ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ, ಪಿಎಸ್ಐ ಅರ್ಜುನ್ ಅವರು ದಲಿತ ಯುವಕ ಪುನೀತ್ಗೆ ಮೂತ್ರ ಕುಡಿಸಿದ ಪ್ರಕರಣ, ದಿನದಿಂದ ದಿನಕ್ಕೆ ನಾನಾ ತಿರುವು ಪಡೆದುಕೊಳ್ಳುತ್ತಿದೆ.
ಪುನೀತ್ ನಿಂದಾಗಿ ನನ್ನ ಸಂಸಾರ ಹಾಳಾಗಿ ಹೋಗಿದೆ ಎಂದು ಪುನೀತ್ ವಿರುದ್ಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಮಹಿಳೆ ಎಫ್ಐಆರ್ ದಾಖಲಿಸಿದ್ದಾರೆ. ಅವನು ನನಗೆ ಕರೆ ಮಾಡಿ ಪದೇ ಪದೆ ಕರೆಯುತ್ತಿದ್ದ. ನನ್ನ ಗಂಡನಿಲ್ಲದ ವೇಳೆ ಮನೆಗೆ ಬರಲು ಯತ್ನಿಸುತ್ತಿದ್ದ. ನನ್ನ ಜೊತೆ ಸಹಕರಿಸು, ಮಲಗು ಎಂದು ಪೀಡಿಸುತ್ತಿದ್ದ ಎಂದು ಪುನೀತ್ ಮೇಲೆ ಈ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೆಲ್ಲಾ ನಾನು ನನ್ನ ಗಂಡನಿಗೆ ಹೇಳಿದ್ದೇನೆ. ಪುನೀತ್ ನಿಂದಾಗಿ ನನ್ನ ಗಂಡ ನನ್ನನ್ನು ತವರು ಮನೆಗೆ ಕಳುಹಿಸಿದ್ದಾರೆ. ನನ್ನ ತಾಯಿ ಮನೆಯಲ್ಲಿ ಇರಲು ನನಗೆ ಆಗುತ್ತಿಲ್ಲ. ಸಂಸಾರ ಹಾಳಾಗಲು ಕಾರಣವಾಗಿರೋ ಪುನೀತ್ ವಿರುದ್ಧ ಕ್ರಮ ಆಗಬೇಕು ಎಂದು ಮಹಿಳೆ ಆಗ್ರಹಿಸಿದ್ದಾಳೆ.
ಇದನ್ನೂ ಓದಿ: ದಲಿತ ಯುವಕನಿಗೆ ಎಸ್ಐ ಮೂತ್ರ ಕುಡಿಸಿದ ಆರೋಪ: ಎಸ್ಪಿ ಅಮಾನತಿಗೆ ಒತ್ತಾಯಿಸಿ ಡಿಜಿಗೆ ಕಾಂಗ್ರೆಸ್ ದೂರು