ETV Bharat / state

ಮೊದಲು ಅವರ ಕುಟುಂಬದ ಸಮಸ್ಯೆ ಬಗೆಹರಿಸಿಕೊಳ್ಳಲಿ: ಜೋಶಿ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಚಿಕ್ಕಮಗಳೂರು ಜಿಲ್ಲೆಯ ಎನ್​​​ಆರ್ ಪುರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಮುಂದುವರೆದಿದೆ. ಈ ವೇಳೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

former cm HD kumaraswamy
ಹೆಚ್‍.ಡಿ ಕುಮಾರಸ್ವಾಮಿ
author img

By

Published : Feb 27, 2023, 7:37 AM IST

Updated : Feb 27, 2023, 12:32 PM IST

ಜೋಶಿ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಚಿಕ್ಕಮಗಳೂರು: ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಟಿಕೆಟ್ ಕೊಟ್ಟರೂ ಅವರಲ್ಲಿ ಬಡೆದಾಟ ಸಾಮಾನ್ಯ. ಮೊದಲು ಕುಟುಂಬ ಸರಿ ಮಾಡಿಕೊಳ್ಳಲಿ. ಆಮೇಲೆ ರಾಜ್ಯ ಆಳಲು ಬರಲಿ ಎಂದು ಜೋಶಿ ವ್ಯಂಗ್ಯವಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಹೆಚ್​ಡಿಕೆ ಅವರ ಸಹೋದರನೇ ಅವರ ವಿರುದ್ಧ ನಿಂತಿದ್ದಾನೆ. ಅವರ ಅನ್ಯಾಯದ ವಿರುದ್ಧ ದಾಖಲೆ ನೀಡುತ್ತೇನೆ ಎಂದು ನನಗೆ ಕರೆ ಮಾಡುತ್ತಾನೆ. ಮೊದಲು ಅವರ ಕುಟುಂಬದ ಸಮಸ್ಯೆ ಬಗೆ ಹರಿಸಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ಎನ್‌.ಆರ್‌ ಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಲು ನಡೆಸುತ್ತಿರುವ ಹೋರಾಟ. ಇದು ಕುಟುಂಬ ಕಲಹ ಅಲ್ಲ. ಜನರ ಸೇವೆ ಮಾಡಲು ಮುಂದೆ ಬರುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ಯಾರು ಲೂಟಿ ಹೊಡೆಯಲು ಮುಂದೆ ಬರುತ್ತಿಲ್ಲ. ಬದಲಾಗಿ ಜನರ ಸೇವೆ ಮಾಡಲು ಮುಂದೆ ಬರುತ್ತಿದ್ದಾರೆ. ರಾಮಾಯಣ, ಮಹಾಭಾರತದಲ್ಲೂ ಅಧಿಕಾರಕ್ಕಾಗಿ ಹೋರಾಟ ನಡೆದಿದೆ. ಇದು ನಮ್ಮ ಸಂಸ್ಕೃತಿ. ಇದನ್ನ ಯಾರು ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಈ ವೇಳೆ ಯಡಿಯೂರಪ್ಪ ವಿರುದ್ಧವೂ ವಾಗ್ದಾಳಿ ನಡೆಸಿದ ಹೆಚ್​ಡಿಕೆ ನಾವು ಏಕೆ ಅತಂತ್ರ ಆಗಿದ್ದೇವೆ. ಅತಂತ್ರದಲ್ಲಿರುವುದು ಬಿಜೆಪಿ ಹಾಗೂ ಯಡಿಯೂರಪ್ಪ. ಅವರ ಸ್ಥಿತಿ ಅವರಿಗೇ ಗೊತ್ತಿಲ್ಲ ನಮ್ಮ ಬಗ್ಗೆ ಮಾತನಾಡುವುದು ಏಕೆ. ಬಿಜೆಪಿ ಪಕ್ಷ ಯಾವ ಸ್ಥಿತಿಯಲ್ಲಿದೆ ನೋಡಿಕೊಳ್ಳಲಿ. ನಾನು 18 ಗಂಟೆ ಕೆಲಸ ಮಾಡುತ್ತಿರುವುದು 123 ಮಿಷನ್​​​​ಗಾಗಿ. ಬಿಜೆಪಿಯವರ ರೀತಿ ಲೂಟಿ ಹೊಡೆಯಲು ಅಲ್ಲ. ಈ ರಾಜ್ಯದ ಅಭಿವೃದ್ಧಿಗಾಗಿ, ಜನರ ಸೇವೆಗಾಗಿ ಕ ದೇವೇಗೌಡರ ಕುಟುಂಬ ಹೋರಾಟ ಮಾಡುತ್ತಿದೆ ಎಂದರು.

