ETV Bharat / state

ಚಿಕ್ಕಮಗಳೂರು: ಗ್ರಾಮದಲ್ಲಿ ಕೋತಿ ಸಾವು; 11ನೇ ದಿನ ಊರಿಗೆಲ್ಲ ತಿಥಿ ಊಟ - ಈಟಿವಿ ಭಾರತ್ ಕನ್ನಡ ಸುದ್ದಿ

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಮುಗುಳಿ ಗ್ರಾಮದಲ್ಲಿ ಜನ ಕೋತಿಯ ತಿಥಿ ಮಾಡಿದ್ದಾರೆ. ಅಲ್ಲದೇ ಗ್ರಾಮಕ್ಕೆಲ್ಲ ಊಟ ಹಾಕಿಸಿದ್ದಾರೆ.

ಅಜ್ಜಂಪುರದಲ್ಲಿ ಊಟದ ವ್ಯವಸ್ಥೆ
ಅಜ್ಜಂಪುರದಲ್ಲಿ ಊಟದ ವ್ಯವಸ್ಥೆ
author img

By ETV Bharat Karnataka Team

Published : Sep 17, 2023, 9:10 PM IST

ಚಿಕ್ಕಮಗಳೂರು: ವಿದ್ಯುತ್ ಶಾಕ್​ನಿಂದ ಸಾವನ್ನಪ್ಪಿದ್ದ ಕೋತಿಯ 11ನೇ ದಿನದ ತಿಥಿ ಮಾಡಿ, ಊರಿಗೆ ಊಟ ಹಾಕಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಮುಗುಳಿ ಗ್ರಾಮದಲ್ಲಿ ನಡೆದಿದೆ.

11 ದಿನದ ಹಿಂದೆ ಕೋತಿ ಸಾವನ್ನಪ್ಪಿದ್ದಾಗಲೂ ಮುಗುಳಿ ಗ್ರಾಮದ ಜನ ಮನುಷ್ಯರು ಮೃತಪಟ್ಟಾಗ ನಡೆಸುವಂತೆಯೇ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಊರಿನ ತುಂಬಾ ಮೆರವಣಿಗೆ ಮಾಡಿ ಗ್ರಾಮದ ಭೂತನಾಥೇಶ್ವರ ದೇಗುಲದ ಪಕ್ಕದಲ್ಲಿ ಕೋತಿಯ ಅಂತ್ಯ ಸಂಸ್ಕಾರ ಮಾಡಿದ್ದರು. ಶನಿವಾರ ಕೋತಿ ಸಾವನ್ನಪ್ಪಿ 11 ದಿನವಾದ ಹಿನ್ನೆಲೆ ಮುಗುಳಿ ಗ್ರಾಮದ ಸುಮಾರು 250-300 ಮನೆಯ ಜನರೆಲ್ಲರೂ ಒಟ್ಟಿಗೆ ಸೇರಿ ಕೋತಿಯ ತಿಥಿ ಮಾಡಿದ್ದಾರೆ.

ಈ ಕೋತಿ 10 ವರ್ಷಗಳಿಂದ ಗ್ರಾಮದಲ್ಲಿ ಊರಿನ ಮಗನಂತಿತ್ತು. ಊರಿನ ಜನ ಕೋತಿಗೆ ಪ್ರೀತಿಯಿಂದ ಮಾರುತಿ ಎಂದೇ ಕರೆಯುತ್ತಿದ್ದರು. ಒಂದು ಕಾಲು ಕೂಡ ಮುರಿದು ಕುಂಟುತ್ತಾ ಓಡಾಡುತ್ತಿತ್ತು. ಗ್ರಾಮ ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಮುಗುಳಿ ಗ್ರಾಮದಲ್ಲಿ ಸುಮಾರು 250-300ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲರ ಮನೆಯ ಬಳಿಯೂ ಹೋಗುತ್ತಿತ್ತು. ಮಾರುತಿ ಅಂತ ಕರೆದರೆ ಹೋಗಿ ಬಾಳೆಹಣ್ಣು ಪಡೆದುಕೊಂಡು ಬರುತ್ತಿತ್ತು.

ಯಾವುದೇ ಮನೆಯವರು ಏನೇ ಕೊಟ್ಟರು ತಿನ್ನುತ್ತಿತ್ತು. ಯಾರಿಗೂ ತೊಂದರೆ ಮಾಡುತ್ತಿರಲಿಲ್ಲ. ತಟ್ಟೆಯಲ್ಲಿ ಅನ್ನ ಹಾಕಿಕೊಟ್ಟರೆ ಮನುಷ್ಯರಂತೆಯೇ ಊಟ ಮಾಡುತ್ತಿತ್ತು. ಆದರೆ, ಮರದಿಂದ ಮರಕ್ಕೆ ಹಾರುವಾಗ ಅಚಾನಕ್ಕಾಗಿ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿತ್ತು.

ಅಂದು ಸಾವನ್ನಪ್ಪಿದ ಕೋತಿಗೆ ಊರಿನ ತುಂಬಾ ಮೆರವಣಿಗೆ ಮಾಡಿ ಗ್ರಾಮದ ಭೂತನಾಥೇಶ್ವರ ದೇವಾಲಯದ ಪಕ್ಕದಲ್ಲಿ ಅಂತ್ಯ ಸಂಸ್ಕಾರ ಮಾಡಿ, ಕೋತಿಯ ತಿಥಿ ಮಾಡಲು ನಿರ್ಧರಿಸಿದ್ದರು. ಅದರಂತೆ ನಿನ್ನೆ, ಊರಿನ ಜನರೆಲ್ಲಾ ಸೇರಿ, ಹಣ ಸಂಗ್ರಹಿಸಿ ಕೋತಿಯ ತಿಥಿ ಮಾಡಿ ಇಡೀ ಊರಿಗೆ ಊಟ ಹಾಕಿಸಿದ್ದರು.

ಇದನ್ನೂ ಓದಿ: ಬಿಟ್ಟೋಗಬೇಡ ಅಮ್ಮ.. ತಾಯಿ ಕಳೇಬರ ತಬ್ಬಿಕೊಂಡು ಮರಿಕೋತಿಯ ಮೂಕ ರೋಧನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.