ಚಿಕ್ಕಮಗಳೂರು: ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತರೀಕೆರೆ ತಾಲೂಕಿನಲ್ಲಿ ಬೆಳೆಗಳು ಕೊಚ್ಚಿ ಹೋಗಿದ್ದು, ರೈತರು ಕಂಗಾಲಾಗಿದ್ದಾರೆ.
ತರೀಕೆರೆ ತಾಲೂಕಿನ ಶಿವನಿ ಹೋಬಳಿಯ ಹರಿಯನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂ. ಮೌಲ್ಯದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಮಳೆಯ ರಭಸಕ್ಕೆ ಹೊಲದಲ್ಲಿ ಕಿತ್ತು ಹಾಕಿದ ಈರುಳ್ಳಿ ತೇಲಿಕೊಂಡು ರಸ್ತೆಗೆ ಬಂದಿವೆ.
ಶಿವನಿ ಸುತ್ತಮುತ್ತ ಕಳೆದ ರಾತ್ರಿ ಭಾರಿ ಮಳೆಯಾಗಿದ್ದು, ಈರುಳ್ಳಿ ಬೆಳೆದ ರೈತರಿಗೆ ವರುಣ ಕಣ್ಣೀರು ತರಿಸಿದ್ದಾನೆ.