ಅರಣ್ಯ ಕಾಯ್ದೆ ಸಮಸ್ಯೆಗೆ ಶಾಶ್ವತ ಪರಿಹಾರ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ 3ನೇ ದಿನಕ್ಕೆ ಕಾಲಿಟ್ಟಿದೆ. ಎನ್​ಆರ್​​ಪುರ ತಾಲೂಕಿನಲ್ಲಿ ಮಾಜಿ ಸಿಎಂ ಹೆಚ್​​ಡಿಕೆ ಜೆಡಿಎಸ್ ಅಭ್ಯರ್ಥಿ ಸುಧಾಕರ ಶೆಟ್ಟಿ ಪರ ಪ್ರಚಾರ ಮಾಡುತ್ತಿದ್ಧಾರೆ. ಈ ವೇಳೆ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದರೆ ಈ ಭಾಗದಲ್ಲಿ ಆನೆಗಳ ದಾಳಿ ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತೇನೆ. ಮನೆಗಳ ನಿರ್ಮಾಣದ ಸಮಸ್ಯೆಗೆ ಪರಿಹಾರ ಹುಡುಕುತ್ತೇವೆ.

ಜತೆಗೆ ಅರಣ್ಯ ಕಾಯ್ದೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇವೆ. ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಹೊಸ ಹೊಸ ಯೋಜನೆ ರೂಪಿಸುತ್ತೇವೆ. ಮಹಿಳೆಯರು ಸ್ವಾವಲಂಬನೆ ಜೀವನಕ್ಕೆ ವಿಶೇಷ ಆದ್ಯತೆ ನೀಡುತ್ತೇವೆ. ಅಡಿಕೆಗೆ ಚುಕ್ಕೆ ರೋಗ ಸೇರಿದಂತೆ ಈ ಭಾಗದ ರೈತರ ಸಮಸ್ಯೆಗೆ ಪಂಚರತ್ನ ಯೋಜನೆ ಮೂಲಕ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಹಾಸನ ಗೊಂದಲ ಬಗೆಹರಿಸುವ ಶಕ್ತಿಯಿದೆ: ಹಾಸನಕ್ಕೆ ಹೋಗುತ್ತೇನೆ ಅಷ್ಟೆ. ಕಾರ್ಯಕರ್ತರನ್ನು ಭೇಟಿ ಮಾಡಲ್ಲ. ಸಮಾನ ಮನಸ್ಕರನ್ನು ಕಚೇರಿಗೆ ಬರಲು ಹೇಳಿದ್ದೇನೆ. ಜನರಲ್ಲಿ ಬೇರೆ ಭಾವನೆ ಬರದಬಾರದು ಅಂತಾ ಬರಲು ಹೇಳಿದ್ದೆ. ನಮ್ಮ ಪಕ್ಷದ ಬಗ್ಗೆ ಯಾರೂ ಬೆಟ್ಟು ಮಾಡುವಂತಿಲ್ಲ. ಹಾಸನದ ಗೊಂದಲದ ಬಗ್ಗೆ ಕಾರ್ಯಕರ್ತರ ಬಳಿ ಸಮಾಲೋಚನೆ ಮಾಡಲು ಬರ ಹೇಳಿದ್ದೆ. ಕರೀಗೌಡರು ನಮ್ಮ ಜೊತೆ ಸಂಪರ್ಕ ಇಲ್ಲ. ಸಭೆ ಕರೆಯಲ್ಲ, ರಾಷ್ಟ್ರೀಯ ಅಧ್ಯಕ್ಷ ಕರೆಯುತ್ತಾರೆ. ಹಾಸನ ವಿಚಾರ ಅವರ ಬಳಿ ಮಾತಮಾಡಲ್ಲ. ಅವರ ಆರೋಗ್ಯ ಕೆಡಿಸಲು ಬಯಸಲ್ಲ. ಬೇರೆಯವರಿಹೆ ಅವರ ಆರೋಗ್ಯದ ಬಗೆ ಕಾಳಜಿ ಇಲ್ಲ. ಹಾಸನ ಗೊಂದಲ ಬಗೆಹರಿಸುವ ಶಕ್ತಿ ಇದೆ ಎಂದು ಹೆಚ್​​ಡಿಕೆ ಸ್ಪಷ್ಟನೆ ನೀಡಿದರು.

