ಚಿಕ್ಕಮಗಳೂರು: ನಾವು ಶ್ರೀರಾಮಚಂದ್ರನ ಮೊಮ್ಮಕ್ಕಳು ಎಂದು ಹೇಳಿಕೊಳ್ಳಲು ಬಿಜೆಪಿ ಅವರಿಗೆ ನಾಚಿಕೆ ಆಗಲ್ವಾ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮೊದಲ ಬಾರಿ ಗೆದ್ದಾಗ 3 ಮುಖ್ಯಮಂತ್ರಿ, 3 ಪಕ್ಷಗಳಾಗಿ ವಿಭಜನೆಯಾಯ್ತು. ಈ ಮುಖ್ಯಮಂತ್ರಿಯೂ ಬದಲಾಗ್ತಾರೆ ಅನ್ನೋ ಮುನ್ಸೂಚನೆಯನ್ನ ಈಶ್ವರಪ್ಪ ಹೇಳಿದ್ದಾರೆ. ಇದು ಈಶ್ವರಪ್ಪ ಬಾಯಲ್ಲಿ ಬಂದ ಮಾತಲ್ಲ, ವರಿಷ್ಠರ ಬಾಯಿಂದ ಬಂದಿರೋ ಮಾತು.
ಕಟೀಲ್, ಈಶ್ವರಪ್ಪ, ಸಿ.ಟಿ ರವಿ ಮೇಲಿಂದ ಬಂದ ಮಾತನ್ನ ಹೇಳ್ತಾರೆ. ಬಿಜೆಪಿಯಲ್ಲಿ ಎರಡನೇ ಮುಖ್ಯಮಂತ್ರಿಯೂ ಬದಲಾವಣೆ ಆಗುತ್ತಾರೆ. ಈಶ್ವರಪ್ಪ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಈಶ್ವರಪ್ಪನವರೇ ವರ್ಷವಾದರೂ ತಾಪಂ, ಜಿಪಂ ಎಲೆಕ್ಷನ್ ಏಕೆ ಮಾಡಿಲ್ಲ, ಅವರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಸಂಸತ್ನಲ್ಲಿ ಮಾಧ್ಯಮಗಳಿಗೆ ಕೇಂದ್ರದ ನಿರ್ಬಂಧ.. ರಾಜ್ಯಸಭಾ ಅಧ್ಯಕ್ಷರಿಗೆ ಖರ್ಗೆ ಪತ್ರ