ETV Bharat / state

ಯಡಿಯೂರಪ್ಪನವರಿಗೆ ಅಧಿಕಾರ ಕಳೆದುಕೊಳ್ಳುತ್ತೀರಾ ಎಂದು ಹೇಳಿದ್ದೆ: ಗಂಗಾಧರ ಕುಲಕರ್ಣಿ - ದತ್ತ ಪೀಠ ವಿವಾದ

ದತ್ತಾತ್ರೇಯರಿಗೆ ದ್ರೋಹ ಮಾಡಿದರೆ ಬಿಜೆಪಿ ಸರ್ಕಾರವೇ ಉಳಿಯಲ್ಲ. ತಕ್ಷಣವೇ ಬಾಯಿ ಮುಚ್ಚಿಕೊಂಡು ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು. ಈ ಹಿಂದೆ ನಾನು ಯಡಿಯೂರಪ್ಪನವರಿಗೆ ಅಧಿಕಾರ ಕಳೆದುಕೊಳ್ಳುತ್ತೀರಾ ಎಂದು ಹೇಳಿದ್ದೆ. ಹೇಳಿದ ಒಂದೇ ವರ್ಷಕ್ಕೆ ಅವರು ಅಧಿಕಾರ ಕಳೆದುಕೊಂಡ್ರು ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಸರ್ಕಾರದ ವಿರುದ್ಧ ಗುಡುಗಿದರು.

gangadhar-kulakarni-statement-on-bsy
ದತ್ತಪೀಠ
author img

By

Published : Nov 8, 2021, 10:09 PM IST

ಚಿಕ್ಕಮಗಳೂರು: ಯಡಿಯೂರಪ್ಪನವರಿಗೆ ಅಧಿಕಾರ ಕಳೆದುಕೊಳ್ಳುತ್ತೀರಾ ಎಂದು ಹೇಳಿದ್ದೆ. ಹೇಳಿದ ಒಂದೇ ವರ್ಷಕ್ಕೆ ಅವರು ಅಧಿಕಾರ ಕಳೆದುಕೊಂಡ್ರು ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಅವರು ತಮ್ಮ ಹಿಂದಿನ ಮಾತನ್ನು ನೆನೆದರು.

ಶಂಕರಮಠದಲ್ಲಿ ಮಾಲಾಧಾರಣೆ ಮಾಡಿ ಮಾತನಾಡಿದ ಅವರು, ದತ್ತಾತ್ರೇಯರಿಗೆ ದ್ರೋಹ ಮಾಡಿದರೆ ಬಿಜೆಪಿ ಸರ್ಕಾರವೇ ಉಳಿಯಲ್ಲ. ತಕ್ಷಣವೇ ಬಾಯಿ ಮುಚ್ಚಿಕೊಂಡು ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು. ಅಧಿಕಾರಕ್ಕೆ ಬಂದ ಒಂದೇ ತಿಂಗಳಿಗೆ ದತ್ತಪೀಠ ಹಿಂದೂಗಳಿಗೆ ಎಂದು ಹೇಳಿದ್ರಿ. ಅಧಿಕಾರಕ್ಕೆ ಬಂದು ಎರಡ್ಮೂರು ವರ್ಷವಾದ್ರೂ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಿಲ್ಲ. ರಾಜಕಾರಣ ಏನಾದ್ರು ಮಾಡಿಕೊಳ್ಳಿ, ಧರ್ಮ-ಗುರುಗಳ ಜೊತೆ ಹುಡುಗಾಟ ಒಳ್ಳೆದಲ್ಲ. ಈಗ ಸಮಿತಿ ಮಾಡುವ ಅಗತ್ಯವೇನಿದೆ, ಇಷ್ಟು ವರ್ಷ ಎಲ್ಲಾ ಕೋರ್ಟ್ ಕೊಟ್ಟ ತೀರ್ಪಿಗೆ ಕಿಮ್ಮತ್ತಿಲ್ವ ಎಂದು ಗಂಗಾಧರ್ ಕುಲಕರ್ಣಿ ಹೇಳಿದ್ದಾರೆ.

ದತ್ತಮಾಲಾ ಅಭಿಯಾನಕ್ಕೆ ಚಾಲನೆ:

ಶ್ರೀರಾಮಸೇನೆಯ ವತಿಯಿಂದ 17ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಶಂಕರಮಠದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ದತ್ತಮಾಲಾಧಾರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಸೇರಿ ಹಲವರು ಮಾಲಾಧರಣೆ ಮಾಡಿದರು. ಇಂದಿನಿಂದ 7 ದಿನಗಳ ಕಾಲ ಈ ಅಭಿಯಾನ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ನಡೆಯಲಿದೆ. ನವೆಂಬರ್ 14 ರಂದು ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತ ಮಾಲಾಧಾರಿಗಳು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ನವೆಂಬರ್ 14 ರಂದು ರಾಜ್ಯದ ವಿವಿಧ ಮಠಾಧೀಶರು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆಯುವುದರ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.