ETV Bharat / state

ನೀವು ಹೊರನಾಡು ಅನ್ನಪೂರ್ಣೆಯ ದರ್ಶನ ಪಡೀಬೇಕೇ?: ಈ ಮಾರ್ಗಸೂಚಿಗಳು ಗೊತ್ತಿರಲಿ.. - ಕೊರೊನಾ ನಿಯಂತ್ರಣ

ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆಯೇ ಪೂಜಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಿತ್ತಾದರೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಬಾಗಿಲು ತೆರೆದಿರಲಿಲ್ಲ. ಈಗ ಜುಲೈ 1ರಿಂದ ದೇವಾಲಯ ತೆರೆಯಲಿದ್ದು ಅಲ್ಲಿನ ಆಡಳಿತ ಮಂಡಳಿ ಹೊಸ ಮಾರ್ಗಸೂಚಿಗಳನ್ನು ವಿಧಿಸಿದೆ.

horanadu annapurneshwari
ಹೊರನಾಡು ಅನ್ನಪೂರ್ಣೇಶ್ವರಿದೇವಿ
author img

By

Published : Jun 25, 2020, 5:49 PM IST

ಚಿಕ್ಕಮಗಳೂರು: ಕೋವಿಡ್-19 ವೈರಸ್ ಭೀತಿಯಿಂದ ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ತೆರೆಯದಂತೆ ಸೂಚನೆ ನೀಡಿತ್ತು. ಕೆಲವು ದಿನಗಳಿಂದ ಕೆಲವು ಷರತ್ತುಗಳನ್ನು ವಿಧಿಸಿ, ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಾಗಿಲು ಈವರೆಗೂ ತೆರೆದಿರಲಿಲ್ಲ.

ಹೊರನಾಡು ಅನ್ನಪೂರ್ಣೇಶ್ವರಿದೇವಿ

ಜುಲೈ 1ರಿಂದ ದೇವಸ್ಥಾನದ ಬಾಗಿಲು ತೆರೆದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತರು, ಕೆಲವು ನಿಬಂಧನೆಗಳನ್ನು ಪಾಲಿಸಿದರೆ ಮಾತ್ರ ದೇವರ ದರ್ಶನ ಪಡೆಯಬಹುದಾಗಿದೆ.

ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ದೇವಸ್ಥಾನ ಆಡಳಿತ ಮಂಡಳಿ ವಿಧಿಸಿದ ಮಾರ್ಗಸೂಚಿಗಳು:

1. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು ಬರಬೇಕು.

2. ಶ್ರೀಕ್ಷೇತ್ರಕ್ಕೆ ಬರುವ ಭಕ್ತರು, ದೇವಸ್ಥಾನದ ವೆಬ್​​ಸೈಟ್ ಮುಖಾಂತರ ದೇವರ ದರ್ಶನದ ಟಿಕೆಟ್ ಪಡೆದುಕೊಂಡು ಬರಬೇಕು.

3. ದರ್ಶನದ ಟಿಕೆಟ್​​ಗೆ ಯಾವುದೇ ದರ ಇರುವುದಿಲ್ಲ

4. ಆನ್​​ಲೈನ್ ದರ್ಶನದ ಟಿಕೆಟ್ ಪಡೆಯದೆ ಬಂದ ಭಕ್ತರಿಗೆ ಪ್ರವೇಶ ನಿಷೇಧ

5. ದೇವರ ದರ್ಶನದ ಟಿಕೆಟ್ ಪ್ರಿಂಟ್ ಔಟ್ ಕಡ್ಡಾಯವಾಗಿ ತರಲೇಬೇಕು

6. ದರ್ಶನಕ್ಕೆ ನಿಗದಿಯಾದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು

7. ದೇವರ ದರ್ಶನದ ಸಮಯ ಮೀರಿ ಬಂದವರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನಿರಾಕರಣೆ

