ಚಿಕ್ಕಮಗಳೂರು : ಕಡೂರು ತಾಲೂಕಿನ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅರೆಕಲ್ಲಮ್ಮನ ಜಾತ್ರೆಯಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಡ್ಯಾನ್ಸ್ ಮಾಡಿದ್ದು, ಅವರ ಸ್ವಗ್ರಾಮದಲ್ಲಿ ನಡೆದ ಅರೆಕಲ್ಲಮ್ಮನ ಜಾತ್ರೆಯಲ್ಲಿ ತಮಟೆ ಸದ್ದಿಗೆ ಮಾಜಿ ಶಾಸಕ ಭರ್ಜರಿ ಡ್ಯಾನ್ಸ್ ಮಾಡಿ ಭಕ್ತರ ಜೊತೆ ಅವರು ಕುಣಿದು ಕುಪ್ಪಳಿಸಿದ್ದಾರೆ. ಗ್ರಾಮ ದೇವತೆಯ ಜಾತ್ರೆಯಲ್ಲಿ ಪಾಲ್ಗೊಂಡ ವೈ.ಎಸ್.ವಿ. ದತ್ತಾ ಅವರು ಕ್ಷೇತ್ರದಲ್ಲಿ ಸರಳ, ಸಜ್ಜನಿಕೆಯ ರಾಜಕಾರಣಿ ಎಂದೇ ಹೆಸರುವಾಸಿಯಾಗಿದ್ದಾರೆ.
ಇನ್ನು ಗ್ರಾಮಸ್ಥರೊಂದಿಗೆ ಹಳ್ಳಿಯ ತಮಟೆ ಸದ್ದಿಗೆ ಹಾಗೂ ವಾದ್ಯದ ಸದ್ದಿಗೆ ಡ್ಯಾನ್ಸ್ ಮಾಡಿದ್ದು, ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಕೂಡ ಮಾಜಿ ಶಾಸಕರ ಜೊತೆ ಹೆಜ್ಜೆ ಹಾಕಿದ್ದಾರೆ.