ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಚಾರ್ಮಾಡಿ ಘಾಟ್ನಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನ ಆಲೇಕಾನ್ ಸಮೀಪ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಸಾಕಷ್ಟು ಪೆಟ್ರೋಲ್ ಸೋರಿಕೆಯಾಗಿದೆ. ಮಂಗಳೂರಿನಿಂದ ಮಾಗುಂಡಿಗೆ ಟ್ಯಾಂಕರ್ ಸಂಚರಿಸುತ್ತಿತ್ತು ಎಂದು ತಿಳಿದುಬಂದಿದೆ.
ಟ್ಯಾಂಕರ್ನಲ್ಲಿ 8,000 ಲೀಟರ್ ಪೆಟ್ರೋಲ್, 4000 ಲೀಟರ್ ಡೀಸೆಲ್ ಸಂಗ್ರಹವಿತ್ತು ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಣಕಲ್ ಪೊಲೀಸರು ಆಗಮಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಟೈರ್ ಸ್ಫೋಟಗೊಂಡು ಟಾಟಾ ಸುಮೋ ಪಲ್ಟಿ: ನೆಲಮಂಗಲದಲ್ಲಿ ತಾತ, ಮೊಮ್ಮಗ ಸಾವು