ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ನಗರದ ಸುತ್ತಮುತ್ತ ಕಾಡಾನೆಗಳ ಹಾವಳಿ ಹಿನ್ನೆಲೆ ಮೈಸೂರಿನ ದಸರಾ ಉತ್ಸವದಲ್ಲಿ ಅಂಬಾರಿ ಹೊರುವ ಆನೆಗಳನ್ನು ನಗರಕ್ಕೆ ಕರೆಸಲಾಗಿದೆ. ತಾಲೂಕಿನ ಬೀಕನಹಳ್ಳಿ ಬಳಿ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ಚಿಕ್ಕಮಗಳೂರಿನ ಅರಣ್ಯ ಇಲಾಖೆ ಚಾಲನೆ ನೀಡಿದೆ.
ಅರ್ಜುನ, ಭೀಮಾ ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವಿಶೇಷ ಕಾರ್ಯಾಚರಣೆಗಾಗಿ ನಾಗರಹೊಳೆಯಿಂದ ಪರಿಣಿತ ತಂಡ ಆಗಮಿಸಿದ್ದು, ಕಾರ್ಯಾಚರಣೆಯಲ್ಲಿ 60 ಮಂದಿ ಸಿಬ್ಬಂದಿ ಭಾಗಿಯಾಗಿದ್ದಾರೆ. ಕಳೆದೆರಡು ತಿಂಗಳಿನಿಂದ ನಗರದ ಅಕ್ಕಪಕ್ಕದಲ್ಲಿ ಕಾಡಾನೆ ಸಂಚಾರ ನಡೆಸುತ್ತಿವೆ. ಬೀಕನಹಳ್ಳಿ, ಹಂಪಾಪುರ, ಭಾಗದಲ್ಲಿ ರೈತರ ಜಮೀನುಗಳಿಗೆ ನುಗ್ಗಿದ ಕಾಡಾನೆೆಗಳು ರೈತರ ಬೆಳೆಗಳನ್ನು ನಾಶಮಾಡಿದ್ದವು.
ಕಾಡಾನೆಗಳ ಉಪಟಳಕ್ಕೆ ಬೇಸತ್ತ ಈ ಭಾಗದ ರೈತರು ಶಾಶ್ವತ ಪರಿಹಾರಕ್ಕಾಗಿ ಅರಣ್ಯ ಇಲಾಖೆಯ ಮೊರೆ ಹೋಗಿದ್ದರು. ಈ ಹಿನ್ನೆಲೆ ಅರಣ್ಯ ಇಲಾಖೆ ಇಂದಿನಿಂದ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಆರಂಭಿಸಿದೆ.
ಇದನ್ನೂ ಓದಿ: ಕಾಫಿ ತೋಟದ ಕಾರ್ಮಿಕರನ್ನು ತುಳಿದು ಸಾಯಿಸದ ಒಂಟಿ ಸಲಗ!