ಸುಧಾಕರ್ ವಿರುದ್ಧ ವಾಗ್ದಾಳಿ: ಬಳಿಕ ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ " ನಿನಗೆ ಹಳೆ ಚರಿತ್ರೆ ಗೊತ್ತಿಲ್ಲ ಕಣಪ್ಪ. ನಿನ್ನೆ ಮೊನ್ನೆ ಹೋಗಿ ಸೇರಿ ಏನೇನು ಮಾಡಿದ್ದೀಯಾ ಅಂತಾ ಜಗಜ್ಜಾಹೀರಾಗಿದೆ. ಆಸ್ಪತ್ರೆಗೆ ಓರ್ವ ಡಾಕ್ಟರ್ ನೇಮಕ ಮಾಡಲು ಆಗಿಲ್ಲ. ಆಸ್ಪತ್ರೆಗಳು ಹೇಗಿವೆ. ಮೆಡಿಕಲ್ ಕಾಲೇಜಿಗೆಗೆ ಅಸಿಸ್ಟೆಂಟ್ ಫ್ರೊಫೆಸರ್ ನೇಮಿಸಲು ಏನು ಮಾಡಿದ್ರಿ. ಬಿಜೆಪಿ ವಿಧಾನ ಪರಿಷತ್​​ನಲ್ಲಿ ಪ್ರಮುಖ ಸ್ಥಾನದವರ‌ ಮಗಳಿಗೆ ಎಷ್ಟು ಕೇಳಿದ್ರಿ. ಅವರ ಬಳಿ 50 ಲಕ್ಷ ಕೇಳಿದ್ದಾರೆ. ಕೆಜೆಪಿ ಮಾಡಿದಾಗ ಇದೇ ಬಿಎಸ್​​​ವೈ ಬಸವರಾಜ ಬೊಮ್ಮಾಯಿ, ಜಗದೀಶ್​ ಶೆಟ್ಟರ್​, ಕೆ.ಎಸ್​.ಈಶ್ವರಪ್ಪ ಮತ್ತು ಸದಾನಂದಗೌಡ ಮಾಡಿದ ಆರೋಪಗಳ ಪೇಪರ್ ಕಟಿಂಗ್ಸ್​ ಇದೆ. 5 ಕೋಟಿ ಚೆಕ್‌ ವ್ಯವಹಾರದಲ್ಲಿ ಸದಾನಂದಗೌಡರದ್ದೇ ಸಹಿ ಇದೆ. ನಾನು ಸಾಬೀತು ಮಾಡದೇ ಇದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಅಂತ ಯಡಿಯೂರಪ್ಪ ಹೇಳಿಲ್ವಾ? ಎಂದು ಪ್ರಶ್ನಿಸಿದರು.

ನಾನು ಗಾಳಿ ಉತ್ತರ ಕೊಡಲ್ಲ. ನನ್ನನ್ನ ಕೆಣಕಬೇಡಿ. ಭ್ರಷ್ಟಾಚಾರದ ಬಗ್ಗೆ ನಾನು ಚರ್ಚೆ ಮಾಡುತ್ತಿಲ್ಲ, ಮಾಡಿದರೆ ಸಾಕಷ್ಟು ತರುತ್ತೇನೆ. ಕಾಂಗ್ರೆಸ್​​ಗೂ ನನಗೂ ವ್ಯತ್ಯಾಸ ಇದೆ. ಬೇಕು ಅಂದರೆ ದಾಖಲೆ ಸಮೇತ ಕೊಡ್ತೀನಿ. ಈ ದೇಶದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಬಗ್ಗೆ ತಾರ್ಕಿಕ ಅಂತ್ಯ ಅಸಾಧ್ಯ. ಅದಕ್ಕೆ ಮಾತನಾಡುವುದನ್ನ ಬಿಟ್ಟಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಭಾವನಾತ್ಮಕ ಸಂಬಂಧಗಳಿಗಿಂತ ಪಕ್ಷದ ಹಿತ ಮುಖ್ಯ: ಹೆಚ್.ಡಿ.ಕುಮಾರಸ್ವಾಮಿ

Last Updated : Feb 27, 2023, 12:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.