ETV Bharat / state

ಚಿಕ್ಕಮಗಳೂರು: ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ, ಹಲವು ಪ್ರಯಾಣಿಕರಿಗೆ ಗಾಯ - ಧರ್ಮಸ್ಥಳ ಶೌರ್ಯ ವಿಪತ್ತು ತಂಡ

ಬೆಂಗಳೂರಿನಿಂದ ಚಿಕ್ಕಮಗಳೂರು ಮಾರ್ಗವಾಗಿ ಮೂಡಿಗೆರೆ ಕಡೆಗೆ ಬರುತ್ತಿದ್ದ ಬಸ್​ ಅಪಘಾತಕ್ಕೀಡಾಗಿದೆ.

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಸ್
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಸ್
author img

By ETV Bharat Karnataka Team

Published : Oct 29, 2023, 1:03 PM IST

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಹಲವರಿಗೆ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಬಿಳಗುಳ ಬಳಿ ನಡೆದಿದೆ. ಕಾವೇರಿ ಹೆಸರಿನ ಬಸ್ ಮುಂಭಾಗ ಜಖಂಗೊಂಡಿದೆ.

ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರತಿದಿನ ಬೆಂಗಳೂರು ಮತ್ತು ಮೂಡಿಗೆರೆ ಕೊಟ್ಟಿಗೆಹಾರ ನಡುವೆ ಸಂಚರಿಸುವ ಬಸ್ ಇಂದು ಮುಂಜಾನೆ ಬೆಂಗಳೂರಿನಿಂದ ಹಾಸನ, ಚಿಕ್ಕಮಗಳೂರು ಮಾರ್ಗವಾಗಿ ಮೂಡಿಗೆರೆ ಕಡೆಗೆ ಬರುತ್ತಿದ್ದಂತೆ ಅವಘಡ ಸಂಭವಿಸಿದೆ. ಒಂದೇ ಸ್ಥಳದಲ್ಲಿ ಎರಡು ವಿದ್ಯುತ್ ಕಂಬಗಳಿದ್ದು ಎರಡೂ ಕಂಬಗಳಿಗೂ ಬಸ್ ಗುದ್ದಿದೆ. ಸುದೈವವಶಾತ್ ವಿದ್ಯುತ್​ ಪ್ರವಹಿಸಿಲ್ಲ.

ಬೆಳಗಿನ ಜಾವ ಆಗಿದ್ದರಿಂದ ಮಂಜು ಕವಿದ ವಾತಾವರಣ ಅಥವಾ ಚಾಲಕ ನಿದ್ರೆಯ ಮಂಪರಿನಿಂದ ಬಸ್​ ನಿಯಂತ್ರಣ ತಪ್ಪಿ ಘಟನೆ ನಡೆದಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಮೂಡಿಗೆರೆ ಘಟಕದ ಸದಸ್ಯರು ಮತ್ತು ಮೂಡಿಗೆರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

ಆಗುಂಬೆ ಘಾಟಿಯಲ್ಲಿ ತಡೆಗೋಡೆಗೆ ಬಸ್ ಡಿಕ್ಕಿ: ಬೆಂಗಳೂರಿನಿಂದ ಪ್ರವಾಸ ಬಂದಿದ್ದ ಶಾಲಾ ವಾಹನವೊಂದು ಶೃಂಗೇರಿಯಿಂದ ಕೊಲ್ಲೂರಿಗೆ ಸಂಚರಿಸುತ್ತಿದ್ದಾಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಘಾಟಿ ತಿರುವಿನಲ್ಲಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದು, ಅರ್ಧ ಬಸ್​ ಮುಂದಕ್ಕೆ ಹೋಗಿದೆ. ಅಲ್ಲಿಯೇ ಬಸ್ ನಿಂತಿದ್ದರಿಂದ ಯಾವುದೇ ಹೆಚ್ಚಿನ ಅಪಾಯವಾಗಿಲ್ಲ. ಸ್ಥಳೀಯರು ಬಸ್‌ನಲ್ಲಿದ್ದವರನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿದ್ದಾರೆ. ಕ್ರೇನ್ ಬಳಸಿ ಶಾಲಾ ಬಸ್​ ಅನ್ನು ಮೇಲೆ ತೆಗೆಯಲಾಗಿದೆ.

ಇದನ್ನೂ ಓದಿ: ಬೈಕ್‌ಗೆ ಬಿಎಂಟಿಸಿ ಬಸ್​ ಡಿಕ್ಕಿ; ಪತ್ನಿಯ ಸೀಮಂತ ಸಂಭ್ರಮದಲ್ಲಿದ್ದ ವ್ಯಕ್ತಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.