ETV Bharat / state

ಈಟಿವಿ ಭಾರತ ಫಲಶೃತಿ.. ಪ್ರವಾಹ ಸಂತ್ರಸ್ತರನ್ನ ತಲುಪಿದ ಪರಿಹಾರ ಸಾಮಗ್ರಿಗಳು..

ಈಟಿವಿ ಭಾರತದ ವರದಿಯಿಂದ ಎಚ್ಚೆತ್ತ ಚಿಕ್ಕಮಗಳೂರು ಜಿಲ್ಲಾಡಳಿತ ಗೋದಾಮಿನಲ್ಲಿ ಕೊಳೆಯುತ್ತಿದ್ದ ಪ್ರವಾಹ ಸಂತ್ರಸ್ತರಿಗಾಗಿ ಸಂಗ್ರಹಿಸಿಟ್ಟಿದ್ದ ದಿನಬಳಕೆ ವಸ್ತುಗಳನ್ನ ಕೊನೆಗೂ ಅರ್ಹರಿಗೆ ತಲುಪಿಸುವ ಕೆಲಸ ಮಾಡಿದೆ.

ಪ್ರವಾಹ ಸಂತ್ರಸ್ತರನ್ನ ತಲುಪಿದ ಪರಿಹಾರ ಸಾಮಾಗ್ರಿಗಳು
author img

By

Published : Nov 16, 2019, 7:08 PM IST

ಚಿಕ್ಕಮಗಳೂರು: ಪ್ರವಾಹ ಸಂತ್ರಸ್ತರ ನೆರವಿಗಾಗಿ ನೀಡಿದ್ದ ಪರಿಹಾರ ಸಾಮಗ್ರಿಗಳು ವಾರ್ತಾ ಇಲಾಖೆ ಗೋದಾಮಿನಲ್ಲಿ ಕೊಳೆಯುತಿದ್ದ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ಇದೇ ವರದಿಯಿಂದ ಈಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಪ್ರವಾಹ ಸಂತ್ರಸ್ತರನ್ನ ತಲುಪಿದ ಪರಿಹಾರ ಸಾಮಗ್ರಿಗಳು..

ಈ ವರ್ಷದಲ್ಲಿ ಸುರಿದ ಭಾರಿ ಮಳೆಗೆ ಮಲೆನಾಡಿನ ಜನರು ಬೆಚ್ಚಿ ಬಿದ್ದಿದ್ದರು. ಎಲ್ಲವನ್ನೂ ಕಳೆದುಕೊಂಡು ಜೀವ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲಿ ಊರು ತೊರೆದಿದ್ದರು. ಮಲೆನಾಡಿಗರ ನೋವಿಗೆ ಕರಗಿದ ಕನ್ನಡಿಗರ ಜೀವ ತಮ್ಮ ಕೈಲಾದ ಸಹಾಯ ಮಾಡಿದ್ದರು. ಆದರೆ, ರಾಜ್ಯದ ಮೂಲೆ-ಮೂಲೆಗಳಿಂದ ಬಂದ ನೆರವನ್ನು ಸಂತ್ರಸ್ತರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿತ್ತು.

ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ವಾರ್ತಾ ಇಲಾಖೆ ಗೋದಾಮಿನಲ್ಲಿ ರಾಶಿ-ರಾಶಿ ಪರಿಹಾರ ಸಾಮಗ್ರಿಗಳು ಹುಳು ತಿನ್ನುತ್ತಿದ್ದವು. ನಾಲ್ಕು ತಿಂಗಳಾಗಿದ್ದರೂ ನೆರವನ್ನು ನಿರಾಶ್ರಿತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದರು.

ಈ ಕುರಿತು ಈಟಿವಿ ಭಾರತ ಸುದ್ದಿ ಪ್ರಸಾರ ಮಾಡಿ, ಅಧಿಕಾರಿಗಳ ಕಣ್ಣು ತೆರೆಸುವ ಕೆಲಸ ಮಾಡಿತ್ತು. ಈ ಸುದ್ದಿ ಬಂದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ವಾರ್ತಾ ಇಲಾಖೆಯ ಗೋದಾಮಿನಲ್ಲಿರಿಸಿದ್ದ ವಸ್ತುಗಳನ್ನು ಹೊರ ತೆಗೆದಿದೆ. ಎಲ್ಲಾ ವಸ್ತುಗಳನ್ನು ಲಾರಿಯಲ್ಲಿ ತುಂಬಿಸಿ ನಿರಾಶ್ರಿತರಿಗೆ ನೀಡುವ ಕೆಲಸಕ್ಕೆ ಕೈಹಾಕಿದೆ. ಈ ಮೂಲಕ ಈಟಿವಿ ಭಾರತ ವರದಿಯಿಂದ ಸಹೃದಯಿ ಕನ್ನಡಿಗರು ನೀಡಿದ್ದ ಪರಿಹಾರ ಸಾಮಗ್ರಿಗಳು ಪ್ರವಾಹ ಸಂತ್ರಸ್ತರಿಗೆ ತಲುಪಿವೆ.

