ETV Bharat / state

ಕಾಫಿ ನಾಡಲ್ಲಿ ಈದ್​ ಮಿಲಾದ್​ ಸಂಭ್ರಮಾಚರಣೆ: ಬೃಹತ್​ ಮೆರವಣಿಗೆ - ಲೆಟೆಸ್ಟ್ ಈದ್ ಮಿಲಾದ್ ನ್ಯೂಸ್

ಕಾಫಿ ನಾಡು ಚಿಕ್ಕಮಗಳೂರಲ್ಲಿ ಪ್ರವಾದಿ ಮಹಮದ್ ಪೈಗಂಬರ್ ಅವರ 1494ನೇ ಜನ್ಮ ದಿನದ ಅಂಗವಾಗಿ ಮುಸ್ಲಿಂರಿಂದ ಈದ್ ಮಿಲಾದ್ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.

ಬೃಹತ್​ ಮೆರವಣಿಗೆ ಮೂಲಕ ಕಾಫಿನಾಡಿನಲ್ಲಿಈದ್ ಮಿಲಾದ್ ಸಂಭ್ರಮಾಚರಣೆ
author img

By

Published : Nov 10, 2019, 8:03 PM IST

Updated : Nov 10, 2019, 8:14 PM IST

ಚಿಕ್ಕಮಗಳೂರು: ಪ್ರವಾದಿ ಮಹಮದ್ ಪೈಗಂಬರ್ ಅವರ 1494ನೇ ಜನ್ಮ ದಿನದ ಅಂಗವಾಗಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಬೃಹತ್​ ಮೆರವಣಿಗೆ ಮೂಲಕ ಕಾಫಿನಾಡಿನಲ್ಲಿ ಈದ್ ಮಿಲಾದ್ ಸಂಭ್ರಮಾಚರಣೆ

ನಗರದಲ್ಲಿ 15 ಸಾವಿರಕ್ಕೂ ಅಧಿಕ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಂಡೇ ಛತ್ರದಿಂದ ಎಮ್.ಜಿ ರಸ್ತೆಯ ಮೂಲಕ ಸಾಗಿ ತೊಗರಿಹಂಕಲ್ ಸರ್ಕಲ್ ತಲುಪಿ ಐ.ಜಿ ರಸ್ತೆಯ ಮೂಲಕ ಹನುಮಂತಪ್ಪ ವೃತ್ತ, ನಂತರ ಮತ್ತೆ ಎಂ.ಜಿ ರಸ್ತೆಯ ಮೂಲಕ ಸಾಗಿ ಅಂಡೇ ಛತ್ರದಲ್ಲಿ ಮೆರವಣಿಗೆಯನ್ನು ಅಂತಿಮಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಯುವಕರು ಕುಣಿದು ಕುಪ್ಪಳಿಸಿದರು.

ಮೆರವಣಿಗೆ ನಡೆಯುವಾಗ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೋಲಿಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Intro:Kn_Ckm_02_ED_Milad_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ 1494 ನೇ ಜನ್ಮ ದಿನದ ಅಂಗವಾಗಿ ಮುಸ್ಲಿಂ ರಿಂದ ಈದ್ ಮಿಲಾದ್ ಹಬ್ಬ ತುಂಬಾ ಸಂಭ್ರಮ ಮತ್ತು ಸಡಗರದಿಂದಾ ಆಚರಣೆ ಮಾಡಲಾಯಿತು. ಇಂದೂ ನಗರದಲ್ಲಿ 15 ಸಾವಿರಕ್ಕೂ ಅಧಿಕ ಮುಸ್ಲಿಂ ರು ಬೃಹತ್ ಮೆರವಣಿಗೆ ಮಾಡುವುದರ ಮೂಲಕ ಹಬ್ಬವನ್ನು ತುಂಬಾ ಸಂಭ್ರಮ, ಸಡಗರದಿಂದಾ ಆಚರಣೆ ಮಾಡಿದರು. ಮೊದಲು ಅಂಡೇ ಚತ್ರದಿಂದಾ ಪ್ರಾರಂಭವಾದ ಮೆರವಣಿಗೆ ಎಮ್ ಜಿ ರಸ್ತೆಯ ಮೂಲಕ ಸಾಗಿ ತೊಗರಿಹಂಕಲ್ ಸರ್ಕಲ್ ತಲುಪಿ ಐ ಜಿ ರಸ್ತೆಯ ಮೂಲಕ ಹನುಮಂತಪ್ಪ ವೃತ್ತ ತಲುಪಿ. ನಂತರ ಮತ್ತೆ ಎಂ ಜಿ ರಸ್ತೆಯ ಮೂಲಕ ಸಾಗಿ ಅಂಡೇ ಚತ್ರದಲ್ಲಿ ಮೆರವಣಿಗೆಯನ್ನು ಅಂತಿಮ ಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸುವುದರ ಮೂಲಕ ಹಬ್ಬವನ್ನು ವಿಜೃಂಭಣೆಯಲ್ಲಿ ಆಚರಣೆ ಮಾಡಿದ್ದು ವಿಶೇಷವಾಗಿತ್ತು. ನಗರದ ಪ್ರಮುಖ ರಸ್ತೆಯಲ್ಲಿ ಸಾಗಿದ ಮೆರವಣಿಗೆಯಲ್ಲಿ ಹಸಿರು ಬಾವುಟಗಳು ರಾರಾಜಿಸುತ್ತಿದ್ದು ತುಂಬಾ ವಿಶೇಷವಾಗಿದ್ದು ನಗರ ಸಂಪೂರ್ಣ ಹಸಿರು ಮಯವಾದಂತಹ ರೀತಿಯಲ್ಲಿ ಕಾಣಿಸುತ್ತಿತ್ತು. ಮೆರವಣಿಗೆ ನಡೆಯುವಾಗ ಯಾವುದೇ ರೀತಿಯಾ ಅಹಿತಕರ ಘಟನೆ ನಡೆಯದಂತೆ ಪೋಲಿಸರಿಂದ ಬಿಗಿ ಪೋಲಿಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದ್ದು. ಈದ್ ಮಿಲಾದ್ ಮೆರವಣಿಗೆಯಲ್ಲಿ ‌15 ಸಾವಿರಕ್ಕೂ ‌ಅಧಿಕ ಸಂಖ್ಯೆಯಲ್ಲಿ ಮುಸ್ಲಿಂಮರು ಭಾಗಿಯಾಗುವ ಹಿನ್ನಲೆ ನಗರದ ಸೂಕ್ಷ್ಮ, ಅತಿಸೂಕ್ಷ್ಮ‌, ಪ್ರದೇಶದಲ್ಲಿ ಪೋಲಿಸರ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕಣ್ಗಾವಲು ಹಾಕಿದ್ದು ರಸ್ತೆಯುದ್ದಕ್ಕೂ ಪೋಲಿಸರು ಗಸ್ತು ತಿರುಗೋದು ಸಾಮಾನ್ಯವಾಗಿತ್ತು. ನಗರದಲ್ಲಿ ಬಿಗಿ ಕಟ್ಟೇಚ್ಚರವನ್ನು ಜಿಲ್ಲಾ ಪೋಲಿಸ್ ಇಲಾಖೆ ವಹಿಸಿತ್ತು.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
Last Updated : Nov 10, 2019, 8:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.