ಚಿಕ್ಕಮಗಳೂರು : ಇಷ್ಟು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಹಾಗೂ ಮಲೆನಾಡು ಭಾಗದ ಕಾಫಿ ತೋಟಗಳಲ್ಲಿ ಕಾಣಿಸುತ್ತಿದ್ದ ಕಾಡಾನೆಗಳು ಈಗ ನಗರದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭ ಮಾಡಿವೆ.
ಚಿಕ್ಕಮಗಳೂರು-ಮೂಡಿಗೆರೆಗೆ ಹೋಗುವ ರಸ್ತೆಯಲ್ಲಿರುವ ಕಾಫಿ ಸಾಮ್ರಾಟ್ ದಿ. ಸಿದ್ದಾರ್ಥ್ ಹೆಗಡೆ ಅವರ ಕಾಫಿ ಡೇ ಕಂಪನಿಯಲ್ಲಿ ಈ ಕಾಡಾನೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ನಗರದ ಮುಖ್ಯ ರಸ್ತೆಯಲ್ಲಿಯೇ ಈ ಕಾಡಾನೆ ಸಂಚಾರ ಮಾಡಿ, ಸಾರ್ವಜನಿಕರನ್ನು ಭಯಭೀತಗೊಳಿಸಿದ್ದು, ನಂತರ ರೋಡ್ ಕ್ರಾಸ್ ಮಾಡಿ ನೇರವಾಗಿ ಕಾಫಿ ಡೇ ಕಂಪನಿ ಒಳಗಡೆ ಪ್ರವೇಶ ಮಾಡಿದೆ.
![Elephant found, Elephant found in Late Siddharth Hegde Coffee Day Company, Chikkamagaluru news, ಕಾಡಾನೆ ಪ್ರತ್ಯಕ್ಷ, ದಿವಂಗತ ಸಿದ್ದಾರ್ಥ್ ಹೆಗಡೆ ಕಾಫಿ ಡೇ ಕಂಪನಿಯಲ್ಲಿ ಕಾಡಾನೆ ಪ್ರತ್ಯಕ್ಷ](https://etvbharatimages.akamaized.net/etvbharat/prod-images/kn-ckm-01-elephant-coffe-day-av-7202347_12072021103318_1207f_1626066198_1053.jpg)
ಕಾಡಾನೆ ಕಾಫೀ ಡೇ ಕಂಪನಿಯಲ್ಲಿ ಸುತ್ತು ಹಾಕಿದೆ. ಇದನ್ನು ಕಂಡು ಕೆಲಸ ಮಾಡುವ ಕಾರ್ಮಿಕರಲ್ಲಿಯೂ ಆತಂಕ ಮನೆ ಮಾಡಿದೆ. ಇಷ್ಟು ದಿನಗಳ ಕಾಲ ಕಾಫಿತೋಟ, ಕಾಡಂಚಿನ ಪ್ರದೇಶದಲ್ಲಿ ಕಾಣಿಸುತ್ತಿದ್ದ ಕಾಡಾನೆಗಳು ನಗರದಲ್ಲಿಯೇ ಕಾಣಿಸಿರುವುದು ಜನರನ್ನು ಭಯಭೀತಗೊಳಿಸುತ್ತಿದೆ.