ಚಿಕ್ಕಮಗಳೂರು: ಮನೆಯ ಕಾಂಪೌಂಡ್ ಬಳಿ ಬರೋಬ್ಬರಿ ನಾಲ್ಕು ನಾಗರ ಹಾವುಗಳು ಪತ್ತೆಯಾದೆ. ನಾಲ್ಕು ಹಾವುಗಳನ್ನು ನೋಡಿ ಮನೆಯ ಸದಸ್ಯರು ಬೆಚ್ಚಿ ಬಿದ್ದಿದ್ದಾರೆ. ಮೂಡಿಗೆರೆ ತಾಲೂಕಿನ ಬಿಜೆಪಿ ಮುಖಂಡ ಹಳಸೆ ಶಿವಣ್ಣ ಎಂಬುವರ ಮನೆಯಲ್ಲಿ ಹಾವು ಕಾಣಿಸಿಕೊಂಡಿದೆ.
ಕೂಡಲೆ ಶಿವಣ್ಣ ಉರಗ ತಜ್ಞ ಆರಿಪ್ಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಣಕಲ್ ಸ್ನೇಕ್ ಆರೀಫ್ ಸತತ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಒಂದು ನಾಗರ ಹಾವು ಹಿಡಿಯಲು ಹೋದಾಗ ಮಿಕ್ಕ ಮೂರು ಹಾವುಗಳು ಗೋಚರಿಸಿವೆ. ಉರಗ ತಜ್ಞ ಒಂದೇ ಸ್ಥಳದಲ್ಲಿ ಇಷ್ಟೊಂದು ಹಾವುಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ನಿರಂತರ ಕಾರ್ಯಚರಣೆ ಬಳಿಕ ಸೆರೆ ಹಿಡಿದ ನಾಲ್ಕು ಹಾವುಗಳನ್ನು ಚಾರ್ಮಾಡಿ ಅರಣ್ಯಕ್ಕೆ ಬಿಡಲಾಗಿದೆ.
ಇದನ್ನೂ ಓದಿ: ಮೈಸೂರು: ಸೆರೆ ಹಿಡಿದ ಚಿರತೆ ತೋರಿಸುವಂತೆ ಗ್ರಾಮಸ್ಥರ ಪಟ್ಟು