ಚಿಕ್ಕಮಗಳೂರು: ಜಿಲ್ಲೆಯ ಹಳೆ ಮೂಡಿಗೆರೆಯ ಕಾಫಿ ತೋಟವೊಂದಕ್ಕೆ ಸುಮಾರು 23ಕ್ಕೂ ಅಧಿಕ ಕಾಡಾನೆಗಳು ಲಗ್ಗೆ ಇಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಕೃಷ್ಣೇಗೌಡ ಎಂಬುವವರ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಗಜಪಡೆ ಕಾಫಿ, ಅಡಿಕೆ, ಕಾಳು ಮೆಣಸು, ಬಾಳೆ ಬೆಳೆಯನ್ನು ನಾಶಗೊಳಿಸಿವೆ.
ಏಕಾಏಕಿ ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳಿಂದ ಭಯಭೀತರಾದ ಸ್ಥಳೀಯರು ಅರಣ್ಯ ಇಲಾಖೆಯ ಮೊರೆ ಹೋಗಿದ್ದು, ಪರಿಣಾಮ ಸ್ಥಳಕ್ಕೆ ಆಗಮಿಸಿರುವ ಮೂವತ್ತಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಗಜಪಡೆಗಳನ್ನು ಓಡಿಸುವ ಪ್ರಯತ್ನದಲ್ಲಿ ನಿರತರಾದರು.