ETV Bharat / state

ಶೃಂಗೇರಿಗೆ ಭೇಟಿ ನೀಡಲಿರುವ ಮಾಜಿ ಸಿಎಂ ಹೆಚ್​ಡಿಕೆ: ಪಂಚರತ್ನ ಯಾತ್ರೆಗೆ ಚಾಲನೆ - ಈಟಿವಿ ಭಾರತ ಕನ್ನಡ

ಶೃಂಗೇರಿಗೆ ಭೇಟಿ ನೀಡಲಿರುವ ಹೆಚ್​ಡಿಕೆ - ಶಾರಂದಾಬೆಯ ದರ್ಶನ ಪಡೆಯಲಿರುವ ಕುಮಾರಸ್ವಾಮಿ - ಶೃಂಗೇರಿ ಮಠದಿಂದ ಪಂಚರತ್ನ ಯಾತ್ರೆಗೆ ಚಾಲನೆ

sringeri
ಶೃಂಗೇರಿಗೆ ಭೇಟಿ ನೀಡಲಿರುವ ಹೆಚ್​ಡಿಕೆ
author img

By

Published : Feb 24, 2023, 7:39 AM IST

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದರು. ಇದೀಗ ಜೆಡಿಎಸ್​ ನಾಯಕ ಹೆಚ್​ಡಿ ಕುಮಾರಸ್ವಾಮಿ ಅವರು ಕೂಡ ಶೃಂಗೇರಿಗೆ ಆಗಮಿಸಲಿದ್ದಾರೆ. ಇಂದು ರಾತ್ರಿ ಶೃಂಗೇರಿ ತಲುಪಲಿರುವ ಎಚ್​ಡಿಕೆ ಶಾರಂದಾಬೆಯ ದರ್ಶನವಾದ ಬಳಿಕ ಉಭಯ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ.

ನಾಳೆ ಬೆಳಗಿನ ಪೂಜೆಯಲ್ಲಿ ಕುಮಾರಸ್ವಾಮಿ ಭಾಗಿಯಾಗಲಿದ್ದು, ಆ ನಂತರದಲ್ಲಿ ಜೆಡಿಎಸ್​ ಪಂಚರತ್ನ ಯಾತ್ರೆಗೆ ಶೃಂಗೇರಿ ಮಠದಿಂದ ಚಾಲನೆ ನೀಡಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 4 ದಿನಗಳ ಕಾಲ ಪಂಚರತ್ನ ಯಾತ್ರೆ ನಡೆಯಲಿದೆ. ಇತ್ತೀಚೆಗೆ ಕುಮಾರಸ್ವಾಮಿ ಅವರು ಶೃಂಗೇರಿ ಮಠ ಮತ್ತು ಬ್ರಾಹ್ಮಣರ ವಿರುದ್ಧ ಹೇಳಿಕೆ ನೀಡಿದ್ದರು. ಇದು ಬ್ರಾಹ್ಮಣ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಹೆಚ್​ಡಿಕೆ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದು, ತಮ್ಮ ಹೇಳಿಕೆಯನ್ನು ವಾಪಸ್​ ಪಡೆಯುತ್ತಾರಾ? ಎಂದು ಕಾದುನೋಡಬೇಕಿದೆ.

'ಶಾಸಕರನ್ನು ಸಚಿವರನ್ನಾಗಿ ಮಾಡುವೆ..' ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿರುವ ಜೆಡಿಎಸ್​ ಪಂಚರತ್ನ ರಥಯಾತ್ರೆಯನ್ನು ಮುಂದುವರೆಸಿದೆ. ಜೆಡಿಎಸ್​ ಅಧಿಕಾರಕ್ಕೆ ಬಂದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಜಿಲ್ಲೆಯ ಜನತೆಗೆ ಹೆಚ್​ಡಿ ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿರುವ ಅವರು, "ಜನಪರ ಕಾಳಜಿಯುಳ್ಳ ನನ್ನ ತಂಗಿ ಶಾರದಾ ಪೂರಾರಯ ನಾಯ್ಕ್​ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಕೊಡಿ. ಇದರಿಂದಾಗಿ ಈ ಕ್ಷೇತ್ರದ ಜನತೆಗೆ ಒಳ್ಳೆಯ ಅವಕಾಶ ದೊರೆಯಲಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾರ್ಚ್​ನೊಳಗೆ ಏಳನೇ ವೇತನ ಆಯೋಗದ ವರದಿ ಜಾರಿಗೊಳಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ‌

