ETV Bharat / state

ಯತ್ನಾಳ್​ರನ್ನು ಹೈಕಮಾಂಡ್ ಶಾಂತವಾಗಿಸುತ್ತೆ: ಸಚಿವ ಪ್ರಭು ಚೌವ್ಹಾಣ್

author img

By

Published : Jan 30, 2021, 10:09 PM IST

ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ರನ್ನು ಹೈಕಮಾಂಡ್ ಶಾಂತವಾಗಿಸುತ್ತೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹೇಳಿದ್ದಾರೆ.

ddsd
ಸಚಿವ ಪ್ರಭು ಚೌವ್ಹಾಣ್ ಹೇಳಿಕೆ

ಚಿಕ್ಕಮಗಳೂರು: ಬಸನಗೌಡ ಪಾಟೀಲ್ ಯತ್ನಾಳ್​ರನ್ನು ಹೈಕಮಾಂಡ್ ಶಾಂತವಾಗಿಸುತ್ತೆ. ಅವರ ವೈಯಕ್ತಿಕ ವಿಚಾರವಿದ ಬಗ್ಗೆ ನಾನು ಏನೂ ಹೇಳಲು ಆಗಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹೇಳಿದ್ದಾರೆ.

ಸಚಿವ ಪ್ರಭು ಚೌವ್ಹಾಣ್

ಯುಗಾದಿ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಗಾಳಿ ಎಂಬ ಯತ್ನಾಳ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಯತ್ನಾಳ್ ನಮ್ಮ ಪಾರ್ಟಿಯವರಾಗಿದ್ದು, ತುಂಬಾ ಹಳಬರು. ಅವರ ಬಗ್ಗೆ ಪ್ರತಿಕ್ರಿಯಿಸಲ್ಲ. ಹಾಸನದಿಂದ ಸಾಕಷ್ಟು ರೈತರು ಕರೆ ಮಾಡುತ್ತಿದ್ದು, ಜಾನುವಾರುಗಳಿಗೆ ಸೂಕ್ತವಾದ ಚಿಕಿತ್ಸೆ ಸಕಾಲದಲ್ಲಿ ದೊರೆಯುತ್ತಿಲ್ಲ ಎಂದಿದ್ದಾರೆ. ವೈದ್ಯರು ರೈತರ ಕರೆಗಳಿಗೆ ಸ್ಪಂದಿಸಿ ಮೂಕ ಪ್ರಾಣಿಗಳಿಗೆ ನೆರವಾಗಿ ಎಂದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಬಗ್ಗೆ ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಕಾಯ್ದೆಯ ಬಗ್ಗೆ ಜನಸಾಮಾನ್ಯರಲ್ಲಿ, ರೈತರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.