ಚಿಕ್ಕಮಗಳೂರು: ದಲಿತ ಕೂಲಿ ಕಾರ್ಮಿಕರ ಗೃಹ ಬಂಧನ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಮೇಲೂ ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ.
ತೋಟದ ಮಾಲೀಕ ಜಗದೀಶ್ ಪತ್ನಿ ಕಾರ್ಮಿಕರ ವಿರುದ್ಧ ದೂರು ದಾಖಲು ಮಾಡಿದ್ದು, ಸೆಕ್ಷನ್ 427, 506,143,144,147,148,149, 448 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮನೆಗೆ ನುಗ್ಗಿ ಕೊಲೆ ಮಾಡಲು ಯತ್ನಿಸಿದ್ದು, ಮನೆಯ ಮುಂದಿದ್ದ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
![dalit workers assault case update](https://etvbharatimages.akamaized.net/etvbharat/prod-images/kn-ckm-04-aganist-complint-av-7202347_12102022220025_1210f_1665592225_928.jpg)
ಇದನ್ನೂ ಓದಿ: ದಲಿತ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ಗರ್ಭಪಾತವಾದ ಬಗ್ಗೆ ಮಾಹಿತಿ ಇಲ್ಲ ಎಂದ ಎಸ್ಪಿ
ಇನ್ನೊಂದೆಡೆ, ಜಗದೀಶ್ ಗೌಡ ಮತ್ತು ತಿಲಕ್ ಅವರನ್ನು ಬಂಧಿಸದ ಪೊಲೀಸರ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇಂದು ಬಾಳೆಹೊನ್ನೂರು ಚಲೋಗೆ ದಲಿತ ಸಂಘಟನೆ ಕರೆ ನೀಡಿದ್ದು, ದಲಿತ ಮಹಿಳೆಯ ಮೇಲೆ ಹಲ್ಲೆ, ಗೃಹ ಬಂಧನ, ಕಾರ್ಮಿಕರ ಮೇಲೆ ಕೇಸ್ ಹಾಕಿರುವುದು ಹಾಗೂ ಜಗದೀಶ್ ಗೌಡ ಅವರ ಬಂಧನ ಮಾಡದಿರುವುದನ್ನು ಖಂಡಿಸಿ ಚಲೋಗೆ ಕರೆ ನೀಡಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಮಾಲೀಕನಿಂದ ಗರ್ಭಿಣಿ ಮೇಲೆ ಹಲ್ಲೆ.. ಗರ್ಭಪಾತ