ETV Bharat / state

Human-Wildlife conflict: ಮಾನವ-ಪ್ರಾಣಿ ಸಂಘರ್ಷ- ಚಿಕ್ಕಮಗಳೂರಲ್ಲಿ ಹೆಚ್ಚುತ್ತಿದೆ ಆನೆಗಳ ಸಾವಿನ ಸಂಖ್ಯೆ

ಹಿಂದೂ ಸಮಾಜದಲ್ಲಿ ಆನೆಗಳಿಗೆ ಪೂಜನೀಯ ಸ್ಥಾನವಿದೆ. ಮಠ-ಮಂದಿರಗಳಲ್ಲಿ ಅವುಗಳಿಗೆ ವಿಶೇಷ ಗೌರವಾದರವಿದೆ. ಇಂತಹ ಗಜಪಡೆಗೆ ಈಗ ರಕ್ಷಣೆ ಇಲ್ಲದಂತಾಗಿದೆ. ಕಳೆದ 10 ವರ್ಷಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 15 ಆನೆಗಳು ಸಾವನ್ನಪ್ಪಿವೆ ಅನ್ನೋದು ಆಘಾತಕಾರಿ ಸಂಗತಿ.

chikkamagaluru
ಚಿಕ್ಕಮಗಳೂರಲ್ಲಿ ಹೆಚ್ಚುತ್ತಿರುವ ಆನೆಗಳ ಸಾವಿನ ಸಂಖ್ಯೆ
author img

By

Published : Dec 10, 2021, 8:50 AM IST

ಚಿಕ್ಕಮಗಳೂರು: ಆನೆ ಇದ್ರೂ ಸಾವ್ರ, ಸತ್ರೂ ಸಾವ್ರ ಅಂತಾರೆ. ಆದ್ರೆ, ಆನೆ ಗಣತಿಗಾಗಿ ಪ್ರತಿ ವರ್ಷ ಕೋಟ್ಯಂತರ ಹಣ ಖರ್ಚು ಮಾಡುವ ಸರ್ಕಾರಗಳು ಆನೆಗಳ ಉಳಿವಿಗೆ ಮುಂದಾಗಿಲ್ಲ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 8-10 ವರ್ಷಗಳಲ್ಲಿ 10-15 ಆನೆಗಳು ಸಾವನ್ನಪ್ಪಿವೆ. ಅವುಗಳಲ್ಲಿ ಬಹುತೇಕ ಗಂಡಾನೆಗಳೇ. ಆನೆಗಳನ್ನು ಸಂರಕ್ಷಿಸಲು ಅತ್ತ ಸರ್ಕಾರವೂ ಮುಂದಾಗುತ್ತಿಲ್ಲ, ಇತ್ತ ಜನರು ಕೂಡ ಮನಸ್ಸು ಮಾಡ್ತಿಲ್ಲ. ಕಾಡುಪ್ರಾಣಿಗಳು ಹಾಗು ಮಾನವ ಸಂಘರ್ಷದಲ್ಲಿ ಇಬ್ಬರೂ ಸಾಯುತ್ತಿದ್ದಾರೆ. ಇದೇ ವೇಳೆ, ಅರಣ್ಯಾಧಿಕಾರಿಗಳು ಪ್ರಾಣಿಗಳ ಸಾವಿಗೆ ಕಾರಣರಾಗಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಹಿಂದೂ ಸಮಾಜದಲ್ಲಿ ಆನೆಗಳಿಗೆ ಪೂಜನೀಯ ಸ್ಥಾನವಿದೆ. ಅವುಗಳನ್ನು ಈಗಲೂ ಮಠ-ಮಂದಿರಗಳಲ್ಲಿಟ್ಟುಕೊಂಡು ಆರಾಧಿಸಲಾಗುತ್ತಿದೆ. ಇಂತಹ ಗಜಪಡೆಗೆ ಈಗಂತೂ ರಕ್ಷಣೆ ಇಲ್ಲವೇ?. ಕಳೆದ 10 ವರ್ಷಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 15 ಆನೆಗಳು ಸಾವನ್ನಪ್ಪಿವೆ. ಅವುಗಳಲ್ಲಿ ಸುಮಾರು 8-9 ಆನೆಗಳು ವಿದ್ಯುತ್‌ ಶಾಕ್‍ನಿಂದ ಮೃತಪಟ್ಟಿವೆ.

ಹೊಲ-ಗದ್ದೆಗಳಲ್ಲಿ ಬೆಳೆ ನಾಶ ಮಾಡುತ್ತವೆ ಎಂದು ರೈತರು ಜಮೀನಿಗೆ ಅಳವಡಿಸಿರುವ ವಿದ್ಯುತ್ ತಂತಿಗೆ ಸಿಕ್ಕಿ ಅವುಗಳು ಪ್ರಾಣ ಕಳೆದುಕೊಳ್ತಿವೆ. ಆನೆಗಳ ಕಳೇಬರವನ್ನು ಅರಣ್ಯ ಇಲಾಖೆಯವರು ದಫನ ಮಾಡ್ತಾರೆ. ಇತ್ತ ಜಮೀನು ಮಾಲೀಕರು ನಾಪತ್ತೆ ಆಗ್ತಾರೆ. ಇಲ್ಲವೇ ಜಾಮೀನು ಪಡೆದು ಆಚೆ ಬರ್ತಾರೆ. ಈ ಪ್ರಕ್ರಿಯೆ ನಿರಂತರವಾಗಿದೆ. ಈಗ ಆಗಬೇಕಿರುವುದು ಕಾಡುಪ್ರಾಣಿಗಳ ಪ್ರಾಣ ಉಳಿಸುವ ಕೆಲಸ. ಹಾಗಾಗಿ, ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಾಣಿಗಳನ್ನು ಸಾಯಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಜನರು ಹೇಳುವುದೇನು?:

ಮಾನವ-ಪ್ರಾಣಿ ಸಂಘರ್ಷಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರಣ ಎಂಬ ಅಪವಾದಕ್ಕೆ ದಶಕಗಳ ಇತಿಹಾಸ ಇದೆ. ಅಧಿಕಾರಿಗಳು ಅರಣ್ಯದ ಗಡಿಯನ್ನು ಸಮರ್ಪಕವಾಗಿ ಗುರುತಿಸಿ, ಆನೆ ಕಾರಿಡಾರ್ ಯೋಜನೆಯ ಮೂಲಕ ಅರಣ್ಯದ ಗಡಿಯಲ್ಲಿ ಆನೆಗಳು ಹೊಲ-ಗದ್ದೆ-ತೋಟಗಳು, ಗ್ರಾಮಗಳಿಗೆ ಬರದಂತೆ ಸೂಕ್ತ ರೀತಿಯಲ್ಲಿ ಟ್ರಂಚ್ ನಿರ್ಮಿಸಿದರೆ ಬೆಳೆ ನಾಶವಾಗಲ್ಲ. ಆನೆ-ಮನುಷ್ಯರು ಸಾಯುವುದಿಲ್ಲ. ಆದರೆ, ಅರಣ್ಯ ಇಲಾಖೆ ಆ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಎಂಬುವುದು ಗ್ರಾಮಸ್ಥರ ಆರೋಪ.

ಇದನ್ನೂ ಓದಿ: ಹವಾಮಾನ ವೈಪರೀತ್ಯ: ಹುಬ್ಬಳ್ಳಿಯಲ್ಲಿ ತಡವಾಗಿ ಲ್ಯಾಂಡ್‌ ಆದ ಸಿಎಂ ಪ್ರಯಾಣಿಸುತ್ತಿದ್ದ ವಿಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.