ಚಿಕ್ಕಮಗಳೂರು : ಕೊರೊನಾ ವಿರುದ್ಧ ಹೋರಾಟ ನಡೆಸಲು ಕರೆ ನೀಡಿರುವ ಲಾಕ್ಡೌನ್ ಅನ್ನು ಎಲ್ಲರೂ ಸ್ವಾಗತಿಸಬೇಕೆಂದು ಕಾಂಗ್ರೆಸ್ನ ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಹೇಳಿದ್ದಾರೆ.
ಲಾಕ್ಡೌನ್ನಿಂದಾಗಿ ಹಲವಾರು ಸಮಸ್ಯೆಗಳು ಕೂಡ ಉದ್ಭವವಾಗಿದ್ದು, ಪ್ರತಿನಿತ್ಯ ದುಡಿದು ಅಂದೇ ಊಟ ಮಾಡುವವರು, ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಬಡವರು, ನಿರ್ಗತಿಕರು, ರೈತರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದರು.
ರೈತರು ಬೆಳೆದ ಹೂ, ತರಕಾರಿ ಬೆಳೆಗಳನ್ನು ಸಾಗಾಟ ಮಾಡಲು ಸರಿಯಾದ ವ್ಯವಸ್ಥೆ ಆಗಿಲ್ಲ. ಈ ಕುರಿತು ಸರ್ಕಾರ ಗಮನ ಹರಿಸಬೇಕಿದೆ. ದೇಶದಲ್ಲಿ ಲಾಕ್ ಡೌನ್ ನಿಯಮವನ್ನು ಶೇ 90 ಜನರು ಪಾಲನೆ ಮಾಡುತ್ತಿದ್ದಾರೆ. ಆದರೇ ಶೇ 10 ಜನರು ಪಾಲನೆ ಮಾಡುತ್ತಿಲ್ಲ ಎಂದೂ ಬೇಸರ ವ್ಯಕ್ತಪಡಿಸಿದರು.