ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದೆ. ಆನೆಗಳ ಹಾವಳಿಯಿಂದ ಸ್ಥಳೀಯರು ಸುಸ್ತಾಗಿದ್ದಾರೆ.
ನಾಡಿಗೆ ಬಂದ ಗಜ ಪಡೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಹಿಮ್ಮೆಟ್ಟಿಸಿದ್ದರು. ಆದರೆ, ಆನೆಗಳು ಪದೇಪದೇ ವಾಪಸ್ ಬಂದು ಮೂಡಿಗೆರೆ ತಾಲೂಕಿನ ಬಾನಳ್ಳಿ ಸುತ್ತಮುತ್ತ ದಾಂಧಲೆ ಮಾಡುತ್ತಿವೆ. ಎಲ್ಲೆಂದರಲ್ಲಿ ನುಗ್ಗಿ ಕಾಫಿ, ಬಾಳೆ ಸೇರಿದಂತೆ ಇತರೆ ಬೆಳೆಗಳನ್ನ ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಆನೆಗಳು ರಸ್ತೆ ದಾಟಿ ಮತ್ತೊಂದು ತೋಟಕ್ಕೆ ನುಗ್ಗುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.