ಚಿಕ್ಕಮಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಪುನರ್ ಜನ್ಮ ನೀಡಿದ ಕಾಪಿನಾಡು ಚಿಕ್ಕಮಗಳೂರಿನಲ್ಲಿ ಅವರ 102 ನೇ ಜನ್ಮ ದಿನಾಚರಣೆ ಹಾಗೂ ನೂತನ ಜಿಲ್ಲಾಧ್ಯಕ್ಷ ಡಾ.ಅಂಶು ಮಂತ್ ಅವರ ಪದಗ್ರಹಣ ಕಾರ್ಯಕ್ರಮವನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ರಾಜ್ಯ ಮುಖಂಡರು ಜಿಲ್ಲೆಗೆ ಆಗಮಿಸಿದ್ದರು. ನಗರದ ಹನುಮಂತಪ್ಪ ವೃತ್ತದಿಂದ ಬಸವನಹಳ್ಳಿ- ಪುಡ್ ಪ್ಯಾಲೇಸ್ ರಸ್ತೆಯ ಮೂಲಕ ಜಿಲ್ಲಾ ಒಕ್ಕಲಿಗರ ಸಭಾಭವನದವರೆಗೂ ತೆರೆದ ವಾಹನದಲ್ಲಿ ರಾಜ್ಯ ನಾಯಕರ ಮೆರವಣಿಗೆ ಮಾಡಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಕ್ರೇನ್ನಲ್ಲಿ ಗುಲಾಬಿ ಹೂವಿನ ಹಾರ ಹಾಕಿದ್ದು ವಿಶೇಷವಾಗಿತ್ತು.