂತ್ರಿಗಳ ಬಳಿ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದೇನೆ. ನಮ್ಮ ಜಯಂತಿಯಲ್ಲಿ ಉಳಿಕೆಯಾಗಿರುವ ಹಣವನ್ನು ಕ್ರೋಢೀಕರಣ ಮಾಡಿ ಪ್ರತಿ ಬಡ ಕಲಾವಿದರ ಬ್ಯಾಂಕ್ ಖಾತೆಗೆ, 2.000 ಹಣ ಹಾಕಲು ಇವತ್ತಿನಿಂದ ಪ್ರಾರಂಭಿಸಿದ್ದೇವೆ.
ಇದು ಸಂತೋಷದ ಸುದ್ದಿಯಾಗಿದ್ದು, ನಮಗೆ ಸರಿಯಾದ ಅಕೌಂಟ್ ನಂಬರ್ ಹಾಗೂ ಆಧಾರ್ ಸಂಖ್ಯೆ ಬಂದಿದ್ದಾರೆ. ಇಂದಿನಿಂದ ಅವರ ಖಾತೆಗೆ ಹಣ ಸಂದಾಯವಾಗಲಿದೆ. ಉಳಿದಿದ್ದೆಲ್ಲ ಪರಿಶೀಲನೆ ಮಾಡಿ ಬಡವರ ನೆರವಿಗೆ ನಮ್ಮ ಸರ್ಕಾರವಿದೆ ಎಂದಿದ್ದಾರೆ.