ETV Bharat / state

ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಕೋವಿಡ್​ ಸೋಂಕಿತ ಯುವಕ ಬಲಿ: ಸ್ಥಳೀಯರ ಆರೋಪ - Allegations of negligence of health department

ರಾತ್ರಿ ಯುವಕ ಮನೆಯಲ್ಲಿ ನರಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಮರುದಿನ ಮಧ್ಯಾಹ್ಯ ಆ್ಯಂಬುಲೆನ್ಸ್​ ಬಂದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.

Death of Chikkamagalur  Covid infected
ಆರೋಗ್ಯ ಇಲಾಖೆಗ ನಿರ್ಲಕ್ಷ್ಯಕ್ಕೆ ಕೋವಿಡ್​ ಸೋಂಕಿತ ಬಲಿ
author img

By

Published : Jul 27, 2020, 12:24 PM IST

ಚಿಕ್ಕಮಗಳೂರು: ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ತಡವಾಗಿ ಬಂದ ಹಿನ್ನೆಲೆ ಕೊರೊನಾ ಸೋಂಕಿತ ಯುವಕ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯ 32 ವರ್ಷದ ಯುವಕ ಮೃತಪಟ್ಟಿದ್ದು, ಇವರ ತಾಯಿ ಕಳೆದ ಐದು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಹೀಗಾಗಿ ಯುವಕ ಮತ್ತು ಅವರ ತಂದೆ ಕೊರೊನಾ ಪರೀಕ್ಷೆ ಮಾಡಿಸಿದ್ದರು. ಆದರೆ ವರದಿ ಬಂದಿರಲಿಲ್ಲ. ಈ ಮಧ್ಯೆ ಮೊನ್ನೆ ರಾತ್ರಿ ಯುವಕನಿಗೆ ಆರೋಗ್ಯದ ಸಮಸ್ಯೆ ಉಂಟಾಗಿತ್ತು. ಯುವಕ ಮನೆಯಲ್ಲಿ ನರಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಮರುದಿನ ಮಧ್ಯಾಹ್ಯ ಆ್ಯಂಬುಲೆನ್ಸ್​ ಬಂದಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇದೀಗ ಮೃತ ಯುವಕ ಮತ್ತು ಆತನ ತಂದೆಯ ಕೊರೊನಾ ವರದಿ ಪಾಸಿಟಿವ್ ಬಂದಿದೆ.

ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

ಯುವಕ ಅನಾರೋಗ್ಯದಿಂದ ಬಳಲುತ್ತಿರುವ ಬಗ್ಗೆ ರಾತ್ರಿಯೇ ಮಾಹಿತಿ ನೀಡಿದ್ದರೂ ಮರುದಿನ ಮಧ್ಯಾಹ್ಯ ಆ್ಯಂಬುಲೆನ್ಸ್​ ಬಂದಿದೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಯುವಕನ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಮೃತ ಯುವಕನ ತಂದೆ ಜಿಲ್ಲಾ ಕೋವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.