Intro:Kn_Ckm_02_Etv_Bharat_Impact_av_7202347Body:ಚಿಕ್ಕಮಗಳೂರು :-

ಇದು ಈಟಿವಿ ಭಾರತ್ ಫಲಶೃತಿ ಹೌದು ಈ ವರ್ಷದ ಮಳೆ ಜನರನ್ನು ಹೇಗೆ ಮಾಡಿದೇ ಅಂದರೇ ಅಬ್ಬಾ ಈ ರೀತಿ ಮಾತ್ರ ಮತ್ತೆ ಲೈಫಲ್ಲಿ ಇಂತಾ ಮಳೆ ನೋಡಿಲ್ಲ ಅನ್ನುವಷ್ಟು. ಈ ಮಹಾ ಮಳೆ ಜನರ ಕಣ್ಣಲ್ಲಿ ಖುಷಿ ತಂದಿದ್ದಕ್ಕಿಂತ ಕಣ್ಣೀರು ತರಸಿದ್ದೇ ಹೆಚ್ಚು. ಜೀವಮಾನದಲ್ಲಿ ಮಳೆ ಕಂಡು ಮಲೆನಾಡಿನ ಜನರು ಬೆಚ್ಚಿ ಬಿದ್ದಿದ್ದರು. ಎಲ್ಲವನ್ನೂ ಕಳೆದುಕೊಂಡು ಜೀವ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲಿ ಊರು ತೊರೆದಿದ್ದರು. ಮಲೆನಾಡಿಗರ ನೋವಿಗೆ ಕರಗಿದ ಕನ್ನಡಿಗರ ಜೀವ ತಮ್ಮ ಕೈಲಾದ ಸಹಾಯ ಮಾಡಿದ್ದರು. ಆದರೇ ರಾಜ್ಯದ ಮೂಲೆ-ಮೂಲೆಗಳಿಮದ ಬಂದ ನೆರವನ್ನು ಸಂತ್ರಸ್ಥರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಮಗ್ಗಲಲ್ಲೇ ಇರೋ ವಾರ್ತಾ ಇಲಾಖೆ ಗೋದಾಮಿನಲ್ಲಿ ರಾಶಿ-ರಾಶಿ ಪರಿಹಾರ ಸಾಮಗ್ರಿಗಳನ್ನು ಹುಳ ತಿನ್ನಸುತ್ತಿತ್ತು.. ಪ್ರವಾಹ ಕಳೆದು ನಾಲ್ಕು ತಿಂಗಳಾಗಿದ್ದರೂ ನೆರವನ್ನು ನಿರಾಶ್ರಿತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದರು.

ಈ ಕುರಿತು ಈ ಟಿವಿ ಭಾರತ್ ಸುದ್ದಿ ಪ್ರಸಾರ ಮಾಡಿತ್ತು. ಅಧಿಕಾರಿಗಳ ಕಣ್ಣು ತೆರೆಸುವ ಕೆಲಸ ಮಾಡಿತ್ತು. ಈ ಸುದ್ದಿ ಬಂದ ಬೆನ್ನಲೆ ಕೂಡಲೇ ಎಚ್ಚೇತ್ತು ಕೊಂಡಿರುವ ಜಿಲ್ಲಾಡಳಿತ ಇಂದೂ ವಾರ್ತ ಇಲಾಖೆಯ ಗೋಧಾಮಿನಲ್ಲಿ ಬೀಗ ಹಾಕಿ ಇಟ್ಟಿದ್ದಂತಹ ಸಾರ್ವಜನಿಕರು ನೀಡಿದ್ದ ವಸ್ತುಗಳನ್ನು ಹೊರ ತೆಗೆಯ ತೊಡಗಿದೆ. ಎಲ್ಲಾ ವಸ್ತುಗಳನ್ನು ಲಾರಿಯಲ್ಲಿ ತುಂಬಿಸಿ ನಿರಾಶ್ರಿತರಿಗೆ ನೀಡುವ ಕೆಲಸಕ್ಕೆ ಕೈ ಹಾಕಿದ್ದು ಇಂದೂ ಮಧ್ಯಾಹ್ನ ವಾರ್ತ ಇಲಾಖೆಯ ಮುಂಭಾಗಕ್ಕೆ ವಾಹವನ್ನು ತೆಗೆದುಕೊಂಡು ಬಂದ ಅಧಿಕಾರಿಗಳು ಎಲ್ಲಾ ವಸ್ತುಗಳನ್ನು ತುಂಬಿ ನಿರಾಶ್ರಿತರಿಗೆ ಕೊಡುವ ಕೆಲಸಕ್ಕೆ ಮುಂದಾಗಿದೆ. ಕೊನೆಗೂ ಈ ಟಿವಿ ಭಾರತ್ ವರದಿಗೆ ಎಚ್ಚೇತ್ತು ಕೊಂಡಿರುವ ಜಿಲ್ಲಾಡಳಿತ ಎಲ್ಲವನ್ನೂ ಕಳೆದುಕೊಂಡತಹ ನಿರಾಶ್ರಿತರಿಗೆ ಸಾರ್ವಜನಿಕರು ನೀಡಿದ ವಸ್ತುಗಳನ್ನು ತಲುಪಿಸುವ ಕೆಲಸ ಮಾಡುತ್ತಿದೆ....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.