ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಲಿಂಗದಹಳ್ಳಿ ಕೆರೆ ಕುಂಟೆಯಲ್ಲಿ ರೈತನ ಶವವೊಂದು ಪತ್ತೆಯಾಗಿದೆ.
ಲಿಂಗದಹಳ್ಳಿ ಗ್ರಾಮದ ನಿವಾಸಿ ಹನುಮಂತರೆಡ್ಡಿ (21) ಎಂಬ ರೈತನ ಮೃತದೇಹ ಇದಾಗಿದ್ದು, ಎತ್ತುಗಳಿಗೆ ಕೆರೆಕುಂಟೆಯಲಿ ನೀರು ಕುಡಿಸಲು ತೆರಳಿದಾಗ ಅವಘಡ ಸಂಭವಿಸಿದ ಎನ್ನಲಾಗಿದೆ.
ಲಿಂಗದಹಳ್ಳಿ ಗ್ರಾಮ ಹೊರವಲಯದ ಈ ಕೆರೆಕುಂಟೆಯಲಿ, ಕಳೆದ ಎರಡ್ಮೂರು ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ರೈತನಿಗಾಗಿ ಸತತವಾಗಿ ಹುಡುಕಾಟ ನಡೆಸಿದರೂ ಕೂಡ ಮೃತದೇಹ ಪತ್ತೆಯಾಗಿರಲಿಲ್ಲ.