ETV Bharat / state

ದತ್ತಮಾಲೆ ಹಿನ್ನೆಲೆ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರ ಕಟ್ಟೆಚ್ಚರ - ಚಿಕ್ಕಮಗಳೂರು ದತ್ತ ಪೀಠ ಸುದ್ದಿ

ದತ್ತ ಜಯಂತಿ ಪ್ರಯುಕ್ತ ಡಿಸೆಂಬರ್ 9 ರಿಂದ 12 ರವರೆಗೆ ಚಿಕ್ಕಮಗಳೂರಿನಲ್ಲಿ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ​ ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್​
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್​
author img

By

Published : Dec 8, 2019, 9:12 PM IST

ಚಿಕ್ಕಮಗಳೂರು : ಇಲ್ಲಿನ ದತ್ತಾತ್ರೇಯ ಪೀಠದಲ್ಲಿ ಭಜರಂಗದಳ ಹಾಗೂ ವಿಎಚ್‍ಪಿ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿಗೆ ಕಾಫಿನಾಡಿನಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ ಎಂದು ಎಸ್.​ಪಿ. ಹರೀಶ್ ಪಾಂಡೆ ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್​ ಘೋಷಣೆ

ಡಿಸೆಂಬರ್ 9 ರಿಂದ 12 ರವರೆಗೆ ದತ್ತಪೀಠಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಗಳಾಗಬಾರದು ಎಂದು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಓರ್ವ ಎಸ್ಪಿ, ಮೂವರು ಅಡಿಷನಲ್ ಎಸ್ಪಿ, 10 ಡಿವೈಎಸ್​ಪಿ, 16 ಇನ್ಸ್​ಪೆಕ್ಟರ್, 120 ಸಬ್ ಇನ್ಸ್​ಪೆಕ್ಟರ್, 250 ಎಎಸ್​ಐ, 450 ಸಿಸಿಟಿವಿ, 35 ಚೆಕ್ ಪೊಸ್ಟ್, 4,000 ಕ್ಕೂ ಅಧಿಕ ಪೊಲೀಸರು ಜಿಲ್ಲಾದ್ಯಂತ ಕಚ್ಚೆಚ್ಚರ ವಹಿಸಿದ್ದಾರೆ. ಜೊತೆಗೆ 10 ಕೆಎಸ್​ಆರ್​ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಎಸ್​ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ದತ್ತಮಾಲಾ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

Intro:Kn_Ckm_03_Datta_jayanthi_high_allert_pkg_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನ ದತ್ತಾತ್ರೇಯ ಪೀಠದಲ್ಲಿ ಭಜರಂಗದಳ ಹಾಗೂ ವಿಎಚ್‍ಪಿ ವತಿಯಿಂದ ನಡೆಯುತ್ತಿರೋ ದತ್ತಜಯಂತಿಗೆ ಕಾಫಿನಾಡಿನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಡಿಸೆಂಬರ್ 9 ರಿಂದ 12 ರವರೆಗೆ ಕಾಫಿನಾಡಿನಾದ್ಯಂತ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ. ದತ್ತಫೀಠಕ್ಕೆ ಬರುವ ದತ್ತಾ ಭಕ್ತರಿಗೆ ಯಾವುದೇ ತೊಂದರೇ ಆಗಬಾರದು ಎಂದೂ ಜಿಲ್ಲಾಡಳಿತ ಅನೇಕ ಸವಲತ್ತುಗಳನ್ನು ನೀಡಿದೆ. ಈ ಕುರಿತ ಒಂದು ವರದಿ ಇಲ್ಲಿದೇ ನೋಡಿ....

