ETV Bharat / state

ಕಾಫಿನಾಡಲ್ಲಿ ವರುಣನ ಅಬ್ಬರ...ಹಲವೆಡೆ ಗುಡ್ಡ ಕುಸಿತ, ನೆಲಕ್ಕುರುಳಿದ ಮನೆ

ಭಾರೀ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತ ಉಂಟಾಗುತ್ತಿದೆ. ಅಲ್ಲದೆ ಮೂಡಿಗೆರೆಯ ಬಳಿ ಮನೆಯೊಂದು ನೆಲಕ್ಕುರುಳಿದ್ದು, ನಿವಾಸಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Heavy rain fall in  part of Chikkamagaluru
ಕಾಫಿನಾಡಲ್ಲಿ ವರುಣನ ಅಬ್ಬರ...ಹಲವೆಡೆ ಗುಡ್ಡ ಕುಸಿತ, ನೆಲಕ್ಕುರುಳಿದ ಮನೆ
author img

By

Published : Aug 6, 2020, 8:14 PM IST

ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಮುಂದುವರೆದಿದ್ದು, ಹತ್ತಾರು ಕಡೆಗಳಲ್ಲಿ ಭೂಕುಸಿತ ಮುಂದುವರಿದಿದೆ.

ಮೂಡಿಗೆರೆ ತಾಲೂಕಿನ ಕಳಸ ಸಮೀಪ ಗುಡ್ಡ ಕುಸಿತ ಉಂಟಾಗಿದ್ದು, ಹೊರನಾಡು ಹಾಗೂ ಬಲಿಗೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಭೂಕುಸಿತ ಉಂಟಾಗಿ, ಗುಡ್ಡದ ಮಣ್ಣು ರಸ್ತೆಗೆ ಬಂದು ಅಪ್ಪಳಿಸಿದೆ.

ಕಾಫಿನಾಡಲ್ಲಿ ವರುಣನ ಅಬ್ಬರ...ಹಲವೆಡೆ ಗುಡ್ಡ ಕುಸಿತ, ನೆಲಕ್ಕುರುಳಿದ ಮನೆ

ಈ ರಸ್ತೆ ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ಮಾರ್ಗವಾಗಿದ್ದು, ಈ ಭಾಗದಲ್ಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇನ್ನು ಎನ್​ಆರ್ ಪುರ ತಾಲೂಕಿನಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದ್ದು, ನಿರಂತರ ಮಳೆಯಿಂದ ಇಲ್ಲಿನ ಮಡಬೂರು ಬಳಿ ಮನೆಯೊಂದು ಸಂಪೂರ್ಣ ನೆಲಸಮವಾಗಿದೆ. ಮನೆಯಲ್ಲಿದ್ದ ನಾಲ್ವರು ಸದಸ್ಯರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆ ಬೀಳುವುದನ್ನು ಕಂಡು ಸದಸ್ಯರು ಮನೆಯಿಂದ ಹೊರ ಓಡಿ ಬಂದಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಮಳೆಯಾರ್ಭಟ ಮುಂದುವರಿದಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.