ಚಿಕ್ಕಮಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿದ್ದವು. ಆದರೆ ಈ ಬಾರಿ ಕೊರೊನಾದಿಂದಾಗಿ ಸಂಭ್ರಮಾಚರಣೆಗೆ ಕೊಕ್ಕೆ ಬಿದ್ದಿದೆ.
ಇಲ್ಲಿನ ಮುಳ್ಳಯ್ಯನಗಿರಿ, ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿ ತಾಣಗಳು ಪ್ರವಾಸಿಗರ ಹಾಟ್ಸ್ಪಾಟ್ ಎನಿಸಿಕೊಂಡಿವೆ. ಹೊಸ ವರ್ಷದ ಸಮಯದಲ್ಲಿ ಈ ಪ್ರವಾಸಿ ತಾಣಗಳು ಜನರಿಂದ ತುಂಬಿರುತ್ತಿದ್ದವು. ಕಣ್ಣು ಹಾಯಿಸಿದಲ್ಲೆಲ್ಲ ಪ್ರವಾಸಿಗರ ದಂಡು ಪ್ರಕೃತಿಯ ನಡುವೆ ವಿಹರಿಸುತ್ತಿತ್ತು. ಆದರೆ ಈ ಬಾರಿ ಎಲ್ಲಾ ಪ್ರವಾಸಿ ತಾಣಗಳು ಜನರಿಲ್ಲದೆ ಭಣಗುಡುತ್ತಿವೆ.
ಇದಷ್ಟೇ ಅಲ್ಲದೆ ಪ್ರವಾಸಿಗರಿಂದಲೇ ತುಂಬಿರುತ್ತಿದ್ದ ಹೋಮ್ ಸ್ಟೇ, ರೆಸಾರ್ಟ್, ಲಾಡ್ಜ್ಗಳು ಈ ಬಾರಿ ಖಾಲಿಯಾಗಿವೆ. ಕೆಲವೇ ಕೆಲವು ಹೋಮ್ ಸ್ಟೇಗಳು ಭರ್ತಿಯಾಗಿದ್ದು, ಇನ್ನುಳಿದವು ಪ್ರವಾಸಿಗರಿಲ್ಲದೆ ಮಂಕಾಗಿವೆ.
ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಹೋಮ್ ಸ್ಟೇಗಳಿದ್ದು, ಹೊಸ ವರ್ಷದಲ್ಲಿ ತಿಂಗಳಿಗೂ ಮೊದಲೇ ಬುಕ್ಕಿಂಗ್ ಆಗಿರುತ್ತಿದ್ದವು. ಆದರೆ ಈ ವರ್ಷ ಮಾತ್ರ ಖಾಲಿ ಹೊಡೆಯುತ್ತಿವೆ.
ಇದನ್ನೂ ಓದಿ: ವಾಣಿಜ್ಯ ನಗರಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕೋವಿಡ್ ತಣ್ಣೀರು