ಹೌದು ಡಿಸೆಂಬರ್ 10,11 ,12 ರಂದು ಕಾಫಿನಾಡು ಅಕ್ಷರಶಃ ಬೂದಿಮುಚ್ಚಿದ ಕೆಂಡದಂತಿರಲಿದೆ. ಏಕೆಂದರೇ ದತ್ತ ಪೀಠದಲ್ಲಿ ದತ್ತ ಜಯಂತಿಯ ಸಂಭ್ರಮ. ಕಳೆದ ಎರಡು ವರ್ಷಗಳ ಹಿಂದೆ ಗೋರಿಗಳು ಧ್ವಂಸವಾದ ಕಾರಣ ಈ ಬಾರಿಯೂ ಜಿಲ್ಲಾಡಳಿತ ಜಿಲ್ಲೆ ಹಾಗೂ ದತ್ತಪೀಠದಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಸಾವಿರ ಪೊಲೀಸರನ್ನು ಹೆಚ್ಚಾಗಿ ನಿಯೋಜಿಸಿದೆ. ಡಿಸೆಂಬರ್ 10 ರಂದು ಸಾವಿರಾರು ಮಹಿಳೆಯರಿಂದ ಅನುಸೂಯ ಜಯಂತಿ ನಡೆದರೇ. 11 ರಂದು ಹತ್ತು ಸಾವಿರಕ್ಕು ಅಧಿಕ ಭಕ್ತರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. 12 ರಂದು 25 ರಿಂದ 30 ಸಾವಿರ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಭಕ್ತರು ಭಕ್ತಿಯಿಂದ ತಮ್ಮ ಕಾರ್ಯಕ್ರಮ ಮುಗಿಸಿಕೊಳ್ಳಬೇಕು. ಸಮಾಜದ ಶಾಂತಿ ಕದಡಿ, ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದರೇ ನಿರ್ಧಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಳ್ಳೋದಾಗಿ ಡಿಸಿ ಹಾಗೂ ಎಸ್ಪಿ ಖಡಕ್ಕಾಗಿ ಎಚ್ಚರಿಸಿದ್ದಾರೆ.ಅಲ್ಲದೆ ಮುಂಜ್ರಾಗತ ಕ್ರಮವಾಗಿ ಜಿಲ್ಲಾಡಳಿ ಪ್ರವಾಸಿ ತಾಣಗಳಾದ ಮುಳ್ಳಯ್ಯನ ಗಿರಿ, ದತ್ತಪೀಠಕ್ಕೆ 9 ರಿಂದ 12 ರತನಕ ಪ್ರವಾಸಿಗರಿಗೆ ನಿರ್ಬಂದ ಸೇರಿದಂತೆ 11 ಮತ್ತು 12 ರಂದು ನಗರದಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿಲಾಗಿದ್ದು ದತ್ತಜಯಂತಿಯದ್ದು ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಆದೇಶಿಸಿಸಲಾಗಿದೆ.

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಓರ್ವ ಎಸ್ಪಿ. ಮೂವರು ಅಡಿಷನಲ್ ಎಸ್ಪಿ. 10 ಡಿವೈಎಸ್ಪಿ, 16 ಇನ್ಸ್‍ಪೆಕ್ಟರ್, 120 ಸಬ್ ಇನ್ಸ್‍ಪೆಕ್ಟರ್. 250 ಎಎಸ್‍ಐ. 450 ಸಿ.ಸಿ. ಟಿವಿ ಜೊತೆ 35 ಚೆಕ್ ಪೊಸ್ಟ್ ಹಾಗೂ 4000 ಕ್ಕೂ ಅಧಿಕ ಪೊಲೀಸರು ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದ್ದಾರೆ. ಜೊತೆಗೆ 10 ಕೆಎಸ್‍ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಹಾಸನ, ಮಂಗಳೂರು, ಉಡುಪಿ, ಶಿವಮೊಗ್ಗ ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚುವರಿ ಪೊಲೀಸರನ್ನ ಕರೆಸಿಕೊಳ್ಳಲಿದ್ದು, ನಗರ ಸೇರಿದಂತೆ ಜಿಲ್ಲಾದ್ಯಂತ 35 ಚೆಕ್ ಪೋಸ್ಟ್ ತೆರೆದಿದ್ದಾರೆ. ಜಿಲ್ಲಾದ್ಯಂತ 450 ಕ್ಕೂ ಅಧಿಕ ಸಿಸಿ ಕ್ಯಾಮರಾ ಹಾಕಲಾಗಿದೆ. ಜಿಲ್ಲಾದ್ಯಂತ ಒಟ್ಟು 350 ಕ್ಕೂ ಅಧಿಕ ಜನರಿಂದ ಬಾಂಡ್ ಬರೆಸಿಕೊಂಡಿದ್ದು, ಹೊರಜಿಲ್ಲೆಗಳ ಭಕ್ತರಿಂದ ಬಾಂಡ್ ಬರೆಸಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಖಂಡರೇ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.

ಒಟ್ಟಾರೆಯಾಗಿ ಸೋಮವಾರ ದಿಂದ ಗುರುವಾರದವರೆಗೆ ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಭರ್ಜರಿಯಾಗಿ ನಡೆಯಲಿದ್ದು ಜಿಲ್ಲಾಡಳಿತ ಶ್ರದ್ಧಾ ಭಕ್ತಿಯಿಂದ ಶಾಂತಿಯುತವಾಗಿ ಪೂಜೆ-ಕೈಂಕರ್ಯಗಳನ್ನ ಮುಗಿಸಿಕೊಳ್ಳುವಂತೆ ಮನವಿ ಮಾಡಿದೆ....

byte:-1 ಡಾ.ಬಗಾದಿ ಗೌತಮ್......ಜಿಲ್ಲಾಧಿಕಾರಿ

byte:-2 ಹರೀಶ್ ಪಾಂಡೇ......ಜಿಲ್ಲಾ ಎಸ್ವಿ

Conclusion:ರಾಜಕುಮಾರ್......
ಈ ಟಿವಿ ಭಾರತ್.....
ಚಿಕ್ಕಮಗಳೂರು......
ETV Bharat Logo

Copyright © 2025 Ushodaya Enterprises Pvt. Ltd., All Rights Reserved.