"ಕುಟುಂಬದಲ್ಲಿ ಯಾರಿಗಾದರೂ ಖಾಯಿಲೆಗಳು ಬಂದಲ್ಲಿ 30 ರಿಂದ 40 ಲಕ್ಷ ಖರ್ಚಾಗುವುದು ಸರ್ವೇ ಸಾಮಾನ್ಯ. ನಾನು ಮಲವ ಗೊಪ್ಪದಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಎರಡು ಕುಟುಂಬಗಳು ನನ್ನ ಬಳಿ ಬಂದಿದ್ದರು. ಒಂದು ಕುಟುಂಬದವರು 50 ಲಕ್ಷ ಮತ್ತು ಇನ್ನೊಂದು ಕುಟುಂಬದವರು 35 ಲಕ್ಷದ ಅಗತ್ಯವಿದೆ ಎಂದು ಹೇಳಿದ್ದರು. ಆದರೆ ನಾನು ವೈಯಕ್ತಿಕವಾಗಿ ಎಲ್ಲಿಂದ ಹಣ ತರಲು ಸಾಧ್ಯ? ನಾನೇನು ದೊಡ್ಡ ಶ್ರೀಮಂತನಲ್ಲ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದರೂ ಸಹ ಬೇರೆ ರಾಜಕಾರಣಿಗಳಂತೆ ಹಣ ಲೂಟಿ ಮಾಡಿ, ಆಸ್ತಿ ಸಂಪಾದನೆ ಮಾಡಿಲ್ಲ. ನಾನು ಈಗಲೂ ರೈತನಾಗಿಯೇ ಬದುಕುತ್ತಿದ್ದೇನೆ" ಎಂದು ನುಡಿದಿದ್ದಾರೆ.

"30 ಹಾಸಿಗೆಯುಳ್ಳ ಸುಸಜ್ಜಿತ ಆರೋಗ್ಯ ಕೇಂದ್ರವನ್ನು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆದು ದಿನದ 24 ಗಂಟೆಯೂ ಉಚಿತ ಚಿಕಿತ್ಸೆಯನ್ನು ನೀಡುವುದು ನಮ್ಮ ಪಕ್ಷದ ಗುರಿಯಾಗಿದೆ. ಭಗವಂತ ನನಗೆ ಅಧಿಕಾರ ಕೊಟ್ಟಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. 25 ಸಾವಿರ ಕೋಟಿ ಸಾಲ ಮನ್ನಾ ಮಾಡಿ 26 ಲಕ್ಷ ಕುಟುಂಬಗಳಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ಮಳೆಗಾಲ ಪ್ರಾರಂಭದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿ ಮಾಡುವುದಕ್ಕೆ 1 ಎಕರೆಗೆ 10 ಸಾವಿರದಂತೆ 10 ಎಕರೆಗೆ 1 ಲಕ್ಷದವರೆಗೆ ರೈತ ಬಂದು ಯೋಜನೆಯಡಿ ಸರ್ಕಾರದ ವತಿಯಿಂದ ಧನಸಹಾಯ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ತರಬೇತಿ ಜೊತೆಗೆ ಆರ್ಥಿಕ ನೆರವನ್ನು ನೀಡಲಾಗಿದೆ" ಎಂದರು.

ಇದನ್ನೂ ಓದಿ: ಗುತ್ತಿಗೆಯಲ್ಲಿ ಎನ್ಓಸಿ ನೀಡಲು ಹಣ ಪಡೆದಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.