8.ಮತ್ತೊಮ್ಮೆ ಶ್ರೀಕ್ಷೇತ್ರದ ವೆಬ್​ಸೈಟ್​​ನಲ್ಲಿ ಟಿಕೆಟ್ ಪಡೆದು ದೇವರ ದರ್ಶನ ಪಡೆಯಬಹುದಾಗಿದೆ

9. ದೇವರ ದರ್ಶನಕ್ಕೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಭಕ್ತರಿಗೆ ಅವಕಾಶ

10. ಹತ್ತು ವರ್ಷದ ಒಳಗಿನ ಮಕ್ಕಳಿಗೆ, 65 ವರ್ಷ ಮೇಲ್ಪಟ್ಟ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಅವಕಾಶವಿಲ್ಲ

11. ಮಾಸ್ಕ್ ಧರಿಸದೆ ಬರುವ ಭಕ್ತರಿಗೆ ಪ್ರವೇಶ ನಿರಾಕರಣೆ

12. ಶೀತ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇರುವವರಿಗೆ ಪ್ರವೇಶವನ್ನು ನಿಷೇಧ

13. ದೇವಸ್ಥಾನಕ್ಕೆ ಬರುವ ಭಕ್ತರು ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸುವುದು ಕಡ್ಡಾಯ

14. ದೇವಸ್ಥಾನಕ್ಕೆ ಬರುವ ಭಕ್ತರು ಗೇಟ್​​ನ ಬಳಿ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯ

15. ಭಕ್ತರು 6 ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರಬೇಕು

16. ದೇವಸ್ಥಾನದ ಒಳಗೆ ಪ್ರವೇಶ ಮಾಡಿದ್ರೆ, ದೇವರ ದರ್ಶನ ಹಾಗೂ ಪ್ರಸಾದ ಸ್ವೀಕರಿಸೋದು ಕಡ್ಡಾಯ

17. ದೇವರ ಮುಂದೆ ಕೂರಿಸಿ, ಅರ್ಚನೆ, ಸಮರ್ಪಣೆಗೆ ಅವಕಾಶವಿರುವುದಿಲ್ಲ

18. ಸೇವಾದಾರರ ಪರವಾಗಿಯೇ ಅರ್ಚಕರು ಸಂಕಲ್ಪ ಮಾಡಿ, ಅರ್ಚನೆ, ಪೂಜೆ ಮಾಡಿ ನೆರವೇರಿಸುತ್ತಾರೆ

19. ದೇವರಿಗೆ ತರುವ ಸಮರ್ಪಣ ವಸ್ತುಗಳನ್ನು ತಪಾಸಣೆ ಹಾಗೂ ಶುದ್ಧೀಕರಣಕ್ಕೆ ಒಳಪಡಿಸುವುದು ಕಡ್ಡಾಯ

21. ಪ್ರಸಾದ ನೀಡುವ ಭೋಜನ ಶಾಲೆಯಲ್ಲಿ ಸಾಮಾಜಿಕ ಅಂತರ ಕಡ್ಡಾಯ

22. ಪ್ರಸಾದ ಸ್ವೀಕರಿಸಿದ ನಂತರ ಉಪಯೋಗಿಸಿದ ತಟ್ಟೆಯನ್ನು ಭಕ್ತರು ಸ್ವಚ್ಛವಾಗಿ ತೊಳೆಯಬೇಕು

23. ಭಕ್ತರಿಗೆ ಆಕಸ್ಮಿಕವಾಗಿ ಕೊರೊನಾ ವೈರಸ್ ತಗುಲಿದರೆ ಶ್ರೀ ಕ್ಷೇತ್ರ ಜವಾಬ್ದಾರಿಯಾಗಿರುವುದಿಲ್ಲ

ಈ ಷರತ್ತುಗಳನ್ನು ಪಾಲಿಸಿದರೆ, ಜುಲೈ 1ರಿಂದ ದೇವರ ದರ್ಶನವನ್ನು ಮುಕ್ತವಾಗಿ ಪಡೆಯಬಹುದು ಎಂದು ಶ್ರೀಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.