ಚಿಕ್ಕಮಗಳೂರು: ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲ ಎಂದು ಯುವತಿಯೊಬ್ಬಳು ನೇಣು ಬಿಗಿದುಕೊಂಡ ಘಟನೆ ಮುದುಗುಣಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ಪುರ ತಾಲೂಕಿನ ಮುದುಗುಣಿಯಲ್ಲಿರುವ ನವೀನ್ ಲಾಯ್ಡ್ ಮಿಸ್ಕತ್ ಎಂಬುವರ ಕಾಫಿ ತೋಟದಲ್ಲಿ ಈ ಘಟನೆ ನಡೆದಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಹಲ್ಕಿಮಾ (22) ಆತ್ಮಹತ್ಯೆ ಮಾಡಿಕೊಂಡ ಯುವತಿ.
ರಂಜಾನ್ ಹಬ್ಬಕ್ಕೆ ಕುಟುಂಬಸ್ಥರು ಹೊಸ ಬಟ್ಟೆ ಕೊಡಿಸಿಲ್ಲ ಎಂದು ಬೇಸರಗೊಂಡು ವೇಲಿನ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.