ETV Bharat / state

ಬೀದಿ ನಾಯಿಗಳ ದಾಳಿಯಿಂದ ಕಾಡು ಕುರಿ ರಕ್ಷಿಸಿದ ವಿದ್ಯಾರ್ಥಿಗಳು

ಕಳಸ ಪ್ರಥಮ ದರ್ಜೆ ಕಾಲೇಜಿಗೆ ಬಂದಿದ್ದ ಕಾಡು ಕುರಿಯನ್ನು ನಾಯಿಗಳ ದಾಳಿಯಿಂದ ಇಲ್ಲಿನ ವಿದ್ಯಾರ್ಥಿಗಳು ರಕ್ಷಿಸಿದ್ದಾರೆ.

Forest sheep
Forest sheep
author img

By

Published : Apr 11, 2021, 3:48 PM IST

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ನಗರದಲ್ಲಿ ಬೀದಿ ನಾಯಿಗಳು ಕಾಡು ಕುರಿಯೊಂದನ್ನು ಹಿಡಿದು ಅಟ್ಟಾಡಿಸಿಕೊಂಡು ಬಂದಿದ್ದವು. ಈ ವೇಳೆ ದಿಕ್ಕೆಟ್ಟ ಕಾಡು ಕುರಿ ಬೇರೆ ದಾರಿ ಕಾಣದೆ ಪ್ರಥಮ ದರ್ಜೆ ಕಾಲೇಜಿಗೆ ನುಗ್ಗಿ ನಾಯಿ ಬಾಯಿಯಿಂದ ತಪ್ಪಿಸಿಕೊಂಡಿದೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಕಾಡು ಕುರಿಯನ್ನು ಹಿಡಿದು ನಾಯಿಗಳನ್ನು ಓಡಿಸಿದ್ದಾರೆ.

ಈ ಬಗ್ಗೆ ಕಳಸ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ನಾಯಿ ಕಚ್ಚಿ ಗಾಯಗೊಂಡಿದ್ದ ಕಾಡುಕುರಿಗೆ ಪಶು ವೈದ್ಯಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.