ಚಿಕ್ಕಮಗಳೂರು: ನಗರದ ಮುಖ್ಯ ರಸ್ತೆಗೆ ಬೃಹತ್ ಗಾತ್ರದ ಕಾಡುಕೋಣ ಬಂದು ರಾಜಾರೋಷವಾಗಿ ರಸ್ತೆಯಲ್ಲಿ ಸಂಚಾರ ಮಾಡಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಕೊಪ್ಪ ತಾಲೂಕಿನ ಬಸರಿಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಹಾಡಹಗಲೇ ಬೃಹತ್ ಗಾತ್ರದ ಕಾಡುಕೋಣ ರಸ್ತೆಗೆ ಬಂದಿರುವುದನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಯಾರ ಭಯವಿಲ್ಲದೇ ಕಾಡುಕೋಣ ರಸ್ತೆಯಲ್ಲಿ ನಿರ್ಭಯವಾಗಿ ಸಂಚರಿಸಿದೆ. ಈ ಕಾಡು ಕೋಣದ ಸಂಚಾರ ನೋಡಿ ಸ್ಥಳೀಯರು ಹಾಗೂ ವಾಹನ ಸವಾರರು ಭಯ ಭೀತರಾಗಿದ್ದು, ಕಳೆದ ವರ್ಷವೂ ಇದೇ ರೀತಿ ಬೃಹತ್ ಗಾತ್ರದ ಕಾಡುಕೋಣ ನಗರದ ಪ್ರಮುಖ ರಸ್ತೆಯಲ್ಲಿ ಸಂಚಾರ ನಡೆಸಿ ಜನರಲ್ಲಿ ಆಂತಕ ಮೂಡಿಸಿತ್ತು. ಅದೇ ರೀತಿ ಇಂದು ಕೂಡ ಕಾಡುಕೋಣ ಸಂಚಾರ ನಡೆಸಿರೋದನ್ನು ನೋಡಿ ಸ್ಥಳೀಯರು ಆತಂಕದಲ್ಲಿದ್ದಾರೆ.
ಸುತ್ತಮುತ್ತಲಿನ ಕಾಫೀ ತೋಟ ಹಾಗೂ ಅರಣ್ಯ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಕಾಡು ಕೋಣಗಳಿದ್ದು, ಇವು ನಾಡಿಗೆ ಬರುವುದನ್ನು ತಡೆಯಬೇಕು ಎಂದು ಬಸರಿಕಟ್ಟೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.